ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೆಡ್‌ ಕ್ರಾಸ್‌ ಸಂಸ್ಥೆ ಕಾರ್ಯ ಆದರ್ಶಪೂರ್ಣ’

Last Updated 27 ಮೇ 2015, 4:57 IST
ಅಕ್ಷರ ಗಾತ್ರ

ಕುಂದಾಪುರ: ಮನುಷ್ಯನ ಬಯಸಿದ್ದನ್ನು ಪಡೆಯಲು ಇಂದಿನ ಆಧುನಿಕತೆಯ ವಿಧಾನದಲ್ಲಿ ಹಲವು ಮಾರ್ಗಗಳಿವೆ, ಆದರೆ ಮಾನವನ ಜೀವವನ್ನು ಉಳಿಸುವ ರಕ್ತವನ್ನು ದಾನಿಗಳಿಂದ ಅಲ್ಲದೆ ಬೇರೆ ಯಾವುದೆ ವಿಧಾನದಿಂದಲೂ ಪಡೆ ಯಲು ಸಾಧ್ಯವಿಲ್ಲ ಎಂಬುದನ್ನು ಪ್ರತಿಯೊ ಬ್ಬರು ಅರ್ಥ ಮಾಡಿಕೊಳ್ಳಬೇಕು ಎಂದು ರಾಜ್ಯಸಭಾ ಸದಸ್ಯ ಆಸ್ಕರ್‌ ಫರ್ನಾಂಡಿಸ್‌ ಹೇಳಿದರು.

ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆಯ ನೆರವಿನಿಂದ ಪ್ರಾರಂಭವಾದ ನೂತನ ರಕ್ತ ನಿಧಿ ಕೇಂದ್ರವನ್ನು ಮಂಗಳವಾರ ಲೋಕಾ ರ್ಪಣೆ ಮಾಡಿ ಅವರು ಮಾತನಾಡಿದರು. ರಕ್ತ ನಿಧಿ ಕೇಂದ್ರದ ಸ್ಥಾಪನೆಯಂತಹ ಮಹತ್ತರವಾದ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಮೂಲಕ ರೆಡ್‌ ಕ್ರಾಸ್‌ ಸಂಸ್ಥೆ ಆದರ್ಶನೀಯ ಕೆಲಸವನ್ನು ಮಾಡುತ್ತಿದೆ ಎಂದರು.

ಮನುಷ್ಯನ ಪ್ರಾಣವನ್ನು ಉಳಿಸುವ ಹಾಗೂ ಆಪತ್ತಿನಲ್ಲಿ ಆತನಿಗೆ ರಕ್ಷಣೆ ನೀಡುವ ಕಾರ್ಯಗಳು ರೆಡ್‌ ಕ್ರಾಸ್‌ ಸಂಸ್ಥೆಯ ಹಿರಿಮೆಯನ್ನು ಹೆಚ್ಚಿಸುತ್ತಿದೆ. ರೆಡ್‌ ಕ್ರಾಸ್‌ ಸಂಸ್ಥೆ ಯುದ್ಧ ಸಂದರ್ಭದಲ್ಲಿ ಗಾಯಾಳುಗಳ ನೆರವಿಗೆ ಸ್ಪಂದಿಸುವ ಮೂಲಕ ತನ್ನ ಬದ್ದತೆಯನ್ನು ತೋರಿ ಸುತ್ತಿದೆ ಎಂದು ಅವರು ಇಂತಹ ಮಹ ತ್ಕಾರ್ಯಕ್ಕೆ ತನ್ನ ರಾಜ್ಯ ಸಭಾ ನಿಧಿಯ ₨41 ಲಕ್ಷ  ಬಳಕೆ ಅಗುತ್ತಿರುವುದು ಸಂತೋಷ ತಂದಿದೆ ಎಂದು ನುಡಿದರು.

ರಾಜ್ಯ ರೆಡ್‌ ಕ್ರಾಸ್‌ ಸಂಸ್ಥೆಯ ಸಭಾಪತಿ ಬಸ್ರೂರು ರಾಜೀವ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿಯ ಉಪಾಧ್ಯಕ್ಷ ಡಾ.ಸಿ.ಸೋಮಶೇಖರ , ಕಾರ್ಯದರ್ಶಿ ಅಶೋಕ್‌ಕುಮಾರ ಶೆಟ್ಟಿ, ರಾಜ್ಯ ರಕ್ತನಿಧಿಯ ಸಂಚಾಲಕ ಎ.ಬಿ ಶೆಟ್ಟಿ, ಕುಂದಾಪುರ ಕಂದಾಯ ಉಪವಿಭಾಗದ ಸಹಾಯಕ ಆಯುಕ್ತೆ ಚಾರುಲತಾ ಸೋಮಾಲ್‌, ತಹಸೀಲ್ದಾರ್‌ ಗಾಯತ್ರಿ ನಾಯಕ್‌, ಪುರಸಭಾ ಅಧ್ಯಕ್ಷೆ ಕಲಾವತಿ ಯು.ಎಸ್‌, ಬ್ಲಾಸೆಂ ಫರ್ನಾಂಡಿಸ್‌, ರೆಡ್‌ ಕ್ರಾಸ್‌ ಕುಂದಾಪುರ ಶಾಖೆಯ ಉಪ ಸಭಾಪತಿ ಡಾ.ಉಮೇಶ್‌ ಪುತ್ರನ್‌, ಗೌರವ ಕಾರ್ಯದರ್ಶಿ  ವೈ ಸೀತಾರಾಮ ಶೆಟ್ಟಿ ಹಾಗೂ ಗೌರವ ಕೋಶಾಧಿಕಾರಿ ಶಿವರಾಮ ಶೆಟ್ಟಿ ಇದ್ದರು. ಆಸ್ಕರ್‌ ಫರ್ನಾಂಡಿಸ್‌ ದಂಪತಿಯನ್ನು ಗೌರವಿಸಲಾಯಿತು.

ಕುಂದಾಪುರದ ವರ್ತಕರ ಅಸೋಸಿ ಯೇಶನ್‌ ವತಿಯಿಂದ ರಕ್ತ ನಿಧಿ ಸಂಸ್ಥೆಗೆ ನೀಡ ಲಾದ ದೇಣಿಗೆಯನ್ನು ಸ್ವೀಕರಿಸ ಲಾಯಿತು. ರಕ್ತನಿಧಿ ಕೇಂದ್ರದ ಶಾಖೆಯ ಸಭಾಪತಿ ಎಸ್.ಜಯಕರ ಶೆಟ್ಟಿ ಸ್ವಾಗತಿಸಿದರು, ಪತ್ರಕರ್ತ ಯು.ಎಸ್.ಶೆಣೈ ಅವರು ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT