ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಕಾಲ’ಕ್ಕೆ ಕಾಮನ್‌ವೆಲ್ತ್‌ ಗರಿ

Last Updated 25 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಿಗದಿತ ಅವಧಿಯೊಳಗೆ ಸರ್ಕಾರದ 50 ಇಲಾಖೆಗಳ 669 ವಿವಿಧ ರೀತಿಯ ಸೇವೆಗಳನ್ನು ಒದಗಿಸುವ ‘ಸಕಾಲ’ ಯೋಜನೆಗೆ ಕಾಮನ್‌ವೆಲ್ತ್‌ ಪ್ರಶಸ್ತಿ ಸಂದಿದೆ.

ಕಾಮನ್‌ವೆಲ್ತ್‌ ಅಸೋಸಿ-ಯೇಷನ್‌ ಫಾರ್‌ ಪಬ್ಲಿಕ್‌ ಅಡ್ಮಿನಿ-ಸ್ಟ್ರೇಷನ್‌ ಅಂಡ್‌ ಮ್ಯಾನೇಜ್‌ಮೆಂಟ್‌ ನೀಡುವ 2014ನೇ ಸಾಲಿನ ‘ಇನೋ-ವೇಷನ್‌ ಇನ್‌ ಪಬ್ಲಿಕ್‌ ಸರ್ವೀಸ್‌ ಮ್ಯಾನೇಜ್‌ಮೆಂಟ್‌’ ಪ್ರಶಸ್ತಿ ಇದು. ಇದನ್ನು ಕಾಮನ್‌ವೆಲ್ತ್‌ ಪ್ರಶಸ್ತಿ ಎಂದೂ ಕರೆಯಲಾಗುತ್ತದೆ ಎಂದು ಸಕಾಲ ಯೋಜನೆಯ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

ಮಲೇಷ್ಯಾದಲ್ಲಿ ಅ.17ರಿಂದ 21ರವರೆಗೆ ನಡೆದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ‘ಸಕಾಲ’ ಕುರಿತು ಅದರ ಹೆಚ್ಚುವರಿ ನಿರ್ದೇಶಕ ಆರ್‌. ಮನೋಜ್‌ ಅವರು ಪ್ರಾತ್ಯಕ್ಷಿಕೆ ಮಂಡಿಸಿದರು.

’ಈ ಪ್ರಶಸ್ತಿಗಾಗಿ 53 ರಾಷ್ಟ್ರಗಳು ಪ್ರಯತ್ನ ನಡೆಸಿದ್ದವು. ಸೆಮಿಫೈನಲ್ಸ್‌ಗೆ 46 ರಾಷ್ಟ್ರಗಳು ಬಂದವು. ಅಂತಿಮ ಸುತ್ತಿಗೆ ಬಂದ 36 ದೇಶಗಳ ಪೈಕಿ ರಾಜ್ಯದ ಸಕಾಲ ಯೋಜನೆ ಪ್ರಶಸ್ತಿಗೆ ಆಯ್ಕೆಯಾಯಿತು. ಬಳಿಕ ಮಂಗಳವಾರ ಪ್ರಶಸ್ತಿಯನ್ನೂ ಪ್ರದಾನ ಮಾಡಲಾಯಿತು’ ಎಂದು ಸಚಿವ ಜಯಚಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT