ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತದ ಮೇಲೆ ಗ್ರೀಸ್‌ ಬಿಕ್ಕಟ್ಟು ಸೀಮಿತ’

Last Updated 2 ಜುಲೈ 2015, 10:42 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಭಾರತವು ಯುರೋಪ್‌ ಒಕ್ಕೂಟಕ್ಕೆ ಅಷ್ಟಾಗಿ ತೆರೆದುಕೊಂಡಿಲ್ಲವಾದ್ದರಿಂದ ದೇಶದ ಆರ್ಥಿಕತೆಯ ಮೇಲೆ  ಗ್ರೀಸ್‌ ಆರ್ಥಿಕ ಬಿಕ್ಕಟ್ಟಿನ ಪ್ರಭಾವ ಸೀಮಿತ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಂ ರಾಜನ್ ಅವರು ಗುರುವಾರ ತಿಳಿಸಿದ್ದಾರೆ.

ಇಲ್ಲಿ ಆರ್‌ಬಿಐ ಮಂಡಳಿಯ ಸಭೆಯ ಬಳಿಕ ಮಾತನಾಡಿದ ಅವರು, ‘ಗ್ರೀಸ್‌ನದ್ದು ವಿಕಸಿತ ಪರಿಸ್ಥಿತಿ.  ಉಭಯ  ಆರ್ಥಿಕ ಹಾಗೂ ವ್ಯಾಪಾರ ಕ್ಷೇತ್ರಗಳಲ್ಲಿ ಭಾರತವು ಗ್ರೀಸ್‌ ಜತೆಗೆ ತುಂಬಾನೇ ಕಡಿಮೆ ತೆರೆದುಕೊಂಡಿಕೊಂಡಿದೆ. ಆದ್ದರಿಂದ ಬಿಕ್ಕಟ್ಟಿನ ನೇರ ಪ್ರಭಾವ ಸೀಮಿತ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಅಲ್ಲದೇ, ‘ಆರಂಭಿಕ ಬಿಕ್ಕಟ್ಟಿನ ಬಳಿಕವೂ ಕುಸಿತ ಮುಂದುವರಿದಲ್ಲಿ ಅದು ವ್ಯತಿರಿಕ್ತ ಪರಿಣಾಮಕ್ಕೆ ತಿರುಗಬಹುದು. ಅದರಿಂದ ಹೂಡಿಕೆದಾರರಿಗೆ ನಷ್ಟವಾಗಲಿದೆ ಎಂದು ನಮಗಿನಿಸುತ್ತದೆ’ ಎಂದೂ ಅವರು ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT