ಬೆಂಗಳೂರು: ವಿಸ್ಮಯ ಪ್ರಕಾಶನ ನಗರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ್ ಅವರ ಸಮಗ್ರ ಮನೋವೈಜ್ಞಾನಿಕ ಸಾಹಿತ್ಯ ‘ಮನೋವಿಸ್ಮಯ’ದ 4 ಸಂಪುಟಗಳನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಸಂಪುಟಗಳ ಕುರಿತು ಮಾತನಾಡಿದ ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ, ‘ಚಂದ್ರಶೇಖರ್ ಅವರು ತಮ್ಮ ವೃತ್ತಿಜೀವನ ಅನುಭವ ಗಳನ್ನೇ ಕತೆಗಳ ಮೂಲಕ ತಾಂತ್ರಿಕ ಪದಗಳನ್ನು ಬಳಸದೇ ಸುಂದರವಾಗಿ ನಿರೂಪಿಸಿದ್ದಾರೆ. ಮುಂದಿನ ಪೀಳಿಗೆಗೆ ವೈದ್ಯ ಸಾಹಿತ್ಯ ಪರಿಚಯಿಸುವ ದೊಡ್ಡ ಕೆಲಸ ಮಾಡಿದ್ದಾರೆ’ ಎಂದು ಅಭಿಪ್ರಾಯ ಪಟ್ಟರು.

‘ಮನೋ ವಿಜ್ಞಾನ ಲೋಕದ ವಿಶ್ವಕೋಶಗಳಂತಿರುವ ಈ ಸಂಪುಟ ಗಳಲ್ಲಿ ಸಮಸ್ಯೆಗಳೊಂದಿಗೆ ಪರಿಹಾರ ಕೂಡ ತಿಳಿಸಲಾಗಿದೆ. ಪಂಡಿ ತನ ಉಪದೇಶಕ್ಕಿಂತ, ಸ್ನೇಹಿತನ ಆಪ್ತ ಸಲಹೆ ಭಾವ ಇವುಗಳಲ್ಲಿರುವ ಕತೆಗಳಲ್ಲಿ ಕಂಡುಬರುತ್ತದೆ. ಪ್ರತಿಯೊಬ್ಬ ಶಿಕ್ಷಕರು ಈ ಪುಸ್ತಕಗಳನ್ನು ಓದಲೇಬೇಕು’ ಎಂದು ಅಭಿಪ್ರಾಯಪಟ್ಟರು.

ಸಂಪುಟಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಆರೋಗ್ಯ ಇಲಾಖೆ ನಿವೃತ್ತ ಜಂಟಿ ನಿರ್ದೇಶಕಿ ಡಾ.ಲೀಲಾವತಿ ದೇವದಾಸ್, ‘ಮೂಢನಂಬಿಕೆಗಳನ್ನು ಹೊಗ ಲಾಡಿಸುವ ನಿಟ್ಟಿನಲ್ಲಿ ಚಂದ್ರಶೇಖರ್ ಅವರು ಜನಸಾಮಾನ್ಯರಿಗೆ ಅರ್ಥ ವಾಗುವಂತೆ ಸರಳ ಭಾಷೆಯಲ್ಲಿ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ’ ಎಂದು ಹೇಳಿದರು. ‘ಚಂದ್ರಶೇಖರ್ ಅವರ ಬಿಡಿ ಪುಸ್ತಕಗಳು, ಲೇಖನಗಳನ್ನು ಒಂದೆಡೆ ಸಂಕಲಿಸಿ ಸಂಪುಟಗಳನ್ನು ಹೊರ ತರುತ್ತಿರುವುದು ಸಂತಸದ ಸಂಗತಿ. ಈ ಪುಸ್ತಕಗಳು ಪ್ರತಿಯೊಂದು ಶಾಲಾ, ಕಾಲೇಜುಗಳ ಗ್ರಂಥಾಲಯದಲ್ಲಿ ಇರ ಬೇಕು’ ಎಂದು ಅಭಿಪ್ರಾಯಪಟ್ಟರು.

ಡಾ.ಸಿ.ಆರ್.ಚಂದ್ರಶೇಖರ್ ಮಾತನಾಡಿ, ‘ಜನಸಾಮಾನ್ಯರಿಗೆ ಇಷ್ಟ ವಾಗುವ ವೈದ್ಯಕೀಯ ಸಾಹಿತ್ಯ ಕುರಿತಂತೆ ಸಾಹಿತಿಗಳಲ್ಲಿ ಅಸಡ್ಡೆ ಇದೆ. ಹೀಗಾಗಿ, ಈ ಸಾಹಿತ್ಯವನ್ನು ಪ್ರಶಸ್ತಿಗಳಿಗೆ ಪರಿಗಣಿಸು ವಾಗ ನಿರ್ಲಕ್ಷ್ಯ ಮಾಡಲಾಗುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.