ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾಮ್‌’ ಬಾಳಿಕೆ ಅವಧಿ ವಿಸ್ತರಣೆ ಸಾಧ್ಯತೆ

ಪ್ರೊಪಲ್ಷನ್‌ ಸಿಸ್ಟಮ್‌ ಸೆಂಟರ್‌ ನಿರ್ದೇಶಕ ಕೆ.ಶಿವನ್‌ ಅಭಿಪ್ರಾಯ
Last Updated 26 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ತಿರುವನಂತಪುರ  (ಪಿಟಿಐ): ಮಂಗಳ ನೌಕೆಯ ಬಾಳಿಕೆ ಅವಧಿ ಯೋಜಿತ ಆರು ತಿಂಗಳಿನಿಂದ ಒಂದು ವರ್ಷದವರೆಗೂ ವಿಸ್ತರಣೆ-ಯಾಗುವ ಸಾಧ್ಯತೆ ಇದೆ ಎಂದು ಇಲ್ಲಿನ ವಲೈಮಲ ಬಳಿ ಇರುವ ಲಿಕ್ವಿಡ್‌ ಪ್ರೊಪಲ್ಷನ್‌ ಸಿಸ್ಟಮ್‌ ಸೆಂಟರ್‌  ( ಎಲ್‌ಪಿಎಸ್‌ಸಿ) ನಿರ್ದೇಶಕ ಕೆ.ಶಿವನ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಂಗಳಯಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಲ್‌ಪಿಎಸ್‌ಸಿ ವಿಜ್ಞಾನಿಗಳಿಗೆ ಹಮ್ಮಿಕೊಂಡಿದ್ದ ಸನ್ಮಾನದ ಬಳಿಕ ಸುದ್ದಿಗಾರರೊಂದಿಗೆ ಮಾತ-ನಾಡಿ, ‘ ನೌಕೆಯ ಬಾಳಿಕೆ ಅವಧಿ ಕನಿಷ್ಠ ಆರು ತಿಂಗಳು ಎಂದು ಅಂದಾಜಿ­ಸಲಾಗಿದೆ. ಆದರೆ  ಇದು ಒಂದು ವರ್ಷದ­ವರೆಗೂ ವಿಸ್ತರಿಸಬಹುದು’ ಎಂದರು.
‘ನೌಕೆಯಲ್ಲಿರುವ ಇಂಧನದ ಕೊನೆಯ ಗ್ರಾಮ್‌ ಉರಿಯುವವರೆಗೂ ಉಪಗ್ರಹವನ್ನು ಸದ್ಬಳಕೆ ಮಾಡಿಕೊಳ್ಳುವುದು ನಮ್ಮ ಉದ್ದೇಶ’ ಎಂದು ಅವರು ಸ್ಪಷ್ಟಪಡಿಸಿದರು.

ಮಂಗಳಯಾನಕ್ಕೆ ವ್ಯಕ್ತವಾದ ಟೀಕೆ ಕುರಿತಂತೆ ಕೇಳಿದ ಪ್ರಶ್ನೆಗೆ, ‘ಮಂಗಳ ಗ್ರಹದ ಛಾಯಾಚಿತ್ರ-ಗಳನ್ನು ತೆಗೆಯು­ವುದು ಮಾತ್ರವೇ ಈ ಯೋಜ-ನೆಯ ಉದ್ದೇಶವಲ್ಲ. ಇದು ನಾವು ಯುವ ಪೀಳಿಗೆಗೆ ಕೊಡುವ ಅತ್ಯಮೂಲ್ಯ ಕಾಣಿಕೆಯಾಗಿದೆ. ಯುವಜನತೆಗೆ ಇದೊಂದು ಅವಕಾಶ ಹಾಗೂ ಸವಾಲು ಕೂಡ ಹೌದು. ಸವಾಲು ಇದ್ದಾಗ ಮಾತ್ರ ಮುನ್ನಡೆ ಸಾಧ್ಯ’ ಎಂದರು. ‘೩೦೦ದಿನ-ಗಳವರೆಗೆ ಸ್ತಬ್ಧವಾಗಿರಿಸಲಾಗಿದ್ದ ನೌಕೆಯ ಎಂಜಿನ್‌ ಅನ್ನು ಮತ್ತೆ ಉರಿಯುವಂತೆ ಮಾಡಿದ್ದು ಮಂಗಳಯಾನದ ಅತಿಸಂಕೀರ್ಣ ಭಾಗ. ಯಾನ ಯಶಸ್ವಿ­ಯಾ­ಗಿದ್ದು, ವಿಶ್ವ-ಭೂಪಟದಲ್ಲಿ ಭಾರತವನ್ನು ಅಗ್ರಸ್ಥಾನಕ್ಕೆ
ಕೊಂಡೊಯ್ದಿದೆ’ ಎಂದು  ಹೆಮ್ಮೆಯಿಂದ ನುಡಿದರು. 

‘ಮಾನವಸಹಿತ ಚಂದ್ರಯಾನವನ್ನು ಸಾಧ್ಯ-ವಾಗಿ-ಸುವಂತಹ ತಂತ್ರಜ್ಞಾನವನ್ನು   ಎಲ್‌ಪಿಎಸ್‌ಸಿ ಅಭಿವೃದ್ಧಿಪಡಿಸುತ್ತಿದೆ’ ಎಂದೂ ಹೇಳಿ-ದರು.‘ಹೆಚ್ಚಿನ ಸಾಮರ್ಥ್ಯದ ಪರೀಕ್ಷಾ ಸಾಧನ ಸಲಕರಣೆಗಳನ್ನು ಎಲ್‌ಪಿಎಸ್‌ಸಿ ಅಭಿವೃದ್ಧಿಪಡಿಸುತ್ತಿದೆ.

ಮಿತಿಯ ನಡು­ವೆಯೂ ನಾವು ಮಾನವ-ಸಹಿತ ಬಾಹ್ಯಾ­ಕಾಶ ಯಾನ  ಕೈಗೊಳ್ಳಬಲ್ಲೆವು. ಇದಕ್ಕೆ ಶ್ರೇಷ್ಠ ಗುಣಮಟ್ಟದ ನೌಕೆ ಬೇಕಾ­ಗುತ್ತದೆ. ಜೀವ ರಕ್ಷಕ ಸಾಧನಗಳನ್ನೂ ಅಭಿವೃದ್ಧಿಪಡಿಸ-ಬೇಕಾಗುತ್ತದೆ’ ಎಂದು ಎಲ್‌ಪಿ-ಎಸ್‌ಸಿ ಸಹಾಯಕ ನಿರ್ದೇಶಕ ಎನ್‌್.ಆರ್‌.ವಿಷ್ಣು ಕಾರ್ತ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT