ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಾರೆಗಳು ಕಿರುಚಿತ್ರದಿಂದ ದೂರವಿರಲಿ’

Last Updated 19 ಜುಲೈ 2016, 19:30 IST
ಅಕ್ಷರ ಗಾತ್ರ

ಬಾಲಿವುಡ್‌ನಲ್ಲಿ ಜನಪ್ರಿಯತೆ ಗಳಿಸಿದ ನಟರು ಕಿರುಚಿತ್ರಗಳಲ್ಲಿ ನಟಿಸುವುದು ಈಗ ಒಂದು ಟ್ರೆಂಡ್‌ ಅನ್ನುವ ರೀತಿಯಲ್ಲಿ ಬೆಳೆಯುತ್ತಿದೆ. ಗೋಪಾಲ್‌ ಭಾಜಪೇಯಿ, ರಾಧಿಕಾ ಆಪ್ಟೆ, ಕಲ್ಕಿ ಕೊಚ್ಲಿನ್‌ ಸೇರಿದಂತೆ ಹಲವರು ನಟಿಸಿದ ಕಿರುಚಿತ್ರಗಳು ಇತ್ತೀಚೆಗೆ ಸಾಕಷ್ಟು ಜನಪ್ರಿಯವಾಗಿದ್ದವು.
ಆದರೆ ‘ನಟರು ಕಿರುಚಿತ್ರಗಳಲ್ಲಿ ನಟಿಸದೆ ಇದ್ದರೇ ಒಳ್ಳೆಯದು’ ಎಂದು ಬಾಲಿವುಡ್‌ ಹಿರಿಯ ನಟ ನಾಸಿರುದ್ದೀನ್‌ ಶಾ ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗೆ ಮುಂಬೈನಲ್ಲಿ ‘ಇಂಟೀರಿಯರ್‌ ಕೆಫೆ’ ಎಂಬ ಕಿರುಚಿತ್ರವನ್ನು ಬಿಡುಗಡೆ ಮಾಡಿ ಮಾತನಾಡುತ್ತಾ ಅವರು ಕಿರುಚಿತ್ರಗಳಲ್ಲಿ ಹಿರಿತೆರೆಯ ಜನಪ್ರಿಯ ನಟರು ಅಭಿನಯಿಸುವುದರಿಂದ ಉಂಟಾಗುವ ಪರಿಣಾಮಗಳ ಕುರಿತು ವಿಶ್ಲೇಷಿಸಿದ್ದಾರೆ.

‘ಬಾಲಿವುಡ್‌ ತಾರೆಗಳು ಕಿರುಚಿತ್ರ ಮಾಧ್ಯಮದಿಂದ ದೂರ ಉಳಿಯುವುದೇ ಒಳ್ಳೆಯದು’ ಎಂಬುದು ಅವರ ಅಭಿಪ್ರಾಯ.

ಕಿರುಚಿತ್ರಗಳಲ್ಲಿ ನಟಿಸುವುದರ ಮೂಲಕ ಬಾಲಿವುಡ್‌ ತಾರೆಗಳು ಆ ಮಾಧ್ಯಮವನ್ನು ಪ್ರೋತ್ಸಾಹಿಸಬೇಕಲ್ಲವೆ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ನಾಸಿರುದ್ದೀನ್‌, ‘ಬಹುಶಃ ಇಲ್ಲ. ಯಾಕೆಂದರೆ ಬಾಲಿವುಡ್‌ ತಾರೆಗಳು ತಮ್ಮೊಂದಿಗೆ ಇನ್ನೂ ಅನೇಕ ಸಂಗತಿಗಳನ್ನು ತರುತ್ತಾರೆ. ಇದು ಆ ಮಾಧ್ಯಮದ ಮೂಲ ಸ್ವರೂಪವನ್ನೇ ಬದಲಾಯಿಸುತ್ತದೆ’ ಎಂದು ವಿವರಿಸಿದ್ದಾರೆ.

‘ವರ್ಚಸ್ವಿ ತಾರೆಗಳೊಂದಿಗೆ ಸಿನಿಮಾ ಮಾಡುವುದು ಯುವ ನಿರ್ದೇಶಕರಿಗೆ ವೃತ್ತಿ ಬದುಕಿನ ದೃಷ್ಟಿಯಿಂದ ಒಳ್ಳೆಯದು. ಆದರೆ ಕೆಲವೊಮ್ಮೆ ಅದು ಅವರ ನಿಜವಾದ ಸತ್ವವನ್ನೇ ಮರೆಸಿಬಿಡುತ್ತದೆ. ಹಿಂದೆಯೂ ಹೀಗಾಗಿರುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ’ ಎನ್ನುವ ಶಾ, ‘ಯುವ ನಿರ್ದೇಶಕರು ಪೂರ್ಣಪ್ರಮಾಣದ ಸಿನಿಮಾ ಮಾಡಲು ಪ್ರಾರಂಭಿಸಿದ ಮೇಲೆಯೂ ಕಿರುಚಿತ್ರಗಳನ್ನು ಮಾಡುತ್ತಿರಬೇಕು. ಅದು ಅವರ ಪ್ರತಿಭೆಯನ್ನು ಉಜ್ವಲಗೊಳಿಸುತ್ತದೆ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT