ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತದೊಂದಿಗೆ ಸಹಭಾಗಿತ್ವಕ್ಕೆ ಅಮೆರಿಕ ಉತ್ಸುಕ’

Last Updated 21 ಡಿಸೆಂಬರ್ 2014, 19:39 IST
ಅಕ್ಷರ ಗಾತ್ರ

ಬೆಂಗಳೂರು: ‘ಭಾರತದೊಂದಿಗೆ  ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಸಹ­ಭಾಗಿತ್ವ ವಹಿಸಲು ಅಮೆರಿಕ ಉತ್ಸುಕ­ವಾಗಿದೆ’ ಎಂದು ಅಮೆರಿಕದ ಸೆನೆಟ್‌ ಸದಸ್ಯೆ ತುಳಸಿ ಗಬ್ಬಾರ್ಡ್‌ ಹೇಳಿದರು.

ಸಾಫ್ಟ್‌ವೇರ್‌ ಮತ್ತು ಸೇವಾ ಸಂಸ್ಥೆ­ಗಳ ರಾಷ್ಟ್ರೀಯ ಒಕ್ಕೂಟ (ನಾಸ್ಕಾಂ) ಭಾನು­ವಾರ ಆಯೋಜಿಸಿದ್ದ ಸಂವಾದ ಕಾರ್ಯ­ಕ್ರಮದಲ್ಲಿ ಮಾತನಾಡಿದ ಅವರು, ಎರಡೂ ದೇಶಗಳ ಆರ್ಥಿಕ ಅಭಿ­ವೃದ್ಧಿಯ ದೃಷ್ಟಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಹಭಾಗಿತ್ವ ವಹಿಸುವ ಬಗ್ಗೆ  ಚರ್ಚೆ ನಡೆಯುತ್ತಿದೆ. ಸೇನಾ ಸಹ­ಭಾಗಿತ್ವ, ಸೈಬರ್‌ ಭದ್ರತೆಯ ಕ್ಷೇತ್ರ­ದಲ್ಲೂ ಜೊತೆಯಾಗಿ ದುಡಿ­ಯುವ ಬಗ್ಗೆ ಅಮೆರಿಕ ಆಸಕ್ತಿ ಹೊಂದಿದೆ ಎಂದರು.

ಅಮೆರಿಕದಲ್ಲಿ ಶೇಕಡ 30ರಷ್ಟು ಉದ್ಯಮಿ­ಗಳು ಭಾರತೀಯ ಮೂಲ­ದವರು. ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಸಂಬಂಧಿ ವೀಸಾ ಸಮಸ್ಯೆಯನ್ನು  ಬಗೆಹರಿಸ­ಲಾ­ಗು­­ವುದು ಎಂದು ಹೇಳಿದರು. ಸಹಭಾಗಿತ್ವ  ಕುರಿತು ಸಣ್ಣ ಉದ್ದಿಮೆ­ದಾರರು, ಕೈಗಾರಿಕೋದ್ಯಮಿ­ಗಳು, ಸ್ವಯಂ­ಸೇವಾ ಸಂಸ್ಥೆಗಳು, ಸರ್ಕಾರಗಳ ಜೊತೆ ಚರ್ಚೆ ನಡೆಸಲು ಭಾರತ ಪ್ರವಾಸ ಕೈಗೊಂಡಿರುವುದಾಗಿ ತಿಳಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಅವ­ರನ್ನು ಭೇಟಿ ಮಾಡಿ ಚರ್ಚಿಸಲಾಗಿದೆ. ಗೋವಾ ಸರ್ಕಾರದೊಂದಿಗೆ ಮಾತು­ಕತೆ ನಡೆಸಿದ್ದೇನೆ. ಮುಂಬೈ, ಗುಜರಾತ್‌ಗೂ ಭೇಟಿ ನೀಡಲಿದ್ದೇನೆ’ ಎಂದರು.

ಯೋಗ ದಿನಕ್ಕೆ ಬೆಂಬಲ: ನರೇಂದ್ರ ಮೋದಿಯವರು ಅಮೆರಿಕ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ವಿಶ್ವ ಯೋಗ ದಿನದ ಬಗ್ಗೆ ಪ್ರಸ್ತಾಪಿಸಿದ್ದರು. ಈ ಒತ್ತಾಯಕ್ಕೆ 70 ದೇಶಗಳು ಸಹಿ ಹಾಕಿವೆ. ಯೋಗದಿಂದ ಮಾನಸಿಕ ದೃಢತೆ ಹೆಚ್ಚುತ್ತದೆ. ಇದು ವ್ಯಕ್ತಿಯ ಸರ್ವ­ತೋಮುಖ ಅಭಿವೃದ್ಧಿಗೆ ಸಹಕಾರಿ­ಯಾಗಿದೆ. ದೇಶದ ಅಭಿವೃದ್ಧಿಗೆ ವ್ಯಕ್ತಿಯ ದೈಹಿಕ, ಮಾನಸಿಕ ಆರೋಗ್ಯ ಕೂಡಾ ಮುಖ್ಯ ಎಂದು ಅವರು ಹೇಳಿದರು.

ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾದ ನಂತರ ಉದ್ಯಮ­ಕ್ಷೇತ್ರ­ದಲ್ಲಿ ಹೊಸ ಸಂಚಲನ ಉಂಟಾಗಿದೆ. ಭಾರತ­ವನ್ನು ಅವಕಾಶಗಳ ಕಡೆಗೆ ಮೋದಿ ಕೊಂಡೊಯ್ಯುತ್ತಿದ್ದಾರೆ.  ಮೋದಿ  ಅಮೆರಿಕ ಭೇಟಿ ಅಲ್ಲಿ ನೆಲೆಸಿ­ರುವ ಭಾರತೀಯರಿಗೆ  ಹೊಸ ಭರವಸೆ ಮೂಡಿಸಿದೆ ಎಂದರು. ನಾಸ್ಕಾಂ ಮುಖ್ಯಸ್ಥ ಆರ್‌. ಚಂದ್ರಶೇಖರನ್‌ ಉಪಸ್ಥಿತರಿದ್ದರು.

ಶ್ರೀಕೃಷ್ಣನ ಭಗವದ್ಗೀತೆ­ ಇಷ್ಟ
‘ನಾನು ಶ್ರೀಕೃಷ್ಣನ ಭಗವದ್ಗೀತೆ­ಯಿಂದ ಪ್ರೇರಣೆ ಪಡೆದಿದ್ದೇನೆ. ಗೀತೆ­ಯಲ್ಲಿ ಮನುಷ್ಯನ ಎಲ್ಲ ಸಮಸ್ಯೆಗಳಿಗೆ ಉತ್ತರ­ವಿದೆ. ನಮ್ಮ ಒಳಗನ್ನು  ನೋಡುವುದಕ್ಕೆ ಗೀತೆಯಿಂದ ಸಾಧ್ಯ.  ಸೈನ್ಯದಲ್ಲಿ ದುಡಿಯಲು ಗೀತೆಯೇ ನನಗೆ ಸ್ಪೂರ್ತಿ. ಶ್ರೀಕೃಷ್ಣನ ಬಗ್ಗೆ ಇನ್ನಷ್ಟು ತಿಳಿಯಲು ಮಥುರಾ, ವೃಂದಾವನಕ್ಕೂ ಭೇಟಿ ನೀಡಲಿದ್ದೇನೆ’
–ತುಳಸಿ ಗಬ್ಬಾರ್ಡ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT