ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬುದ್ಧ ರಾತ್ರಿ ಅರಮನೆ ಬಿಟ್ಟು ಓಡಲಿಲ್ಲ’

Last Updated 14 ಅಕ್ಟೋಬರ್ 2014, 19:44 IST
ಅಕ್ಷರ ಗಾತ್ರ

ಬೆಂಗಳೂರು: ‘ಎಲ್ಲರೂ ತಿಳಿದಂತೆ ಬುದ್ಧ ಮಧ್ಯರಾತ್ರಿಯಲ್ಲಿ ಅರಮನೆ ಬಿಟ್ಟು ಓಡಲಿಲ್ಲ. ನದಿ ನೀರಿನ ಹಂಚಿಕೆ ವಿವಾದ­ದಲ್ಲಿ ಪಕ್ಕದ ರಾಜ್ಯದ ಮೇಲೆ ದಂಡೆತ್ತಿ ಹೋಗಿ ಹಿಂಸಾಚಾರ ನಡೆಸಲು ಒಪ್ಪದೆ ರಾಜವೈಭವದಿಂದ ಪರಿತ್ಯಕ್ತ­ನಾದ’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ.ಎಂ. ಶಶಿಧರ ವಿಶ್ಲೇಷಿಸಿದರು.

ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ­ಗಳ ಒಕ್ಕೂಟ ಮಂಗಳವಾರ ಏರ್ಪಡಿ­ಸಿದ್ದ ಕಾರ್ಯಕ್ರಮದಲ್ಲಿ ‘ಸಮ­ಕಾಲೀನ ಸಂದ­ರ್ಭದ ಬುದ್ಧ ಮಾರ್ಗದ ಒಲವು–ನಿಲುವು’ ವಿಷಯ­ವಾಗಿ ಮಾತನಾಡಿದರು.

‘ಶಾಕ್ಯರ ಆಳ್ವಿಕೆಯಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗದಂತೆ ತಡೆಯುವ ಸಲುವಾಗಿ ಆತ ಮಧ್ಯರಾತ್ರಿ ಓಡಿ­ಹೋದ ಎಂಬ ಕತೆ ಕಟ್ಟಲಾಯಿತು’ ಎಂದು ಪ್ರತಿಪಾದಿಸಿದರು.

ವಿಧಾನ ಪರಿಷತ್‌ ಸದಸ್ಯೆ ಮೋಟಮ್ಮ, ‘ತತ್‌ಕ್ಷಣ ಎಲ್ಲರೂ ಬೌದ್ಧಧರ್ಮ ಸ್ವೀಕರಿಸಬೇಕು ಎನ್ನುವ ಕರೆಯನ್ನೇನೂ ನಾನು ಕೊಡಲಾರೆ. ಆದರೆ, ನಮ್ಮ ಸಮಾಜವನ್ನು ಸಮಾನ­ತೆಯತ್ತ ಕೊಂಡೊಯ್ಯಬೇಕು ಎನ್ನು­ವುದು ನನ್ನ ಒತ್ತಾಯ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರೊ. ಸಿದ್ದಲಿಂಗಯ್ಯ, ‘ಸಮಾಜವನ್ನು ಸರಿ­ದಾರಿ­ಯಲ್ಲಿ ಒಯ್ಯಲು ಬೌದ್ಧ ಮತದ ತತ್ವ ಸಹಕಾರಿ’ ಎಂದು ತಿಳಿಸಿದರು.
ರಾಜ್ಯ ಹುಜೂರ್‌ ಖಜಾನೆಯ ಜಂಟಿ ನಿರ್ದೇಶಕಿ ವಿ.ಭಾಗ್ಯಲಕ್ಷ್ಮಿ, ಜಾತಿ ವ್ಯವಸ್ಥೆಯಿಂದ ದಾವಣಗೆರೆ­ಯಲ್ಲಿ ತಾವು ಮನೆ ಪಡೆಯಲು ಅನುಭವಿ­ಸಿದ ಸಂಕಷ್ಟ­ವನ್ನು ವಿವರಿಸಿದರು.

‘ಮೇಲ್ವರ್ಗದ ಜನ ದಲಿತರನ್ನೂ ಅಪ್ಪಿಕೊಳ್ಳುವ ಹೃದಯವಂತಿಕೆ ಮೆರೆ­ಯಬೇಕು ಮತ್ತು ಕೆಳವರ್ಗದ ಜನ ಕೀಳರಿಮೆ ಬಿಡಬೇಕು. ಅಲ್ಲಿಯವರೆಗೆ ಜಾತಿ ವ್ಯವಸ್ಥೆ ಅಳಿಯದು’ ಎಂದು ಅವರು ಪ್ರತಿಪಾದಿಸಿದರು.
ಒಕ್ಕೂಟದ ಅಧ್ಯಕ್ಷ ಬಿ.ಕುಮಾರ ವೇದಿಕೆ ಮೇಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT