ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನನ್ನದು ಬಲವಂತದ ದೇಶಾಂತರ’

Last Updated 29 ಏಪ್ರಿಲ್ 2016, 20:04 IST
ಅಕ್ಷರ ಗಾತ್ರ

ಲಂಡನ್‌ (ಪಿಟಿಐ): ‘ಬಲವಂತದ ದೇಶಾಂತರ’ದಲ್ಲಿದ್ದೇನೆ ಎಂದು ಹೇಳಿರುವ ಉದ್ಯಮಿ ವಿಜಯ ಮಲ್ಯ, ಭಾರತದಲ್ಲಿ ತಮಗೆ ಸಂಬಂಧಿಸಿದಂತೆ ಭಾವೋದ್ವೇಗದ ಸನ್ನಿವೇಶವಿದೆ. ಹಾಗಾಗಿ ಸದ್ಯಕ್ಕೆ ದೇಶಕ್ಕೆ ಮರಳುವುದಿಲ್ಲ ಎಂದಿದ್ದಾರೆ.

ಬ್ರಿಟನ್‌ನ ‘ಫೈನಾನ್ಶಿಯಲ್‌ ಟೈಮ್ಸ್‌’ ಪತ್ರಿಕೆಗೆ ಸಂದರ್ಶನ ನೀಡಿರುವ ಅವರು, ‘ಈಗ ಸ್ಥಗಿತಗೊಂಡಿರುವ ಕಿಂಗ್‌ಫಿಷರ್‌ ಏರ್‌ಲೈನ್ಸ್‌ನ ಸಾಲ ಬಾಕಿ ಇರುವ ಬ್ಯಾಂಕುಗಳ ಜತೆ ‘ವಿವೇಕಯುತ’ವಾದ ಸಂಧಾನದ ಮೂಲಕ ಬಾಕಿ ಚುಕ್ತಾಗೊಳಿಸಲು ಸಿದ್ಧ. ಆದರೆ ನನ್ನ ಪಾಸ್‌ಪೋರ್ಟ್‌ ರದ್ದುಪಡಿಸುವುದರಿಂದ ಅಥವಾ ನನ್ನನ್ನು ಬಂಧಿಸುವುದರಿಂದ ಬ್ಯಾಂಕುಗಳಿಗೆ ಹಣ ದೊರೆಯದು’ ಎಂದು ಹೇಳಿದ್ದಾರೆ.

ಐಡಿಬಿಐನಿಂದ ಪಡೆದ ₹900 ಕೋಟಿ ಸಾಲವನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಎಂಬ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ವಿನಂತಿಯಂತೆ ಮಲ್ಯ ಅವರ ಪಾಸ್‌ಪೋರ್ಟನ್ನು ರದ್ದುಪಡಿಸಲಾಗಿದೆ.

‘ನಾನು ಖಂಡಿತವಾಗಿಯೂ ಭಾರತಕ್ಕೆ ಮರಳಲು ಬಯಸಿದ್ದೇನೆ. ಆದರೆ ಈಗ ನನ್ನ ಬಗ್ಗೆ ಅಲ್ಲಿ ಭಾವೋದ್ವೇಗ ಇದೆ. ನನ್ನ ಪಾಸ್‌ಪೋರ್ಟ್‌ ರದ್ದುಪಡಿಸಲಾಗಿದೆ. ಸರ್ಕಾರದ ಮುಂದಿನ ನಡೆ ಏನು ಎಂಬುದು ನನಗೆ ಗೊತ್ತಿಲ್ಲ’ ಎಂದು ಮಲ್ಯ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT