ಮೈಸೂರು: ಹೂವೇನ ಕಾಡುಮಲ್ಲಿಗೆ
ಸಂಪಿಗೆ ಸೇವಂತಿಗೆ
ಮಗ್ಗೆ ಮಾತಾಡು ಮಲ್ಲಿಗೆ... – ಹೀಗೆ ಸೋಲಿಗ ಹಾಗೂ ಬೆಟ್ಟ ಕುರುಬರು ನಗರದ ಅಂಬಾವಿಲಾಸ ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂದೆ ಹಾಡುತ್ತಾ, ನರ್ತಿಸುವ ಮೂಲಕ ಭಾನುವಾರ ಗಮನ ಸೆಳೆದರು.

ಅವರೆಲ್ಲ ಚಾಮರಾಜನಗರ ಜಿಲೆ್ಲಯ ಗುಂಡು್ಲ ಪೇಟೆ ತಾಲ್ಲೂಕಿನ ಮದ್ದೂರು ಗಿರಿಜನ ಕಾಲೊನಿಯ ಮಹಿಳೆಯರು ಹಾಗೂ ಪುರುಷರು.

‘ದಸರಾ ದರ್ಶಿನಿ’ ಸಲುವಾಗಿ 2 ಬಸ್ಗಳಲ್ಲಿ ಸುಮಾರು 104 ಪುರುಷರು ಹಾಗೂ ಮಹಿಳೆಯರು ಬಂದಿದ್ದರು. ವಿವಿಧ ಸ್ಥಳಗಳಿಗೆ ತೆರಳುವ ಮೊದಲು ಅರಮನೆಯ ಮುಂದೆ ಸುಗ್ಗಿ ಹಬ್ಬ, ಗೋರಾಖಾನ್ ಹಬ್ಬಕೆ್ಕ ಹಾಡುತಿ್ತದ್ದ ಹಾಡುಗಳನ್ನು ಹಾಡಿ, ಕುಣಿದು ಭಾನುವಾರದ ದಸರಾ ಕಾರ್ಯಕ್ರಮಗಳಿಗೆ ಮುನ್ನುಡಿ ಯಾದರು. ನಂತರ ಅಂಬಾವಿಲಾಸ ಅರಮನೆ, ಚಾಮುಂಡಿ ಬೆಟ್ಟ, ಮೃಗಾಲಯನೋಡಿ, ಸಂಜೆ ಅಂಬಾ ವಿಲಾಸ ಅರಮನೆ ಬಳಿ ಬಂದರು. ಅಲ್ಲಿ ನಡೆಯುತಿ್ತದ್ದ ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ದೀಪದ ಬೆಳಕಿನಲ್ಲಿ ಅರಮನೆ ಕಂಡು ಬೆರಗಾದರು.

‘ಅರಮನೆ ನೋಡಿರಲಿಲ್ಲ. ನೋಡುವ ಆಸೆಯಿತು್ತ. ಈ ವರ್ಷ ಈಡೇರಿತು. ಕಾಡಿ ನಿಂದ ಜೇನು, ಮೇಣ, ಗೋಂದು, ಅರಳೆಕಾಯಿ, ನೆಲ್ಲಿ ಕಾಯಿ ತಗೊಂಡು ಹೋಗಿ ಅರಣ್ಯ ಕಿರು ಉತ್ಪನ್ನ ಸಂಘಕೆ್ಕ ಕೊಡುತ್ತೇವೆ. ದಿನಕೆ್ಕ 100–150 ` ಕೂಲಿ ಸಿಗುತ್ತದೆ ಅಷೆ್ಟ. ಇದು 6 ತಿಂಗಳು ಮಾತ್ರ. ಇನ್ನಾರು ತಿಂಗಳು ಕೂಲಿ ಕೆಲಸ ವೇ ಗತಿ’ ಎಂದು ಜೆ. ಮಹಾದೇವಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೈಸೂರಿಗೆ ಪ್ರವಾಸ ಅಂದಾಗ ಖುಷಿಯಾಗಿ ಬಸ್ಸಲ್ಲಿ ಬರುವಾಗ ಹಾಡು ಹೇಳಾ್ತ ಬಂದಿ್ವ. ಕೂಲಿ ಮಾಡೋರು. ಚಾಮುಂಡಿ ಬೆಟ್ಟ ನೋಡಿರಲಿಲ್ಲ. ತಾಯಿ ಚಾಮುಂಡಿ ನೋಡಿ ಕೈಮುಗಿದೆ’ ಎಂದು ಸಂತಸ ವ್ಯಕ್ತಪಡಿಸಿದರು ದೇವಮ್ಮ.
5 ದಿನಗಳಲ್ಲಿ 10 ಸಾವಿರ ಜನ: ಈ ವರ್ಷದ ದಸರಾ ವಿಶೇಷ ಎಂದರೆ, ದಸರಾ ದರ್ಶಿನಿ. ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಹಾಗೂ ಕೊಡಗು ಜಿಲೆ್ಲಗಳ 29 ತಾಲ್ಲೂಕು ಗಳಿಂದ 174 ಬಸ್ಗಳಲ್ಲಿ ಆದಿವಾಸಿಗಳು, ಬಡವರು ಆಗಮಿಸಿ ದಸರಾ ದರ್ಶಿನಿಯ ಲಾಭ ಪಡೆಯುತ್ತಾರೆ.

‘ಅ. 6ರಿಂದ 8ರವರೆಗೆ ಮೈಸೂರು, ಹಾಸನ ಹಾಗೂ ಕೊಡಗು ಜಿಲೆ್ಲಯ 18 ತಾಲ್ಲೂಕುಗಳಿಂದ, ಅ. 9 ಹಾಗೂ 10 ರಂದು ಮಂಡ್ಯ ಹಾಗೂ ಚಾಮರಾಜ ನಗರ ಜಿಲೆ್ಲಗಳ 11 ತಾಲ್ಲೂಕುಗಳು ಸೇರಿದಂತೆ 29 ತಾಲ್ಲೂಕುಗಳಿಂದ ಒಟು್ಟ 10 ಸಾವಿರ ಪ್ರಯಾಣಿಕರು ದಸರಾ ದರ್ಶಿನಿಯ ಲಾಭ ಪಡೆಯುತ್ತಾರೆ. ನಿತ್ಯ 36 ಬಸ್ಗಳು ಸಂಚರಿಸುತ್ತವೆ’ ಎಂದು ದಸರಾ ದರ್ಶಿನಿ ಉಪ ಸಮಿತಿ ಕಾರ್ಯಾ ಧ್ಯಕ್ಷ ಮೈಸೂರು ಗಾ್ರಮೀಣ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ
ಬಿ.ವಿ. ಶ್ರೀನಿವಾಸ ತಿಳಿಸಿದರು.

ಮೊದಲ ಬಾರಿ ಅರಮನೆ ನೋಡಿದವರು
‘ನಮ್ಮ ಕಾಲೊನಿಯ ಮಕ್ಕಳು ಶಾಲೆ ಬಿಡುವವರೇ ಹೆಚು್ಚ. ಅವರನ್ನು ಶಾಲೆಗೆ ಸೇರಿಸಲು ಶ್ರಮಿಸುತಿ್ತರುವೆ. ದಸರಾ ದರ್ಶಿನಿಯಲ್ಲಿ ಬಂದಿರುವ 25 ಮಹಿಳೆಯರಲ್ಲಿ ಅನೇಕರು ಅರಮನೆ, ಮೃಗಾಲಯ ನೋಡಿರಲಿಲ್ಲ. ಅವರಿಗೆ ಹೊಟ್ಟೆ ತುಂಬಿಸಿಕೊಳ್ಳುವುದೇ ಕಷ್ಟವಾಗಿರುವಾಗ ಇನೆ್ನಲಿ್ಲ ಪ್ರವಾಸ?’ ಎಂದು ರತ್ನಮ್ಮ ಕೇಳಿದರು.
ಮದ್ದೂರು ಗಿರಿಜನ ಕಾಲೊನಿಯ ಮಹಿಳೆಯರಲ್ಲಿಯೇ ಮೊದಲ ಸಾ್ನತಕೋತ್ತರ ಪದವೀಧರೆ ರತ್ನಮ್ಮ. ಮೈಸೂರು ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರ ವಿಷಯದಲ್ಲಿ ಎಂ.ಎ., ಪದವಿ ಪಡೆದ ಅವರು ಸದ್ಯ ಹಂಪಿ ಕನ್ನಡ ವಿಶ್ವವಿದ್ಯಾಲಯಲ್ಲಿ ‘ದಕಿ್ಷಣ ಕರ್ನಾಟಕದ ಆದಿವಾಸಿ ಬುಡಕಟು್ಟಗಳು’ ಕುರಿತು ಪಿಎಚ್.ಡಿ ಮಾಡುತಿ್ತದಾ್ದರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.