ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೋಟರಿ ಸಾಮಾಜಿಕ ಸೇವೆಯ ವೇದಿಕೆ’

Last Updated 16 ಏಪ್ರಿಲ್ 2014, 19:53 IST
ಅಕ್ಷರ ಗಾತ್ರ

ಬೆಂಗಳೂರು: ‘ಶಿಕ್ಷಣ ಮತ್ತು ಮೂಲ ಸೌಕರ್ಯ ಒದಗಿಸುವುದು ಹಾಗೂ ಪೋಲಿಯೊ ನಿರ್ಮೂಲನೆಯಂತಹ ಸಾಮಾಜಿಕ ಸೇವೆಯ  ಉದ್ದೇಶದಿಂದ ಉದ್ಯಮಿಗಳು ಮತ್ತು ವ್ಯಾಪಾರಿಗಳು ಒಂದೆಡೆ ಸೇರಿರುವ ವೇದಿಕೆಯೇ ರೋಟರಿ ಇಂಟರ್‌ನ್ಯಾಷನಲ್’ ಎಂದು ರೋಟರಿ ಇಂಟರ್‌ನ್ಯಾಷನಲ್‌ನ ಬೆಂಗ­ಳೂರು ಜಿಲ್ಲಾ ಕ್ಲಬ್‌ನ ಸದಸ್ಯ ಡಾ.ಎಸ್.­ನಾಗೇಂದ್ರ ಹೇಳಿದರು.

ಇಂಡಿಯನ್ ಇನ್‌ಸ್ಟಿಟ್ಯೂಟ್  ಆಫ್ ವರ್ಲ್ಡ್‌ ಕಲ್ಚರ್ ಮತ್ತು ರೋಟರಿ ಕ್ಲಬ್‌ ವತಿಯಿಂದ ಬುಧವಾರ ಏರ್ಪಡಿಸಿದ್ದ ರೋಟರಿ ಇಂಟರ್‌ ನ್ಯಾಷನಲ್‌ನ ಸಂಸ್ಥಾ­­ಪಕ ಪಾಲ್ ಹ್ಯಾರಿಸ್ ದತ್ತಿ ಉಪ­ನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರೋಟರಿ ವತಿಯಿಂದ ನಗರದಲ್ಲಿ ಉಚಿತ ಆರೋಗ್ಯ ತಪಾಸಣೆ, ಉಚಿತ ಕೃತಕ ಕೈಕಾಲು ಜೋಡಣೆ ಮತ್ತು  ರಕ್ತದಾನ ಶಿಬಿರಗಳನ್ನು ನಡೆಸಲಾ­ಗು­ತ್ತಿದೆ. ಗ್ರಾಮಾಂತರ ಪ್ರದೇಶಗಳ ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT