ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಕ್ಕಳ ಸುರಕ್ಷತೆಗೆ ಹೆಚ್ಚು ಗಮನ ನೀಡಿ’

Last Updated 22 ಜುಲೈ 2014, 19:46 IST
ಅಕ್ಷರ ಗಾತ್ರ

ಬೆಂಗಳೂರು: ‘ಶಾಲೆಗಳನ್ನು ನಿರ್ಮಿಸಿ­ದರೆ ಸಾಲದು. ಹೆಣ್ಣು ಮಕ್ಕಳ ಸುರ­ಕ್ಷತೆಗೆ ಹೆಚ್ಚು ಒತ್ತು ಕೊಡಬೇಕಾ­ಗಿರು­ವುದು  ಶಾಲೆಗಳ ಆಡಳಿತ ಮಂಡ­ಳಿಯ ಕರ್ತವ್ಯ’   ಎಂದು ಲೋಕಸತ್ತಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮುಕುಂದ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತ­ನಾ­ಡಿದ ಅವರು, ‘ಹಣ ಮಾಡುವ ಉದ್ದೇಶ­­­ದಿಂದ  ಖಾಸಗಿ ಶಾಲೆಗಳು  ಅಣಬೆ­­­ಯಂತೆ  ಬೆಳೆಯುತ್ತಿದೆ.  ಖಾಸಗಿ ಶಾಲೆ­­ಗಳು ಹಣದ ಬಗ್ಗೆ  ಹೆಚ್ಚು  ಗಮನ ಹರಿ­ಸುತ್ತವೆಯೇ ಹೊರತು, ಹೆಣ್ಣು ಮಕ್ಕಳ ಸುರಕ್ಷತೆ ಬಗ್ಗೆ ಯಾವುದೇ ಕ್ರಮ ಕೈಗೊ­ಳ್ಳು­ವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿ­ದರು.

‘ಮಹಿಳೆಯರ ಮೇಲೆ  ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯ, ಅತ್ಯಾಚಾರದಂ­ತಹ ಕೃತ್ಯಗಳನ್ನು ನಿಯಂ­ತ್ರಿಸಲು ಪೊಲೀಸ್ ­­ವ್ಯವಸ್ಥೆ ಸಂಪೂರ್ಣ­ವಾಗಿ ವಿಫಲವಾಗಿದೆ. ಹೀಗಾಗಿ ಅಪಾಯ­­ಕಾರಿ  ಸಾರ್ವಜನಿಕ ಸ್ಥಳ­­ಗಳಲ್ಲಿ ಸಿಸಿ­ಟಿವಿ ಕ್ಯಾಮೆರಾ­ ಅಳ­ವಡಿ­ಸ­­ಬೇಕು. ಆನ್‌­ಲೈನ್ ಮೂಲಕ ದೂರು ದಾಖ­ಲಿಸುವ ವ್ಯವಸ್ಥೆ ಜಾರಿ ತರಬೇಕು’ ಎಂದು ಒತ್ತಾಯಿಸಿ­ದರು.

‘ನಗರದಲ್ಲಿ ಮಹಿಳಾ ಪೊಲೀಸ್ ಠಾಣೆ­ಗಳು ಹೆಚ್ಚಾಗಬೇಕು. ಪೊಲೀಸ್ ಅಧಿಕಾರಿಗಳಿಗೆ ಕಾನೂನಿನ ಬಗ್ಗೆ  ತಿಳಿವಳಿಕೆ  ಮೂಡಿಸಲು ಕಾರ್ಯಾಗಾರ  ಹಮ್ಮಿಕೊಳ್ಳಬೇಕು ಎಂದು ಆಗ್ರಹಿಸಿದರು.

ಶಾಲಾ ಬಸ್‌ ಚಾಲಕರು, ಆಯಾಗಳಿಗೆ ಜಾಗೃತಿ ಕಾರ್ಯಕ್ರಮ
ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಮೇಲಿನ ಲೈಂಗಿಕ ದೌರ್ಜ­ನ್ಯದ ವಿರುದ್ಧ ಜಾಗೃತಿ ಮೂಡಿಸಲು ನಗರದ ಗಿರಿನಗರ ದಲ್ಲಿರುವ  ಪೊಲೀಸ್ ಇಲಾ­ಖೆಯ ಸಹಯೋಗದಲ್ಲಿ ‘ಸ್ಯಾಮ್‌ ಟೂರ್ಸ್ ಅಂಡ್ ಟ್ರಾವೆಲ್ಸ್‌’  ಶಾಲಾ ಬಸ್‌್ ಚಾಲಕರು ಮತ್ತು ಆಯಾಗಳಿಗೆ ಜಾಗೃತಿ ಸಭೆ ನಡೆಸಿತು.

ಸಭೆಯಲ್ಲಿ ಗಿರಿನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಬಿ.ಬಿ.ಲಕ್ಷ್ಮೇಗೌಡ ಮಾತ­­ನಾಡಿ, ವಿದ್ಯಾರ್ಥಿಗಳ ಮೇಲೆ ನಡೆಯುವ ಲೈಂಗಿಕ ಕಿರುಕುಳವನ್ನು ತಡೆ­ಗಟ್ಟುವ ಕ್ರಮಗಳ ಬಗ್ಗೆ ವಿವರಿಸಿದರು. ಸಭೆಯಲ್ಲಿ ಡಾ.ಸುಮನ್, ಬಾಲಾಜಿ­ರಾವ್, ಉಮೇಶ್, ಸಂತೋಷ್ ಮತ್ತು ಗುರುರಾಜ್ ಒಡೆಯರ್  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT