ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮರೆಯಾಗುತ್ತಿರುವ ಮಾನವೀಯ ಮೌಲ್ಯ’

Last Updated 26 ನವೆಂಬರ್ 2014, 20:37 IST
ಅಕ್ಷರ ಗಾತ್ರ

ಬೆಂಗಳೂರು: ‘ಆಧುನಿಕತೆ ಬೆಳೆ­ದಂತೆಲ್ಲಾ ಮನುಷ್ಯರಲ್ಲಿ ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿವೆ. ಪರಿಣಾಮ, ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚಾಗುತ್ತಿದೆ’ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ನ್ಯಾ. ಸಿ.ಜಿ. ಹುನಗುಂದ್ ಅಭಿಪ್ರಾಯಪಟ್ಟರು.

ನೆಹರೂ ಯುವಕೇಂದ್ರ, ಸರ್ದಾರ್‌ ವಲ್ಲಭಭಾಯಿ ಪಟೇಲ್ ಯುವ ಒಕ್ಕೂಟ, ಹಾಗೂ ಉನ್ನತಿ ಮಾನವ­ಹಕ್ಕುಗಳ ರಕ್ಷಣಾ ಸಂಘ ಜಂಟಿಯಾಗಿ ನಗರದಲ್ಲಿ ಬುಧವಾರ ಆಯೋಜಿಸಿದ್ದ ‘ಯುವ ನಾಯಕತ್ವ ಸಮುದಾಯ ಅಭಿವೃದ್ದಿ ತರಬೇತಿ ಶಿಬಿರ ಹಾಗೂ ಮಾನವಹಕ್ಕುಗಳ ಜಾಗೃತಿ ಕಾಯಕ್ರಮ’ ಉದ್ಘಾಟಿಸಿ  ಅವರು ಮಾತನಾಡಿದರು.

‘ಸಂವಿಧಾನದ ರಾಜ್ಯ ನೀತಿ ನಿರ್ದೇಶಕ ತತ್ವಗಳಲ್ಲಿ ಮಾನವ­ಹಕ್ಕುಗಳನ್ನು ಉಲ್ಲೇಖಿಸಲಾಗಿದೆ. ಈ ಹಕ್ಕುಗಳನ್ನು ಯಾರು ಕೂಡ ಉಲ್ಲಂಘಿಸಲಾಗದು. ಒಂದೊಮ್ಮೆ ವ್ಯಕ್ತಿಯ ಹಕ್ಕುಗಳು ಉಲ್ಲಂಘನೆ­ಯಾದರೆ ಲಿಖಿತವಾಗಿ, ಇ–ಮೇಲ್‌, ಫ್ಯಾಕ್ಸ್‌ ಅಥವಾ ಎಸ್‌ಎಂಎಸ್‌ ಮುಖಾಂತರ ಆಯೋಗಕ್ಕೆ ದೂರು ನೀಡಿದರೆ ಕ್ರಮಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಬಿ.ಆರ್.ಮುಕ್ತಾ ಅವರು ಮಾತನಾಡಿ, ‘ಇತ್ತೀಚೆಗೆ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಿ­ರುವುದು ಆತಂಕದ ವಿಚಾರವಾಗಿದೆ. ಆಯೋಗವು ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಮಕ್ಕಳು, ಷೋಷಕರು ಮತ್ತು ಶಿಕ್ಷಕರಲ್ಲಿ ಅರಿವು ಮೂಡಿಸುವ ಕಾರ್ಯ ನಡೆಸುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT