ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೀಸಲು ಕ್ಷೇತ್ರಗಳಿಂದ ಉದ್ಯಮಿಗಳ ಆಯ್ಕೆ’

Last Updated 25 ನವೆಂಬರ್ 2014, 20:06 IST
ಅಕ್ಷರ ಗಾತ್ರ

ಬೆಂಗಳೂರು: ‘ಇತ್ತೀಚಿನ ವರ್ಷಗಳಲ್ಲಿ ಮೀಸಲು ಕ್ಷೇತ್ರಗಳಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮಿಗಳು, ಮೇಲ್ವರ್ಗದ ಸೇವಕರು ಆಯ್ಕೆಯಾಗುತ್ತಿದ್ದಾರೆ. ಇದು ಅಪಾಯಕಾರಿ ಬೆಳವಣಿಗೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಲ್‌.ಹನುಮಂತಯ್ಯ ಕಳವಳ ವ್ಯಕ್ತಪಡಿಸಿದರು.

‘ಅಕ್ಷಯ ಫೌಂಡೇಶನ್‌’ ಆಶ್ರಯ­ದಲ್ಲಿ ನಗರದ ನಯನ ಸಭಾಂಗಣದಲ್ಲಿ ಮಂಗಳವಾರ ನಡೆದ ‘ಪ್ರಸಕ್ತ ರಾಜಕಾ­ರಣದಲ್ಲಿ ದಲಿತರ ಸ್ಥಿತಿಗತಿ’ ಕುರಿತ ವಿಚಾರ­ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಈ ಹಿಂದೆ ಮೀಸಲು ಕ್ಷೇತ್ರಗಳಲ್ಲಿ ಹಿಂದುಳಿದವರ ಬಗ್ಗೆ ನೈಜ ಕಾಳಜಿ ಹೊಂದಿರುವವರು ಆಯ್ಕೆಯಾಗುತ್ತಿ­ದ್ದರು. ಇಂದು ಇದಕ್ಕೆ ತದ್ವಿರುದ್ಧ ಸ್ಥಿತಿ ಇದೆ. ಈ ಕಾರಣದಿಂದ ಸಂಘಟನೆಗಳು ದಲಿತರಲ್ಲಿ ರಾಜಕೀಯ ಜಾಗೃತಿ ಮೂಡಿ­ಸಬೇಕು’ ಎಂದು ಅವರು ಸಲಹೆ ನೀಡಿದರು.

‘ಇತ್ತೀಚಿನ ದಿನಗಳಲ್ಲಿ ದಲಿತ ಸಂಘಟ­ನೆಗಳು ಹೋರಾಟ ಕೈಬಿಟ್ಟು ತಟಸ್ಥ ಧೋರಣೆ ತಳೆದಿವೆ. ಇದರಿಂದಾಗಿ ದಲಿತರ ಸಮಸ್ಯೆಗಳೆಲ್ಲ ಪರಿಹಾರ ಆಗಿವೆಯೇ ಎಂಬ ಅನುಮಾನ ಮೂಡು­ತ್ತದೆ. ಆದರೆ, ದಲಿತರ ಸಮಸ್ಯೆ ಹೆಚ್ಚಿದೆ’ ಎಂದರು.

‘ರಾಜಕಾರಣದಲ್ಲಿ ದಲಿ­ತರು ಗಳಿಸಿ­ದ್ದಕ್ಕಿಂತ ಕಳೆದು­ಕೊಂಡದ್ದೇ ಹೆಚ್ಚು. ಅವ­ರಿಗೆ ಸಿಗಬೇಕಾದ ಸ್ಥಾನ­ಮಾನ ಸರಿ­ಯಾಗಿ ಸಿಕ್ಕಿಲ್ಲ’ ಎಂದು ಪತ್ರಕರ್ತ ಇಂದೂಧರ ಹೊನ್ನಾಪುರ ಅವರು ಬೇಸರ ವ್ಯಕ್ತಪಡಿಸಿದರು.

ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್‌, ಎಸ್‌ಸಿ/­ಎಸ್‌ಟಿ ಉದ್ದಿಮೆದಾರರ ಸಂಘದ ಕಾರ್ಯಾಧ್ಯಕ್ಷ ಸಿ.ಜಿ.ಶ್ರೀನಿವಾಸನ್‌, ಜಾನಪದ ಅಕಾಡೆಮಿಯ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್‌, ಕವಿ ವಡ್ಡಗೆರೆ ನಾಗರಾ­ಜಯ್ಯ, ಅಕ್ಷಯ ಪ್ರತಿಷ್ಠಾನದ ಅಧ್ಯಕ್ಷ ಎನ್‌.­ಕೃಷ್ಣಮೂರ್ತಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT