ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತೀಯ ಚಿತ್ರಗಳಿಗೆ ವಿದೇಶಿ ಮೊಹರು ಬೇಕಿಲ್ಲ’

ಪಂಚರಂಗಿ
Last Updated 2 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

‘ಭಾರತೀಯ ವೀಕ್ಷಕರು ಯಾವುದೇ ಸಿನಿಮಾವನ್ನು ಇಷ್ಟಪಡಲು ವಿದೇಶಿ ಪ್ರಮಾಣಪತ್ರದ ಅವಶ್ಯಕತೆ ಇಲ್ಲ’ ಎಂದು ನಟಿ ರಿಚಾ ಚಡ್ಡಾ ಹೇಳಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ  ಮೆಚ್ಚುಗೆ ಗಳಿಸಿರುವ ‘ಮಸಾನ್‌’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ರೀಚಾ, ಭಾರತೀಯ ಸಿನಿಮಾಗಳಿಗೆ ವಿದೇಶಿ ಮೊಹರಿನ ಅಗತ್ಯ ಇಲ್ಲ ಎಂದಿದ್ದಾರೆ.

‘ಯಾವುದೇ ಸಿನಿಮಾಕ್ಕೆ ಅಥವಾ ಕಲಾವಿದರ ಬಗ್ಗೆ ವಿದೇಶಿಯರು ಯಾವ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನುವುದನ್ನು ಆಧರಿಸಿ ಭಾರತೀಯ ಪ್ರೇಕ್ಷಕರು ಮೆಚ್ಚುವುದಿಲ್ಲ. ಬದಲಿಗೆ ಅವರು ವ್ಯಕ್ತಿಗತವಾಗಿ ಕಲಾವಿದರನ್ನು ಗೌರವಿಸುತ್ತಾರೆ’ ಎಂಬುದು ಅವರ ಅಭಿಪ್ರಾಯ.

‘ಮಸಾನ್‌’ ಚಿತ್ರವು ಕಳೆದ ವರ್ಷ ಕಾನ್‌ ಚಲನಚಿತ್ರೋತ್ಸವದಲ್ಲಿ ಎರಡು ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು. ಈ ಚಿತ್ರದಲ್ಲಿ ರಿಚಾ, ವೇಶ್ಯಾವಾಟಿಕೆ ಮತ್ತು ಕೊಲೆಯ ಆರೋಪ ಎದುರಿಸುವ ಹದಿಹರೆಯದ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅನೇಕ ಸಂಕಷ್ಟಗಳನ್ನು ಎದುರಿಸಿ ತನ್ನ ಬದುಕನ್ನು ಕಟ್ಟಿಕೊಳ್ಳುವ ಗಟ್ಟಿ ಮನಸ್ಸಿನ ಪಾತ್ರದಲ್ಲಿ ರಿಚಾ ಮನೋಜ್ಞ ಅಭಿನಯಕ್ಕೆ ಪ್ರಶಂಸೆ ವ್ಯಕ್ತವಾಗಿತ್ತು.

ಇದೇ ಸಂದರ್ಭದಲ್ಲಿ ರಿಚಾ ತಮ್ಮ ವೃತ್ತಿಜೀವನದ ಆರಂಭಿಕ ಸಿನಿಮಾಗಳನ್ನೂ ನೆನಪಿಸಿಕೊಂಡರು. ‘ಅನುರಾಗ್‌ ಕಶ್ಯಪ್‌ ಅವರ ಗ್ಯಾಂಗ್‌ ವಾಸ್ಸೆಪುರ್‌ ನನ್ನ ವೃತ್ತಿಜೀವನದ ಮಹತ್ವದ ಚಿತ್ರ. 2008ರಲ್ಲಿ ನಾನು ‘ಓಯೇ ಲಕ್ಕಿ! ಲಕ್ಕಿ ಓಯೇ!’ ಚಿತ್ರದಲ್ಲಿ ನಟಿಸಿದ್ದೆ.

ಆದರೆ ಅದರಲ್ಲಿನ ನನ್ನ ಪಾತ್ರ ಅಷ್ಟೊಂದು ಪ್ರಮುಖವಾದದ್ದಾಗಿರಲಿಲ್ಲ. ಅದಾದ ನಂತರ ಕೆಲವು ಕಾಲ ಸಿನಿಮಾ ರಂಗದಿಂದ ದೂರವಿದ್ದೆ. ನನ್ನ ಮಟ್ಟಿಗೆ ನನ್ನ ಮೊದಲ ಪ್ರಮುಖ ಚಿತ್ರ ‘ಗ್ಯಾಂಗ್‌ ಆಫ್‌ ವಾಸ್ಸೆಪುರ್‌. ಅದರಿಂದ ಮುಂದೆ ನನಗೆ ತುಂಬ ಒಳ್ಳೊಳ್ಳೆಯ ಅವಕಾಶಗಳು ಸಿಗುತ್ತಿವೆ’ ಎಂದು ಅವರು ಹೇಳಿಕೊಂಡಿದ್ದಾರೆ.                 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT