ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೂರು ನಿಮಿಷ ವ್ಯಯಿಸಿ ದೇಶಕ್ಕೆ ಕೊಡುಗೆ ನೀಡಿ’

Last Updated 15 ಏಪ್ರಿಲ್ 2014, 20:34 IST
ಅಕ್ಷರ ಗಾತ್ರ

ರಾಮನಗರ: ‘ಯಾವುದೇ ಆಸೆ, ಆಮಿಷ, ಒತ್ತಡಗಳಿಗೆ ಒಳಗಾಗು­ವುದಿಲ್ಲ. ಯೋಗ್ಯ ಅಭ್ಯರ್ಥಿ ಅನ್ನಿಸುವ­ವರಿಗೆ ಮಾತ್ರ ಮತ ಚಲಾಯಿಸುತ್ತೇವೆ’

–ಇದು 18 ವರ್ಷ ತುಂಬಿ ಇದೇ ಪ್ರಥಮ ಬಾರಿಗೆ ಮತದಾನದ ಹಕ್ಕು ಪಡೆ­ದಿರುವ ಯುವ ಮತದಾರರ ಮನದಾಳದ ಮಾತು.
ಜಿಲ್ಲಾ ಸ್ವೀಪ್ ಸಮಿತಿಯು ಬಿಡದಿ ಬಳಿಯ ಇನ್ನೋವೆಟಿವ್‌ ಫಿಲಂ ಸಿಟಿ­ಯಲ್ಲಿ ಸೋಮವಾರ ಹಮ್ಮಿ­ಕೊಂಡಿದ್ದ ಮತದಾನ ಜಾಗೃತಿ ಕಾರ್ಯ­ಕ್ರಮದಲ್ಲಿ ಯುವ ಮತದಾರರ ಹಾಗೂ ವಿದ್ಯಾ­ರ್ಥಿ­ಗಳು ಮತದಾನ ಕುರಿತು ತಮ್ಮ ಅಭಿ­ಪ್ರಾಯ ಹಂಚಿಕೊಂಡರು.

ಮಂಡ್ಯದ ಶೃತಿ, 2ನೇ ಪಿ.ಯು ವಿದ್ಯಾ­ರ್ಥಿನಿ  ನಂದಿನಿ, ಮೈಸೂರಿನ ಅರ್ಪಿತಾ, ರಾಮನಗರದ ಸರ್ಕಾರಿ  ಕಾನೂನು ಕಾಲೇಜಿನ ವಿದ್ಯಾರ್ಥಿನಿ ಆಶಾ ಸೇರಿ­­ದಂತೆ ಹಲವಾರು ಯುವ ಮತದಾ–ರರು ಈ ಬಾರಿಯ ಲೋಕಸಭಾ ಚುನಾ­ವಣೆಯಲ್ಲಿ ಕಡ್ಡಾಯ­ವಾಗಿ ಮತ ಚಲಾಯಿಸುತ್ತೇವೆ. ನಮಗೆ ದೇಶದ ಭವಿಷ್ಯ ಮುಖ್ಯ. ಇತರೆ ಎಲ್ಲವೂ ನಗಣ್ಯ ಎಂದು ಹೇಳಿದರು.

ವಿದ್ಯಾರ್ಥಿನಿ ಶೃತಿ ಮಾತನಾಡಿ, ಉತ್ತಮ ಅಭ್ಯರ್ಥಿಗೆ ಈ ಬಾರಿಯ ನನ್ನ ಮತ ಎಂದರು.

ನಂದಿನಿ ಅವರು ಪ್ರತಿ ಸರ್ಕಾರಗಳ ಸಾಧನೆ, ಅಭಿವೃದ್ಧಿ, ದೇಶಕ್ಕೆ ಕೊಡುಗೆಗಳನ್ನು ಅವಲೋ­ಕಿಸಿದ್ದು, ಯಾರಿಗೆ ಮತ ನೀಡಿದರೆ ದೇಶಕ್ಕೆ ಹಿತ ಎಂಬುದನ್ನು ಚಿಂತಿಸಿ ಮತ ನೀಡುವೆ ಎಂದು ಪ್ರತಿಕ್ರಿಯಿಸಿದರು. ವಿದ್ಯಾರ್ಥಿನಿ ಅರ್ಪಿತಾ ಮಾತ­ನಾಡಿ, ಹಣ ಕೊಡುವ ಅಭ್ಯರ್ಥಿಗಳಿಗೆ ಮತ ಚಲಾ­ಯಿಸುವುದಿಲ್ಲ. ಅವರು ಕೊಡುವ ಹಣ ಅಥವಾ ವಸ್ತುಗಳು ಒಂದು ದಿನಕ್ಕೆ ತೃಪ್ತಿ ನೀಡುತ್ತವೆ. ಆದರೆ, ಇದರಿಂದ ನಾವು ಜೀವಮಾನವಿಡೀ ನೋವು ಅನು­ಭವಿಸಬೇಕಾಗುತ್ತದೆ. ಪ್ರಾಮಾಣಿಕ ಹಾಗೂ ಜನೋಪಯೋಗಿ ಅಭ್ಯರ್ಥಿಗೇ ನನ್ನ ಮತ ಎಂದು ಹೇಳಿದರು.

ವಿದ್ಯಾರ್ಥಿನಿ ಆಶಾ ಮಾತನಾಡಿ, ಶೇ 100ರಷ್ಟು ಮತದಾನ ಆಗಲೇ ಬೇಕು. ಇದಕ್ಕಾಗಿ ನಾನು ಮತ ಚಲಾ­ಯಿಸುವುದಲ್ಲದೇ, ಅನಕ್ಷರಸ್ಥರು ಹಾಗೂ ಮತದಾನದ ಮಹತ್ವ ಅರಿಯದರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಿ ಮತ­ದಾನ ಮಾಡಿಸುವಂತೆ ಪ್ರೇರೇಪಿಸುತ್ತೇನೆ ಎಂದರು.

ಕಾರ್ಯ­ಕ್ರಮಕ್ಕೆ ಚಾಲನೆ ನೀಡಿ, ವಿದ್ಯಾರ್ಥಿಗಳು ಹಾಗೂ ಯುವ ಮತದಾರರ ಅನಿಸಿಕೆ–ಗಳನ್ನು ಆಲಿಸಿದ ಜಿ.ಪಂ ಸಿಇಒ ಡಾ. ಎಂ.ವಿ.ವೆಂಕಟೇಶ್ ಮಾತನಾಡಿ, ‘ಇದೇ 17 ರಂದು ಜರುಗಲಿರುವ ಮತ­ದಾನಕ್ಕೆ ಕೇವಲ ಮೂರು ನಿಮಿಷ ವ್ಯಯಿಸಿ ದೇಶಕ್ಕೆ ಕೊಡುಗೆ ನೀಡಿ ಎಂದು ಮನವಿ ಮಾಡಿದರು.

ಜಿ.ಪಂ ಸಿಪಿಒ ಎಸ್.ಧನುಷ್ ಮಾತ­ನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಶೇ 80 ಕ್ಕೂ ಹೆಚ್ಚು ಮತದಾನವಾಗುತ್ತಿದೆ. ಆದರೆ, ಸುಶಿಕ್ಷಿ­ತರೇ ಹೆಚ್ಚಿರುವ ನಗರ ಪ್ರದೇಶದಲ್ಲಿ ಇದರ ಪ್ರಮಾಣ ಶೇ 40 ರಷ್ಟು ಮತದಾನವಿದೆ. ಜಿಲ್ಲೆ­ಯಲ್ಲಿನ 33 ಮತಗಟ್ಟೆಗಳಲ್ಲಿ ಶೇ 50 ಕ್ಕಿಂತ ಕಡಿಮೆ ಮತದಾನ­ವಾಗಿರುವುದು ವಿಷಾದ­ನೀಯ ಎಂದರು.

ಬಿ.ಸಿ.ಎಂ ಜಿಲ್ಲಾ ಅಧಿಕಾರಿ ಸುಮಯ್ಯ ರೂಹಿ, ಸ್ವೀಪ್ ಸಮಿತಿ ನೋಡೆಲ್ ಅಧಿಕಾರಿ ಹಮೀದ್ ಖಾನ್, ವಾರ್ತಾ ಸಹಾಯಕ ಎಂ.ವಿ.ರಾಘ­ವೇಂದ್ರ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಗುರುದತ್, ಸಮಾಜ ಕಲ್ಯಾಣ ಇಲಾಖೆಯ ಕೆ.ಸತೀಶ್‌ ಗೌಡ, ಮಂಚನಾ­ಯಕನಹಳ್ಳಿ ಪಿ.ಡಿ.ಓ ರಾಮಕೃಷ್ಣ, ಇಟ್ಟಮಡು ಪಿಡಿಒ ಎಂ. ಕಾರ್ಯದರ್ಶಿ ಲೋಕೇಶ್, ಶಿವಕುಮಾರ್, ಸೀನಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT