ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೂಲದಲ್ಲಿ ‘ಜಾತ್ಯತೀತ’, ‘ಸಮಾಜವಾದಿ’ ಪದಗಳಿಲ್ಲ’

Last Updated 28 ಜನವರಿ 2015, 14:33 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್‌): ಸಂವಿಧಾನದ ಮೂಲ ಪೂರ್ವ ಪೀಠಿಕೆಯಲ್ಲಿ ‘ಜಾತ್ಯತೀತ’, ‘ಸಮಾಜವಾದಿ’ ಪದಗಳಿಲ್ಲ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ರಾಜವರ್ಧನ್ ಸಿಂಗ್ ರಾಠೋಡ್ ಹೇಳಿದ್ದಾರೆ.

66ನೇ ಗಣರಾಜ್ಯೋತ್ಸವದ ದಿನ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಪ್ರಕಟಿಸಿರುವ ಜಾಹೀರಾತಿನಲ್ಲಿ ಸಂವಿಧಾನದ ಪೀಠಿಕೆಯಲ್ಲಿ ‘ಜಾತ್ಯತೀತ’, ‘ಸಮಾಜವಾದಿ’ ಪದಗಳಿಲ್ಲದ ಚಿತ್ರವನ್ನು ಬಳಸಿರುವುದಕ್ಕೆ ಸರ್ಕಾರ ಟೀಕೆಗೆ ಗುರಿಯಾಗಿದೆ.

‘ಸಂವಿಧಾನವನ್ನು ಗೌರವಿಸುವುದಕ್ಕಾಗಿ ಪೀಠಿಕೆಯ ಮೂಲ ಚಿತ್ರವನ್ನು ಜಾಹೀರಾತಿಗಾಗಿ ಬಳಸಿಕೊಳ್ಳಲಾಗಿದೆ’ ಎಂದು ರಾಠೋಡ್‌ ತಿಳಿಸಿದ್ದಾರೆ.

42ನೇ ತಿದ್ದುಪಡಿಗೂ ಮುಂಚಿನ ಹಾಗೂ 1976ರ 42ನೇ ತಿದ್ದುಪಡಿ ನಂತರದ ಪೀಠಿಕೆಯ ಚಿತ್ರಗಳನ್ನು ಟ್ವೀಟ್‌ ಮಾಡಿರುವ ರಾಠೋಡ್‌

ಅವರು ಮೂಲ ಪೀಠಿಕೆ ಮತ್ತು ‘ಜಾತ್ಯತೀತ’, ‘ಸಮಾಜವಾದಿ’ ಪದಗಳನ್ನು ಬಳಸಿರುವ 1976ರ ನಂತರದ ಪೀಠಿಕೆಯ ಚಿತ್ರಗಳ ಬಗ್ಗೆ ವಿವರಣೆ ನೀಡಿದ್ದಾರೆ.

‘ಸಂವಿಧಾನದ ಪೀಠಿಕೆಯ ವಾರ್ಷಿಕೋತ್ಸವವಾಗಿ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ನಮ್ಮ ಪೂರ್ವಿಕರು ರೂಪಿಸಿದ ಪೀಠಿಕೆಯ ಮೂಲ ಚಿತ್ರವನ್ನು ಜಾಹೀರಾತಿಗೆ ಬಳಸಲಾಗಿದೆ. ‘ಜಾತ್ಯತೀತ’ ಮತ್ತು ‘ಸಮಾಜವಾದಿ’ ಪದಗಳನ್ನು 1976ರ 42ನೇ ತಿದ್ದುಪಡಿಯ ನಂತರ ಪೀಠಿಕೆಗೆ ಸೇರಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT