ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಾರ್‌ , ಹೋಟೆಲ್‌ ಅವಧಿ: ಮರುಪರಿಶೀಲಿಸಿ’

ಸರ್ಕಾರಕ್ಕೆ ವಿಮಲಾಗೌಡ, ತಾರಾ ಅನೂರಾಧ ಒತ್ತಾಯ
Last Updated 21 ಜುಲೈ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಾರಾಂತ್ಯದಲ್ಲಿ ನಗರದ ಬಾರ್‌ ಮತ್ತು ಹೋಟೆಲ್‌ಗಳಿಗೆ  ಮಧ್ಯ­ರಾತ್ರಿ ಒಂದು ಗಂಟೆವರೆಗೆ ವಹಿವಾಟು ನಡೆಸಲು ಅನುಮತಿ ನೀಡಿರುವುದನ್ನು ಪುನರ್‌­ಪರಿಶೀಲಿಸುವಂತೆ ಬಿಜೆಪಿಯ ವಿಮಲಾ­ಗೌಡ, ತಾರಾ ಅನೂರಾಧ ಅವರು ಸೋಮವಾರ ವಿಧಾನ ಪರಿಷತ್‌ನಲ್ಲಿ ಸರ್ಕಾರವನ್ನು ಒತ್ತಾಯಿಸಿದರು.

ಪರಿಷತ್ತಿನಲ್ಲಿ ಸೋಮವಾರ ನಡೆದ ಅತ್ಯಾಚಾರ ವಿಷಯದ ಕುರಿತ ಚರ್ಚೆ­ಯಲ್ಲಿ ಮಾತನಾಡಿದ ಇಬ್ಬರೂ ಸದ­ಸ್ಯರು,  ಇಂತಹ ಅಮಾನವೀಯ ಕೃತ್ಯ­ಗ­ಳಲ್ಲಿ ಯಾರೂ ರಾಜಕೀಯ ಮಾಡ­ಬಾ­ರದು. ಪಕ್ಷಾತೀತವಾಗಿ ಒಟ್ಟು­ಗೂಡಿ ಮಹಿಳೆ­­ಯರ ರಕ್ಷಣೆಗೆ ಮುಂದಾ­ಗ­ಬೇಕು ಎಂದು ಅಭಿಪ್ರಾಯಪಟ್ಟರು.

ಭೋಜನ ವಿರಾಮದ ನಂತರ ಕಲಾಪ ಆರಂಭ­ವಾದಾಗ ವಿಷಯ ಪ್ರಸ್ತಾಪಿಸಿದ ತಾರಾ ಅನೂರಾಧ, ‘ಸದನದಲ್ಲಿ ನಾವು ಮಕ್ಕಳ ಹಕ್ಕುಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದೇವೆ. ಆದರೆ ಹಕ್ಕುಗಳು ಅವರಿಗೆ ಸಿಗುವಂತೆ ಮಾಡಿದ್ದೇವೆಯೇ? ಮಾಡಿ­­ದ್ದರೆ, ಕಂದಮ್ಮಗಳ ಮೇಲೆ ಪೈಶಾಚಿಕ ಕೃತ್ಯ ನಡೆ­ಯು­ತ್ತಿ­ರಲಿಲ್ಲ’ ಎಂದರು.

‘ಅತ್ಯಾಚಾರಕ್ಕೆ ಸಂಬಂಧಿಸಿದ ಕಾನೂ­ನಿಗೆ ತಿದ್ದುಪಡಿ ತಂದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಅವರು ಒತ್ತಾಯಿಸಿದರು.

ವಿಮಲಾಗೌಡ ಮಾತನಾಡಿ, ‘ಬೆಂಗ­ಳೂರಿ­ನಲ್ಲಿ ವಿವಿಧ ಕಡೆ­ಗ­ಳಲ್ಲಿ ಪ್ರತಿಭಟನೆ ನಡೆಸುತ್ತಿರುವ ಮಹಿಳೆ­ಯರು ಎಷ್ಟು ಆಕ್ರೋ­­ಶ­­ಗೊಂಡಿ­ದ್ದಾರೆ ಎಂದರೆ, ಕಾನೂನನ್ನು ಕೈಗೆತ್ತಿಕೊಳ್ಳು­ತ್ತೇವೆ ಎಂದು ಹೇಳುತ್ತಿದ್ದಾರೆ. ಒಂದು ವೇಳೆ ಮನೆ­ಗಳ­ಲ್ಲಿರುವ ಹೆಣ್ಣು­ಮಕ್ಕಳು ಬೀದಿ­ಗಿಳಿ­ದರೆ, ರಾಜ್ಯದ ಕಾನೂನು ಸುವ್ಯವಸ್ಥೆ ಏನಾಗ­ಬಹುದು? ಸರ್ಕಾರ ಇದಕ್ಕೆ ಅವಕಾಶ ಕೊಡ­ಬಾರದು’ ಎಂದರು.

‘ಗೃಹ ಸಚಿವರು ಹಾರಿಕೆಯ ಉತ್ತರ ನೀಡಬಾರದು. ಹಿಂದಿನ ಸರ್ಕಾರದ ಅವಧಿ­ಯಲ್ಲಿ ನಡೆಯಲಿಲ್ಲವೇ ಎಂದೂ ಕೇಳ­­ಬಾರದು. ಅತ್ಯಾಚಾರ ತಡೆಗೆ ಸಾಂಘಿಕ ಹೋರಾಟ ಬೇಕು. ಪಕ್ಷಭೇದ ಮರೆತು ಎಲ್ಲರೂ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳ­ಬೇಕು’ ಎಂದು ಸಲಹೆ ನೀಡಿದರು.

‘ಒಂದು ವೇಳೆ ಸರ್ಕಾರ ಏನೂ ಕ್ರಮ ಕೈಗೊಳ್ಳದೆ ಹೋದರೆ, ಮಹಿಳೆಯರು ನಡೆಸುತ್ತಿರುವ ಹೋರಾಟದಲ್ಲಿ ನಾವೂ ಸೇರಬೇಕಾಗುತ್ತದೆ’ ಎಂದೂ ಅವರು ಹೇಳಿದರು.

ಬಿಜೆಪಿಯ ರಾಮಕೃಷ್ಣ ಮತ್ತು ಅಶ್ವತ್ಥ­ನಾರಾ­ಯಣ ಮಾತನಾಡಿ, ಪೊಲೀಸ್‌ ತನಿಖೆ­ಯಲ್ಲಿ ಸರ್ಕಾರ ಹಸ್ತ­ಕ್ಷೇಪ ಮಾಡ­ಬಾರದು. ತನಿಖಾಧಿ­ಕಾರಿ­ಗಳಿಗೆ ಪೂರ್ಣ ಸ್ವಾತಂತ್ರ್ಯ ನೀಡಬೇಕು ಎಂದು ಒತ್ತಾ­ಯಿಸಿ­ದರು. ಬಿಜೆಪಿಯ ಗೋ. ಮಧು­ಸೂದನ್‌, ‘ನಮ್ಮ ದೇಶ­ದಲ್ಲಿ ಸಮಾಜ, ಸಂಸ್ಕೃತಿ ಮೇಲಿನ ಭಕ್ತಿ ಕಡಿಮೆ­ಯಾಗು­ತ್ತಿದೆ. ಕಾನೂನು ಮೇಲಿನ ಭಯವೂ ಕುಗ್ಗು­ತ್ತಿದ್ದು, ಅದು ಆಟಿಕೆಯ ವಸ್ತು­ವಾಗಿದೆ’ ಎಂದರು.

‘ಸರ್ಕಾರದ ವ್ಯವಸ್ಥೆಯಲ್ಲಿ ಜಾತೀಯತೆ ಮೇಳೈಸಿದೆ. ನೌಕ­ರರು ಕೂಡ ಜಾತಿ ಸಂಘಟನೆಗಳನ್ನು ರಚಿಸಿ­ಕೊಂಡಿ­ದ್ದಾರೆ. ಇದ­ರಿಂ­­ದಾಗಿ ಅವರಿಗೆ ರಕ್ಷಣೆ ಸಿಗು­ತ್ತಿದೆ. ಅಪರಾಧಿಗಳೂ ಪ್ರಭಾವ ಬಳಸಿ ರಾಜಕೀಯ ರಕ್ಷಣೆ ಪಡೆ­ದು­­ಕೊಳ್ಳು­ತ್ತಾರೆ. ಅಪ­ರಾಧಿ­ಗಳ ಪರ­ವಾಗಿ ಶಾಸಕರು, ಸಚಿ­ವರು ಮಾತ­ನಾಡು­ವು­ದನ್ನು ಬಿಡ­ಬೇಕು’ ಎಂದು ಹೇಳಿದರು.

ಬಿಜೆಪಿಯ ಭಾನುಪ್ರಕಾಶ್‌, ಕಾಂಗ್ರೆ­ಸ್‌ನ ಮೋಟಮ್ಮ, ಜಯ­­ಮಾಲಾ, ಅಲ್ಲಮ­­ಪ್ರಭು­ಪಾಟೀಲ್‌, ಜೆಡಿಎಸ್‌ನ ಎಂ.ಆರ್‌. ­ಹುಲಿನಾಯ್ಕರ್‌ ಸೇರಿದಂತೆ ಹಲವು ಸದಸ್ಯರು ಚರ್ಚೆ­ಯಲ್ಲಿ ಭಾಗ­ವಹಿಸಿ ಮಾತನಾಡಿದರು.

‘ಹೋಟೆಲ್‌ ಮತ್ತು ಬಾರ್‌ಗಳನ್ನು ಒಂದು ಗಂಟೆವರೆಗೆ ತೆರೆಯಲು ಅವಕಾಶ ನೀಡಿರುವುದರಿಂದ ಅಪರಾಧ ಪ್ರಕರಣ­ಗಳು ಹೆಚ್ಚಾದ ವರದಿ ಇಲ್ಲ’ ಎಂದು ಗೃಹಸಚಿವ ಕೆ.ಜೆ.ಜಾರ್ಜ್‌ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT