ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಾಕ್‌ ಜತೆಗೆ ಸ್ನೇಹಪರ ಸಂಬಂಧ ಅಪೇಕ್ಷಿಸುತ್ತೇವೆ’

Last Updated 2 ಜುಲೈ 2015, 11:01 IST
ಅಕ್ಷರ ಗಾತ್ರ

ಶ್ರೀನಗರ, ಜಮ್ಮು ಮತ್ತು ಕಾಶ್ಮೀರ (ಪಿಟಿಐ): ಪಾಕಿಸ್ತಾನ ಸೇರಿದಂತೆ ಎಲ್ಲಾ ನೆರೆಯ ರಾಷ್ಟ್ರಗಳೊಂದಿಗೆ ಸ್ನೇಹಯುತ ಸಂಬಂಧವನ್ನು ಪ್ರಮಾಣಿಕವಾಗಿ ಅಪೇಕ್ಷಿಸುತ್ತೇವೆ ಎಂದಿರುವ ಸರ್ಕಾರ, ಇಸ್ಲಾಮಾಬಾದ್ ಕೂಡ ಇದೇ ಮಾರ್ಗದಲ್ಲಿ ಯೋಚಿಸಬೇಕು ಎಂದಿದೆ.

‘ಪ್ರಧಾನಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸಿದ ದಿನವೇ ನಾವು ನಮ್ಮ ಉದ್ದೇಶವನ್ನು ಸ್ಪಷ್ಟಪಡಿಸಿದ್ದೇವೆ. ಪಾಕಿಸ್ತಾನದ ಜತೆಗಿನ ಸಂಬಂಧಗಳನ್ನು ಸುಧಾರಿಸುವ ಉದ್ದೇಶವಿರಲಿಲ್ಲ ಎಂದಾದರೆ, ಪ್ರಮಾಣ ವಚನ ಸಮಾರಂಭಕ್ಕೆ ಪಾಕಿಸ್ತಾನ ಪ್ರಧಾನಿಗೆ ಆಹ್ವಾನ ನೀಡುತ್ತಿರಲಿಲ್ಲ’ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದರು.

ದಕ್ಷಿಣ ಕಾಶ್ಮೀರದಲ್ಲಿ ಹಿಮಾಲಯ ತಪ್ಪಲಿನಲ್ಲಿರುವ ಅಮರನಾಥ ದರ್ಶನದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಪಾಕಿಸ್ತಾನವು ನಮ್ಮ ನೆರೆಯ ರಾಷ್ಟ್ರ. ಪಾಕಿಸ್ತಾನ ಸೇರಿದಂತೆ ಎಲ್ಲಾ ನೆರೆಯ ರಾಷ್ಟ್ರಗಳೊಂದಿಗೆ ನಾವು ಕೇವಲ ಉತ್ತಮ ಅಲ್ಲ ಸ್ನೇಹಯುತ ಸಂಬಂಧವನ್ನೂ ಹೊಂದಲು ಬಯಸುತ್ತೇವೆ ಎಂದು ನಾನು ಮನಪೂರ್ವಕವಾಗಿ ಹೇಳುತ್ತೇನೆ’ ಎಂದು ನುಡಿದರು.

‘ಸ್ನೇಹಿತರನ್ನು ಬದಲಿಸಬಹುದು. ಆದರೆ ನೆರೆಯವರನ್ನು ಬದಲಿಸಲಾಗದು ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಆಗಾಗ ಹೇಳುತ್ತಿದ್ದರು. ನಾವೂ ಅದನ್ನು ನಂಬುತ್ತೇವೆ. ಸಂಬಂಧ ಸುಧಾರಣೆ ನಿಟ್ಟಿನಲ್ಲಿ ನಾವು ಪ್ರಯತ್ನ ಕೈಬಿಡೇವು. ಆದರೆ ಪಾಕಿಸ್ತಾನವೂ ಕೂಡ ಈ ಬಗ್ಗೆ ಆಲೋಚಿಸಬೇಕು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT