ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಕ್ಸಲ್‌ ವಿರುದ್ಧ ಕಠಿಣ ಕ್ರಮ’

Last Updated 6 ಮೇ 2015, 20:29 IST
ಅಕ್ಷರ ಗಾತ್ರ

ಬೆಂಗಳೂರು:  ‘ನಕ್ಸಲ್‌ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವವರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ’ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್‌ ಹೇಳಿದರು. ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಸಾರ್ವಜನಿಕರಿಂದ ಅಹವಾಲು ಸ್ವೀಕ ರಿಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

‘ನಕ್ಸಲ್‌ ಚಟುವಟಿಕೆಗೆ ಬೆಂಬಲ ಸೂಚಿಸುವ ಕರಪತ್ರವೊಂದು ನಕ್ಸಲ್‌ ನಿಗ್ರಹ ದಳಕ್ಕೆ ಶೃಂಗೇರಿ ಬಳಿ ಸಿಕ್ಕಿದೆ. ನಕ್ಸಲ್‌ ಚಟುವಟಿಕೆಯಲ್ಲಿ ತೊಡಗಿರುವ ವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಕ್ಸಲ್‌ ನಿಗ್ರಹ ದಳಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದೇನೆ.   ಹೊರ ರಾಜ್ಯಗಳಿಂದ ಬರುವ ನಕ್ಸಲರ ಬಗ್ಗೆಯೂ  ನಿಗಾ ವಹಿಸುವಂತೆ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದರು.

‘ರಾಜ್ಯದಲ್ಲಿ ನಕ್ಸಲ್‌ ಚಟುವಟಿಕೆ ನಿಯಂತ್ರಣದಲ್ಲಿದೆ. ಶರಣಾಗತರಾಗಲು ಬಯಸುವ ನಕ್ಸಲರಿಗೆ ಸರ್ಕಾರ ಈಗಾ ಗಲೇ ವಿಶೇಷ ಪ್ಯಾಕೇಜ್‌  ಘೋಷಿಸಿದೆ. ಅನೇಕರು ಶರಣಾಗತಿಯ ಬಗ್ಗೆ ಒಲವು ತೋರಿಸಿದ್ದಾರೆ. ಶರಣಾಗುವ ನಕ್ಸಲರಿಗೆ  ಪ್ಯಾಕೇಜ್‌ನಲ್ಲಿ ಘೋಷಿಸಿರುವ ಸಕಲ ಸವಲತ್ತುಗಳನ್ನು ನೀಡಲಾಗುವುದು’ ಎಂದರು.

22 ಸಾವಿರ ಕಾನ್‌ಸ್ಟೆಬಲ್‌ ಹುದ್ದೆ ಖಾಲಿ: ‘ರಾಜ್ಯದಲ್ಲಿ ಅಂದಾಜು 22 ಸಾವಿರ ಪೊಲೀಸ್‌ ಕಾನ್‌ಸ್ಟೆಬಲ್ ಹುದ್ದೆಗಳು ಖಾಲಿ ಇವೆ. ಪ್ರಸಕ್ತ ಸಾಲಿನಲ್ಲಿ 8.5 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಕ್ರಮಕೈಗೊಂಡಿದೆ.
ಬಾಕಿ ಉಳಿದ ಹುದ್ದೆ ಗಳನ್ನು  ಭರ್ತಿ ಮಾಡುವ  ಬಗ್ಗೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಚರ್ಚಿಸಲಾಗುವುದು’ ಎಂದು ಅವರು ತಿಳಿಸಿದರು.

‘ಬೆಂಗಳೂರಿನ ಪೊಲೀಸ್‌ ಠಾಣೆಗಳಲ್ಲಿ ಐದು ವರ್ಷಕ್ಕೂ ಹೆಚ್ಚು ಸಮಯದಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಇನ್‌ಸ್ಪೆಕ್ಟರ್‌ ಹಾಗೂ ಸಬ್‌ ಇನ್‌ಸ್ಪೆಕ್ಟರ್‌ ಗಳನ್ನು ಬೆಂಗಳೂರಿನ ಹೊರಗಡೆಯ ನಾನ್–ಎಕ್ಸಿಕ್ಯುಟಿವ್‌ (ಸಿಐಡಿ, ಗುಪ್ತ ದಗಳ, ಲೋಕಾಯುಕ್ತ ಮುಂತಾದ ಇಲಾಖೆಗಳಿಗೆ) ಹುದ್ದೆಗಳಿಗೆ ವರ್ಗಾಯಿಸ ಲಾಗಿದೆ’ ಎಂದು ಅವರು ತಿಳಿಸಿದರು.

‘ಸಚಿವರ ಮೌಲ್ಯಮಾಪನ ನಡೆಸಲು ಹೈಕಮಾಂಡ್‌ ನಿರ್ಧರಿಸಿದರೆ, ಅದಕ್ಕೆ ಅಭ್ಯಂತರ ಇಲ್ಲ. ಗೃಹಸಚಿವನಾಗಿ ನನ್ನ ನಿರ್ವಹಣೆ ಬಗ್ಗೆ ತೃಪ್ತಿ ಇದೆ.  ಮಾಡ ಬೇಕಾದ ಕೆಲಸ ಇನ್ನೂ ಇದೆ. ಎರಡು ವರ್ಷಗಳಷ್ಟು ಕಡಿಮೆ ಅವಧಿಯಲ್ಲಿ ಒಬ್ಬ ವ್ಯಕ್ತಿ ಎಲ್ಲವನ್ನೂ ಸಾಧಿಸಲು ಸಾಧ್ಯ ವಾಗದು’ ಎಂದು ಪ್ರಶ್ನೆಯೊಂದಕ್ಕೆ ಅವರು  ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT