ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿ.ಕೆ. ಸಿಂಗ್ ಕ್ರಮ ಕಾನೂನುಬಾಹಿರ’

ಸುಪ್ರೀಂಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ ಕೇಂದ್ರ ಸರ್ಕಾರ
Last Updated 10 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವಿ.ಕೆ. ಸಿಂಗ್ ಅವರು ಭೂಸೇನಾ ಮುಖ್ಯಸ್ಥರಾಗಿ­ದ್ದಾಗ ಸೇನೆಯ ಉಪಮುಖ್ಯಸ್ಥರಾಗಿದ್ದ ದಲ್ಬೀರ್‌ ಸಿಂಗ್ ಸುಹಾಗ್ ಅವರ ವಿರುದ್ಧ ತೆಗೆದು­ಕೊಂಡ ಶಿಸ್ತು ಕ್ಷಮವು ‘ಪೂರ್ವ­ಯೋಜಿತ, ಅಸ್ಪಷ್ಟ ಹಾಗೂ ಅಕ್ರಮ’ ಎಂದು ಸುಪ್ರೀಂ­ಕೋರ್ಟ್‌ಗೆ ಕೇಂದ್ರ ಸರ್ಕಾರ ಪ್ರಮಾಣಪತ್ರ ಸಲ್ಲಿಸಿದೆ.

ಸೇನೆಯ ಗುಪ್ತಚರ ವಿಭಾಗದ ನೇತೃ­ತ್ವ­ದಲ್ಲಿ ನಡೆದ ಕಾರ್ಯಾಚರಣೆ­ಯೊಂ­ದನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದು ಆಪಾದಿಸಿ ಸುಹಾಗ್ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗಿತ್ತು. ಸಹಜ ನ್ಯಾಯವನ್ನು ಬದಿಗೊತ್ತಿ ಕಾನೂನು ಬಾಹಿರವಾಗಿ ಮತ್ತು ಪೂರ್ವ­ಗ್ರಹಪೀಡಿತ ಮನೋಭಾವನೆ­ಯಿಂದ ಸುಹಾಗ್ ವಿರುದ್ಧ ಶಿಸ್ತು ಕ್ರಮ ಜರುಗಿಸ­ಲಾಗಿದೆ ಎಂದು ರಕ್ಷಣಾ ಇಲಾ­ಖೆಯು ಇತ್ತೀಚೆಗೆ ಸುಪ್ರೀಂಕೋರ್ಟ್‌ಗೆ ಸಲ್ಲಿಸಿ­ರುವ ಪ್ರಮಾಣಪತ್ರದಲ್ಲಿ ತಿಳಿಸಿದೆ.

ಈಗ ಕೇಂದ್ರ ಸಚಿವರಾಗಿರುವ ಜನ­ರಲ್‌ ವಿ.ಕೆ. ಸಿಂಗ್ ಅವರ ನಿವೃತ್ತಿಯ ನಂತರ ಭೂಸೇನಾ ಮುಖ್ಯಸ್ಥ­ರಾದ ಜನ­ರಲ್‌ ವಿಕ್ರಮ್ ಸಿಂಗ್ ಅವರು ಸುಹಾಗ್ ಅವರ ವಿರುದ್ಧ ಶಿಸ್ತು ಕ್ರಮ­ವನ್ನು ರದ್ದು­ಪಡಿಸಿ ಸೇನಾ ಕಮಾಂಡರ್ ಹುದ್ದೆಗೆ ಬಡ್ತಿ ನೀಡಲು ಶಿಫಾರಸು ಮಾಡಿದ್ದರು.

ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ
ಹಿರಿಯ ಸೇನಾಧಿಕಾರಿಯೊಬ್ಬರ ಬಡ್ತಿಗೆ ಸಂಬಂಧಿಸಿದಂತೆ ಎನ್‌ಡಿಎ ಸರ್ಕಾರವು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ತಮ್ಮ ವಿರುದ್ಧ ಅವಿಶ್ವಾಸ ವ್ಯಕ್ತ­ಪಡಿಸಿರುವ ಹಿನ್ನಲೆಯಲ್ಲಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ನಿವೃತ್ತ ಜನ­ರಲ್‌ ವಿ.ಕೆ. ಸಿಂಗ್‌ ಅವರನ್ನು    ಕಾಂಗ್ರೆಸ್‌ ಆಗ್ರಹಪಡಿಸಿದೆ.

‘ಸಿಂಗ್‌ ಸಚಿವರಾಗಿ ಉಳಿಯ­­ಲು ಸಾಧ್ಯವಿಲ್ಲ. ಅವರನ್ನು ಸಂಪುಟದಿಂದ ವಜಾ ಮಾಡ­ಬೇಕೇ ಅಥವಾ ಅವರೇ ರಾಜೀನಾಮೆ ನೀಡಬೇಕೇ ಎಂಬುದು ಚರ್ಚಾ ವಿಷಯ’ ಎಂದು ಎಐಸಿಸಿ ವಕ್ತಾರ ಅಭಿಷೇಕ್‌ ಮನು­ಸಿಂಘ್ವಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡುತ್ತಾ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT