ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮಾಜಮುಖಿ ಕಾರ್ಯ ವಿಸ್ತರಿಸಲಿ’

Last Updated 1 ಮಾರ್ಚ್ 2015, 19:47 IST
ಅಕ್ಷರ ಗಾತ್ರ

ಹೆಣ್ಣೂರು ಬಾಣಸವಾಡಿ: ‘ಸಾಮಾಜಿಕ ಕಳಕಳಿ ಹೊಂದಿರುವ ಸಂಸ್ಥೆಗಳು ಭಾರತ ಮಾತ್ರವಲ್ಲದೇ ಹೊರದೇಶಕ್ಕೂ ತಮ್ಮ ಸಮಾಜಮುಖಿ ಕಾರ್ಯಗಳನ್ನು ವಿಸ್ತರಿಸಬೇಕು’ ಎಂದು   ಲಯನ್ಸ್‌ ಕ್ಲಬ್ ಸಂಸ್ಥೆಯ ಅಂತರರಾಷ್ಟ್ರೀಯ ಅಧ್ಯಕ್ಷ ಬ್ಯಾರಿ ಫಾಮರ್  ಹೇಳಿದರು.

ಹೆಣ್ಣೂರಿನಲ್ಲಿರುವ ಡಾ.ಎಸ್.-ಆರ್.-ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಬೆಂಗಳೂರು ಪೂರ್ವ ಲಯನ್ಸ್‌ ಕ್ಲಬ್‌  ವಾಕ್ ಮತ್ತು ಶ್ರವಣ ಬಸ್ ಕ್ಲಿನಿಕ್‍ ಅನ್ನು ಉದ್ಘಾಟಿಸಿ ಮಾತನಾಡಿದರು.

‘ಸಮಾಜದ ಏಳಿಗೆಗೆ ಸಂಘ ಸಂಸ್ಥೆಗಳೊಂದಿಗೆ ಸೇರಿ ಶ್ರಮಿಸಿ-ದಾಗ ಸಮಾಜದಲ್ಲಿ ಸಮಾನತೆ ಜೊತೆಗೆ ಅಭಿವೃದ್ದಿಯೂ ಸಾದ್ಯವಾಗು-ತ್ತದೆ.  ಬೆಂಗಳೂರು ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ  ವಾಕ್ ಮತ್ತು ಶ್ರವಣದಲ್ಲಿ ದೋಷವಿರುವ ಮಕ್ಕಳನ್ನು ಗುರುತಿಸಿ ಪರಿಹಾರ ಒದಗಿಸುವ ಕಾರ್ಯಮಾಡಲಿದೆ’ ಎಂದು ತಿಳಿಸಿದರು.

‘ಆರಂಭಿಕ ಹಂತದಲ್ಲೆ ಶ್ರವಣ ದೋಷವನ್ನು ಗುರುತಿಸಿ ಅಗತ್ಯವಿರುವ ಮಕ್ಕಳಿಗೆ ಚಿಕಿತ್ಸೆ ನೀಡುವುದು. ವೈದ್ಯಕೀಯ ಸೌಲಭ್ಯಗಳ ಕೊರತೆಯೂ ಕಾರಣವಾಗುತ್ತದೆ. ಹೀಗಾಗಿ, ಬಸ್ ಕ್ಲಿನಿಕ್ ಸಹಕಾರಿಯಾಗಲಿದೆ’ ಎಂದು  ನುಡಿದರು.

ಡಾ.ಎಸ್.ಆರ್.ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ್, ‘ಬಸ್ ಕ್ಲಿನಿಕ್  ಆಧುನಿಕ ತಂತ್ರಜ್ಞಾನ ಹೊಂದಿದ್ದು ವೈದ್ಯಕೀಯ ಸೌಲಭ್ಯದಿಂದ ದೂರವಿರುವವರಿಗೆ ಸಹಕಾರಿಯಾಗಲಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT