ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶ್ರೀ’ ಸೂತ್ರ

Last Updated 18 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

‘ಕನ್ನಡದ  ಕಗ್ಗಂಟು ಸಲ್ಲದು’ (ವಾ.ವಾ., ಡಿ. 2). ‘ಮೊಬೈಲ್‌’ ದೂರವಾಣಿಯ ಬಗೆಗೆ ಸಂಪತ್‌ ಬೆಟ್ಟಗೆರೆ ದೂರಿದ್ದಾರೆ.
ಸ್ವಾರಸ್ಯವೊಂದನ್ನು ಇಲ್ಲಿ ತಿಳಿಸಬೇಕಾಗಿದೆ. ಇಂಗ್ಲಿಷ್‌ ಶಬ್ದಗಳನ್ನು ಅನಗತ್ಯ­ವಾಗಿ ಕನ್ನಡಿಸುವ ‘ಚಟ’ ದಶಕಗಳ ಹಿಂದೆಯೆ, ಆಚಾರ್‍ಯ ‘ಶ್ರೀ’ ಯವರ ಕಾಲದಲ್ಲೆ ಶುರು­ವಾಗಿತ್ತು! ಈ ಬಗೆಗೆ ‘ಶ್ರೀ’ ಯವರ ಸೂತ್ರ­ವಿದು: ‘ರೈಲನ್ನು ರೈಲು ಎಂದು ಕರೆಯುವುದೇ ಉತ್ತಮ; ಹೊಗೆ ಬಂಡಿ ಎನ್ನುವುದು ಮಧ್ಯಮ; ಧೂಮ­ಶಕಟ ಎನ್ನು­ವುದು ಅಧಮ!’ (‘ರೈಲು ಬಂತು’ ಎಂಬುದರ ಬದಲು ‘ಧೂಮಶಕಟ ಬಂತು, ಧೂಮಶಕಟ ಬಂತು’ ಎಂದು ಹೇಳ­ಹೊರ­ಟರೆ, ಉಚ್ಚರಿಸಿ ಮುಗಿಸುವಷ್ಟರಲ್ಲಿ ರೈಲು ಬಂದು ಹೋಗಿ­­ರುತ್ತದೆ!) ಉತ್ತಮ ನಿರ್ಧಾರ­ವಿರಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT