ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಾಕಿ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಿ’

Last Updated 22 ಆಗಸ್ಟ್ 2014, 5:48 IST
ಅಕ್ಷರ ಗಾತ್ರ

ಇಂಡಿ: ‘ಬಾಕಿ ಇರುವ ಪ್ರಕರಣಗಳನ್ನು ಈ ಕೂಡಲೇ ಇತ್ಯರ್ಥಗೊಳಿಸಿ, ಇದರಿಂದ ಕಕ್ಷಿದಾರರಿಗೆ ಅನುಕೂಲವಾಗುತ್ತದೆ’ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಎಸ್‌.ಎಂ.ಪಾಟೀಲ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ದಿವಾಣಿ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

‘ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸುವಲ್ಲಿ ವಕೀಲರು ಮತ್ತು ಕಕ್ಷಿದಾರರು ಸಹಕಾರ ನೀಡಬೇಕು’ ಎಂದರು.

ನ್ಯಾಯಾಧೀಶ ಎಸ್‌.ಎಸ್‌.ಭರತ್‌, ನ್ಯಾಯಾಂಗದ ಭಾಗವಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸುವದಾಗಿ ಭರವಸೆ ನೀಡಿದರು.
ಇಂಡಿ ವಕೀಲರ ಸಂಘದ ಅಧ್ಯಕ್ಷ ಸತೀಶ್ಚಂದ್ರ ಕುಲಕರ್ಣಿ, ಅತ್ಯಂತ ಅಲ್ಪ ಸಮಯದಲ್ಲಿ ನ್ಯಾಯಾಲಯ ಉದ್ಘಾಟನೆ ಮಾಡಲು ಸಹಕಾರ ನೀಡಿದ ಎಲ್ಲಾ ಅಧಿಕಾರಿಗಳನ್ನು ಅಭಿನಂದಿಸಿದರು.

ನ್ಯಾಯಾಲಯಕ್ಕೆ ಪೀಠೋಪಕರಣನ್ನು ದಾನವಾಗಿ ನೀಡಿರುವ ವಕೀಲ ಎ.ಎ.ಗಜಾಕೋಶ ಮತ್ತು ಎಂ.ಸಿ.ಬಿರಾದಾರ ಅವರನ್ನು ಸನ್ಮಾನಿಸಿದರು.

ವೇದಿಕೆಯಲ್ಲಿ ಹಿರಿಯ ದಿವಾಣಿ ನ್ಯಾಯಾಧೀಶರಾದ ರೂಪಾ ಕುಲಕರ್ಣಿ, ದಿವಾಣಿ ನ್ಯಾಯಾಧೀಶ ಜಿ.ಆರ್‌.ಶೆಟ್ಟರ ಉಪಸ್ಥಿತರಿದ್ದರು. ಹಿರಿಯ ವಕೀಲರಾದ ಜಿ.ಎಸ್‌ ಕುಲಕರ್ಣಿ, ಎಸ್‌.ಬಿ.ಬೂದಿಹಾಳ, ಎಂ.ಸಿ.­ಬಿರಾದಾರ, ಡಿ.ಎ.ಗಜಾಕೋಶ, ಎಸ್‌.ಎಸ್‌.­ಪೂಜಾರಿ, ಎನ್‌.ಕೆ.ನಾಡಗೌಡ ಪುರೋಹಿತ, ಜೆ.ವಿ.ಪಾಟೀಲ, ಎನ್‌.ವಿ.ದೇಶಪಾಂಡೆ, ಪಿ.ಜಿ.ನಾಡಗೌಡ, ಆರ್‌.ಎಸ್‌.ಗೋಳಸಾರ, ಎಸ್‌.ವಿ.ಕುಲಕರ್ಣಿ, ಜಿ.ಎಸ್‌.ನಿಂಬರಗಿಮಠ, ಎ.ಎಂ.ಬಿರಾದಾರ, ಎಂ.ಎಸ್‌.ಜೋಶಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT