ಬೆಳಗಾವಿ: ’ಚಲಿಸುವ ರಂಗಭೂಮಿ’ ಎಂದೇ ಖ್ಯಾತರಾದ ಡಾ. ಏಣಗಿ ಬಾಳಪ ಅವರ ಜನ್ಮಶತಮಾನೋತ್ಸವವನ್ನು ನವೆಂಬರ್ ಮೊದಲ ವಾರದಲ್ಲಿ ಇಲ್ಲಿ ಆಚರಿಸಲಾಗುವುದು. ಈ ಕುರಿತು ಮುಂದಿನ ತಿಂಗಳು ಸಭೆ ಕರೆದು, ಚರ್ಚಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಬುಧವಾರ ಇಲ್ಲಿ ಹೇಳಿದರು.

ಏಣಗಿ ಬಾಳಪ್ಪನವರ ಅಭಿಮಾನಿ ಬಳಗ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ನೇತೃತ್ವದಲ್ಲಿ ನೀಡಿದ ಮನವಿ ಸ್ವೀಕರಿಸಿ ಅವರು ಮಾತನಾಡಿದರು.

ಏಣಗಿ ಬಾಳಪ್ಪನವರಿಗೆ ’ಕರ್ನಾಟಕ ರತ್ನ’ ಪ್ರಶಸ್ತಿ ನೀಡುವ ಕುರಿತು, ಇವರ ಹೆಸರಿನಲ್ಲಿ ನಾಟ್ಯಕಲಾ ಮಂದಿರ ನಿರ್ಮಿಸುವ ಕುರಿತು ಕೂಡಲೇ ಪ್ರಸ್ತಾವ ಸಲ್ಲಿಸುವಂತೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಸೂಚಿಸಲಾಗಿದೆ ಎಂದ ಅವರು, ಬೆಳಗಾವಿಯಲ್ಲಿ ಪ್ರಥಮ ಮಹಿಳಾ ಸಾಹಿತಿಗಳ ಸಮ್ಮೇಳನ ಏರ್ಪಡಿಸುವ ಕುರಿತು ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಯ.ರು. ಪಾಟೀಲ, ಬಸವರಾಜ, ಏಣಗಿ ಸುಭಾಷ, ಲೇಖಕಿಯರ ಸಂಘದ ಅಧ್ಯಕ್ಷೆ
ನೀಲಗಂಗಾ ಚರಂತಿಮಠ ಹಾಗೂ ಕರ್ನಾಟಕ ರಂಗಭೂಮಿ ಸಹಕಾರ ಸಂಘದ ಬಿ.ಎಸ್.ಗವಿಮಠ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.