ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೋದಿಯಿಂದ ದೇಶದ ಘನತೆ ವೃದ್ಧಿ’

Last Updated 19 ಏಪ್ರಿಲ್ 2015, 12:30 IST
ಅಕ್ಷರ ಗಾತ್ರ

ಶಿರ್ವ:  ಪ್ರಧಾನಮಂತ್ರಿ  ನರೇಂದ್ರ ಮೋದಿಯವರು ಭಾರತದ ಘನತೆ ಗೌರವಗಳನ್ನು ಜಾಗತಿಕ ಮಟ್ಟಕ್ಕೆ ವೃದ್ಧಿಸಿದ ಧೀಮಂತ ನಾಯಕ ಎಂದು ಬಿಜೆಪಿ ನಾಯಕ, ಉದ್ಯಮಿ ಗುರ್ಮೆ ಸುರೇಶ ಶೆಟ್ಟಿ ನುಡಿದರು. ಬಂಟಕಲ್ಲು ವಿಶ್ವಕರ್ಮ ಸಂಘದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ರೈತಪರ ಹೋರಾಟದ ಮೂಲಕ  ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಇತರ ನಾಯಕರ ಶ್ರಮದ ಫಲವಾಗಿ ದಕ್ಷಿಣ ಭಾರತದಲ್ಲಿ ಬಿಜೆಪಿ ಬಲವರ್ಧನೆ ಗೊಂಡಿದೆ.

ಕೇಂದ್ರ ಸರಕಾರದ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ತಳಮಟ್ಟದ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಪಕ್ಷದ ಬಲ ವರ್ಧನೆಗಾಗಿ ಭಾನುವಾರ ಕಾಪುವಿನಲ್ಲಿ ಜರುಗುವ ಬೃಹತ್ ಬಿಜೆಪಿ ಸಮಾ ವೇಶದಲ್ಲಿ ಸರ್ವರೂ ಪಾಲ್ಗೊಳ್ಳುವಂತೆ ವಿನಂತಿಸಿಕೊಂಡರು. ಸಭಾಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಮುರಳೀಧರ್ ಆಚಾರ್ಯ ವಹಿಸಿದ್ದರು.

ಸಂಘದ ಕಾರ್ಯದರ್ಶಿ ರಮೇಶ್ ಬಂಟಕಲ್ ಸ್ವಾಗ ತಿಸಿದರು.ವೇದಿಕೆಯಲ್ಲಿ ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಜಗದೀಶ ಆಚಾರ್ಯ ಕಾಪು, ರಾಷ್ಠ್ರೀಯ ಸ್ವಯಂಸೇವಕ ಸಂಘದ ಕಾಪು ತಾಲೂಕ್ ಸಂಘ ಚಾಲಕ ತಾರನಾಥ್ ಕೊಟ್ಯಾನ್, ವಿಜಯ ಕರ್ಕೇರಾ ಕಾಪು, ವಿನೋದಾ ಜೆ.ಆಚಾರ್ಯ ಉಪಸ್ಥಿತರಿದ್ದರು. ದಿಂಡಿ ಬೆಟ್ಟು ಗಂಗಾಧರ ಆಚಾರ್ಯ ಪ್ರಾಸ್ತಾವಿಕ ಮಾತುಗಳಲ್ಲಿ ವಿಶ್ವಕರ್ಮ ಸಂಘದ ಬೆಳವಣಿಗೆ ಮತ್ತು ಸಾಧನೆಗಳ ಬಗ್ಗೆ ಮಾಹಿತಿ ನೀಡಿದರು.

ಇತ್ತೀಚೆಗೆ ನಿಧನರಾದ ಸಂಗದ ಹಿರಿಯ ಸದಸ್ಯ  ಇನ್ನಂಜೆ ಯೋಗೀಶ ಆಚಾರ್ಯರವರಿಗೆ ಶೃದ್ಧಾಂಜಲಿ ಅರ್ಪಿಸಲಾಯಿತು. ಹೇರೂರು ಮಾಧವ ಆಚಾರ್ಯ ನಿರೂಪಿಸಿದರು. ಗಾಯತ್ರಿ ಮಹಿಳಾ ಮಂಡಲದ ಸದಸ್ಯೆ ಶಶಿಕಲಾ ಆಚಾರ್ಯ ಪ್ರಾರ್ಥಿಸಿ ದರು. ವಿಶ್ವಕರ್ಮ ಸೇವಾದಳದ ಅಧ್ಯಕ್ಷ ರಾಜೇಶ ಆಚಾರ್ಯ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT