ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದುಡ್ಡು ಮಾಡುವ ಕೋರ್ಸ್‌ಗಳಿಗೆ ದೂಡಬೇಡಿ’

Last Updated 15 ಏಪ್ರಿಲ್ 2014, 20:35 IST
ಅಕ್ಷರ ಗಾತ್ರ

ರಾಮನಗರ: ಸಮ ಸಮಾಜದ ಆಶ­ಯ­ಗ­ಳ­ನ್ನು ಮಕ್ಕಳ ಮನಸ್ಸಿಗೆ ಮುಟ್ಟಿ­ಸುವ ಆಶಯ.... ಮತದಾನದ ಹಕ್ಕಿನ ಅರಿವು ಮೂಡಿಸಿ ಸದೃಢ ನಾಡು ಕಟ್ಟುವ ಉತ್ಸಾಹ... ಜನಪದ ಕಲಾ ನೃತ್ಯ­ಗಳ ವೈಭವ... ಚಿಣ್ಣರ ಚಿಲಿಪಿಲಿ ಗಾನ ಹಾಗೂ ಅವರಲ್ಲಿ ಹೊಸ ಹುರು­ಪಿನ ಒನಪು... ಸಡಗರ ಸಂಭ್ರಮದ ಸಮಾ­ಗಮ...

ಅಕ್ಷರ ಧಮ್ಮ ಟ್ರಸ್ಟ್, ಮಾಯ್ಕಾರ ರಂಗ­ತಂಡ, ಕರ್ನಾಟಕ ಜಾನಪದ ಪರಿ­ಷತ್ತಿನ ಸಹಯೋಗದೊಂದಿಗೆ ಜಾನಪದ ಲೋಕದ ಬಯಲು ರಂಗಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಬೇಸಿಗೆ ಶಿಬಿ­ರದಲ್ಲಿ ಕಂಡು ಬಂದ ರಮಣೀಯ ದೃಶ್ಯ­ಗಳಿವು.

‘ಗ್ರಾಮ ಭಾರತದೊಳಗೆ ಚಿಣ್ಣರ ಮೇಳ' ಎಂಬ ಪರಿಕಲ್ಪನೆಯೊಂದಿಗೆ ಮಕ್ಕಳ ವಿಶೇಷ ದೇಸಿ ಬೇಸಿಗೆ ಶಿಬಿರಕ್ಕೆ ಚಾಲನೆ ದೊರೆತಾಗ ಅಲ್ಲಿ ಹಬ್ಬದ ಸಂಭ್ರ­­­ಮವಿತ್ತು, ಅಲ್ಲಿದ್ದ ಮಕ್ಕಳ ಮನ­ದಲ್ಲಿ ಉತ್ಸಾಹ ಪುಟಿದೇಳುತ್ತಿತ್ತು. ಬೇಸಿ-ಗೆಯ ಸೂರ್ಯ ಮರೆಯಾಗಿ ತಂಪಿನ ವಾತಾ­­ವರಣ ಪಸರಿಸು­ತ್ತಿದ್ದಂತೆ ಮಕ್ಕಳ ಮೊಗ­ದಲ್ಲಿ ಮಂದಹಾಸ ಮೂಡಿತ್ತು.

ಶಿಬಿರ ಉದ್ಘಾಟಿಸಿದ ಚಿತ್ರನಟ ಅರುಣ್ ಸಾಗರ್ ಮಾತ­ನಾಡಿ, ‘ಮುಖ­­­ವಾಡವಿಲ್ಲದೆ ಬದುಕುವ ಕಲೆ ರೂಪಿಸಿ­ಕೊಂಡಿ­ರುವ ಮಕ್ಕಳ ಜೊತೆ ಹೆಚ್ಚಿನ ಸಮಯ ಮೀಸಲಿ­ಡುವುದರಿಂದ ಪೋಷ­ಕರು ಮಾನವೀಯ ಗುಣಗಳನ್ನು ಅಳವಡಿಸಿಕೊಳ್ಳಲು ಸಹಕಾರಿಯಾ­ಗು­ವುದು. ಮಕ್ಕಳ ಜೊತೆ ಮಕ್ಕ­ಳಾಗಿ ಆಡಿ ನಲಿದು, ಕುಣಿಯುವುದರಿಂದ ದೈಹಿಕ, ಮಾನಸಿಕ ಶಕ್ತಿ ದೊರೆ­ಯುವುದು’ ಎಂದು ಅವರು ತಿಳಿಸಿದರು.

ಅಕ್ಷರ ಧಮ್ಮ ಟ್ರಸ್ಟ್‌ನ ಅಧ್ಯಕ್ಷ ಎಚ್. ಮೋಹನ್‌ ಕುಮಾರ್, ಪರಿಷತ್ತಿನ ವ್ಯವ­ಸ್ಥಾಪಕ ಟ್ರಸ್ಟಿ ಇಂದಿರಾ ಬಾಲ­ಕೃಷ್ಣ, ಸಾಹಿತಿ ಬಿ. ಪಾರ್ವತೀಶ್, ಅಕ್ಷರಧಮ್ಮ ಟ್ರಸ್ಟ್‌ ನಿರ್ದೇ­ಶಕ ಶಿವಣ್ಣ ಮಾತ­ನಾಡಿ­ದರು. ಬೆಂಗಳೂರು ವಿಶ್ವವಿದ್ಯಾ­ಲ­ಯದ ಸಮಾಜಶಾಸ್ತ್ರಜ್ಞ ಡಾ.ಸಿ.ಜಿ. ಲಕ್ಷ್ಮೀಪತಿ
ಮಾತನಾಡಿ­ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT