ಧಾರವಾಡ: ‘ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ತಿಂಗಳು ಬಂತೆಂದರೆ ಲಕ್ಷಗಟ್ಟಲೇ ಪಗಾರ ಎಣಿಸುತ್ತಾರೆ. ಆದರೆ ಪಡೆದ ಪಗಾರಕ್ಕೆ ತಕ್ಕಂತೆ ಅವರು ಸರಿಯಾಗಿ ಕೆಲಸ ಮಾಡುತ್ತಿಲ್ಲ’ ಎಂದು ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಟೀಕಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಶಾಸ್ತ್ರ ವಿಭಾಗ ಹಾಗೂ ಜೆಎಸ್ಎಸ್ ಸಂಸ್ಥೆಯ ಸಹಯೋಗದಲ್ಲಿ ಬುಧವಾರ ನಗರದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಹಸ್ತಪ್ರತಿ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

‘ಪಗಾರ ಜಾಸ್ತಿ ಬರುತ್ತಿದೆ ಎಂದು ನನಗೆ ಅಸೂಯೆಯೇನೂ ಇಲ್ಲ. ಆದರೆ, ಅದಕ್ಕೆ ತಕ್ಕಂತೆ ಕೆಲಸಗಳು ಆಗುತ್ತಿಲ್ಲ. ರಾಜ್ಯದಲ್ಲಿ ಸಂಗೀತ ವಿಶ್ವವಿದ್ಯಾಲಯ ಸೇರಿದಂತೆ ಹತ್ತಾರು ವಿ.ವಿ.ಗಳಲ್ಲಿ ಸಂಗೀತ ವಿಭಾಗಗಳಿವೆ. ಆದರೆ ಇಲ್ಲಿಯವರೆಗೂ ಒಬ್ಬನೇ ಒಬ್ಬ ಸಂಗೀತ ಪಂಡಿತನನ್ನು ರೂಪಿಸಲು ಆಗಿಲ್ಲ. ಸಂಗೀತ ಕಲಿತವರು ಪತ್ರಿಕೆಗಳಲ್ಲಿ ನೀರಸ ವಿಮರ್ಶೆ ಬರೆಯುವುದರಲ್ಲಿ ತೊಡಗಿದ್ದಾರೆ. ಅಲ್ಲದೇ, ಹಸ್ತಪ್ರತಿಗೆ ಸಂಬಂಧಿಸಿದಂತೆ ಇನ್ನೂ ಆಗಬೇಕಾದ ಕೆಲಸಗಳು ಬಹಳ ಇವೆ’ ಎಂದರು.

‘ಬ್ರಿಟಿಷರಿಂದ ಎರವಲು ಪಡೆದ ನಮ್ಮ ಶಿಕ್ಷಣ ಪದ್ಧತಿ ಕೇವಲ ಅಮೆರಿಕಕ್ಕೆ ಅನುಕೂಲವಾಗುವ ಕ್ಲರ್ಕ್ಗಳನ್ನು ತಯಾರಿಸುತ್ತಿದೆ. ಮಕ್ಕಳಲ್ಲಿನ ಸೃಜನಶೀಲತೆಯನ್ನು ನಾವೆಲ್ಲ ಬಲಿ ಕೊಡುತ್ತಿದ್ದೇವೆ. ಬೆಂಗಳೂರಿನಲ್ಲಿರುವ ಎಷ್ಟೋ ಪೋಷಕರು ತಮ್ಮ ಮಕ್ಕಳು ಅಮೆರಿಕದಲ್ಲಿ ಕೆಲಸ ಮಾಡಿ, ಅಲ್ಲಿನ ಪೌರತ್ವ ಪಡೆಯುವುದನ್ನು ಬಯಸುತ್ತಿದ್ದಾರೆ’ ಎಂದು ವಿಷಾದಿಸಿದರು.

ಸಮಾರೋಪ ನುಡಿಗಳನ್ನಾಡಿದ ಹಿರಿಯ ಸಾಹಿತಿ ಡಾ.ಹಂಪ ನಾಗರಾಜಯ್ಯ, ‘ಹಳೆಯ ಸಾಹಿತ್ಯ ಪ್ರಾಕೃತದಲ್ಲಿ ರಚನೆಯಾಗಿದ್ದರೂ ಭಾಷಾ ರಾಜಕೀಯದಿಂದಾಗಿ ಕೇವಲ ಸಂಸ್ಕೃತವನ್ನು ಜೀವಂತವಾಗಿಟ್ಟುಕೊಂಡು ಪ್ರಾಕೃತವನ್ನು
ಮೂಲೆಗೆ ತಳ್ಳಲಾಗಿದೆ. ಐತಿಹಾಸಿಕವಾಗಿ ನೋಡಿದಾಗ ಸಂಸ್ಕೃತ ಮತ್ತು ಪ್ರಾಕೃತ ಭಾಷೆಗಳೆರಡೂ ಅಷ್ಟೇ ಮಹತ್ವವನ್ನು ಪಡೆದುಕೊಂಡಿದ್ದವು. ಕಾಳಿದಾಸ, ಭಾಸ ಕವಿಗಳು ರಚಿಸಿದ ಸಂಸ್ಕೃತ ನಾಟಕಗಳಲ್ಲಿ ಶೇ 60 ರಷ್ಟು ಪ್ರಾಕೃತ ಶಬ್ದಗಳೇ ತುಂಬಿಕೊಂಡಿವೆ. ದೇಶದಲ್ಲಿ ಹಲವು ಸಂಸ್ಕೃತ ವಿಶ್ವವಿದ್ಯಾಲಯಗಳಿವೆ.

ನೂರಾರು ಕಾಲೇಜುಗಳಿವೆ. ಆದರೆ ಪ್ರಾಕೃತ ಬೋಧಿಸುವ ಒಂದೇ ಒಂದು ಕಾಲೇಜು ಇಲ್ಲ’ ಎಂದು ಹೇಳಿದರು.
ಹಿರಿಯ ಶಾಸನಶಾಸ್ತ್ರಜ್ಞ ಡಾ.ಶ್ರೀನಿವಾಸ ರಿತ್ತಿ ಮಾತನಾಡಿ, ‘ಶಾಸನ ಸಾಹಿತ್ಯಕ್ಕೂ, ಹಸ್ತಪ್ರತಿ ಶಾಸ್ತ್ರಕ್ಕೂ ಸೋದರ ಸಂಬಂಧವಿದೆ. ಹಸ್ತ ಪ್ರತಿಗಳನ್ನು ಓದುವಾಗ ಹೃಸ್ವ ದೀರ್ಘಗಳು, ಪದಛ್ಛೇದಗಳು ಆಭಾಸವಾಗಿ ಅನೇಕ ಅವಾಂತರಗಳಿಗೆ ಕಾರಣವಾಗುತ್ತವೆ. ಹಳಗನ್ನಡ ಓದು, ಶಾಸನಗಳ ಓದು ಇವುಗಳನ್ನು ಇಂದಿನ ಜನಾಂಗಕ್ಕೆ ಕಲಿಸಬೇಕಾದ ಅಗತ್ಯವಿದೆ' ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.