ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಯೀದ್‌, ದಾವೂದ್‌ ಹಸ್ತಾಂತರಿಸಿ’

Last Updated 18 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮುಂಬೈ ದಾಳಿ ಆರೋಪಿಗಳಾದ ಹಫೀಜ್‌ ಸಯೀದ್‌್ ಹಾಗೂ ದಾವೂದ್‌ ಇಬ್ರಾ­ಹಿಂ­­ನನ್ನು ಹಸ್ತಾಂ­ತರಿ­ಸುವಂತೆ ಭಾರತ ಗುರು­ವಾರ ಪಾಕಿಸ್ತಾನವನ್ನು  ಕೇಳಿದೆ.

ಪೆಶಾವರ ಶಾಲೆ ಮೇಲಿನ ದಾಳಿ ಪ್ರಕರಣದಿಂದ ಪಾಠ ಕಲಿತು  ಭಯೋತ್ಪಾದನೆ ನಿಗ್ರಹಕ್ಕೆ ಪಾಕ್‌ ದಿಟ್ಟ ಹೆಜ್ಜೆ ಇಡುತ್ತದೆ ಎಂದು ಆಶಿಸುವುದಾಗಿ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ತಿಳಿಸಿದರು.

ರಾಜನಾಥ್‌ ಆಕ್ರೋಶ
ಲಖ್ವಿಗೆ ಜಾಮೀನು ನೀಡಿ­ರು­ವುದಕ್ಕೆ ಪಾಕಿಸ್ತಾನ­ವನ್ನು ದೂಷಿಸಿರುವ ಗೃಹ ಸಚಿವ ರಾಜ­ನಾಥ್‌ ಸಿಂಗ್‌, ‘ಈ ಪ್ರಕ­ರಣ ನಿರ್ವ­ಹಿ­ಸು­ವಲ್ಲಿ ಪ್ರಾಸಿಕ್ಯೂಷನ್‌ ಎಲ್ಲೋ ಎಡವಿರ­ಬೇಕು’ ಎಂದು ಹೇಳಿದ್ದಾರೆ.

‘ಪೆಶಾವರ ಸೇನಾ ಶಾಲೆ ಮೇಲೆ ದಾಳಿ ನಡೆದು ಕೇವಲ ಎರಡು ದಿನಗ­ಳಲ್ಲಿಯೇ ಲಖ್ವಿಗೆ ಜಾಮೀನು ಸಿಕ್ಕಿರು­ವುದು ದುರದೃಷ್ಟಕರ. ವಿಚಾ­ರಣಾ ನ್ಯಾಯಾಲಯದ ಆದೇಶದ ವಿರುದ್ಧ ಪಾಕಿ­­ಸ್ತಾನ ಸರ್ಕಾರವು ಹೈಕೋರ್ಟ್‌­ನಲ್ಲಿ ಮೇಲ್ಮ­ನವಿ ಸಲ್ಲಿಸಬೇಕು’ ಎಂದು ತರಾತುರಿ­ಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ  ಹೇಳಿದರು.

ಇಸ್ಲಾಮಾಬಾದ್‌ ವರದಿ: ಈ ಮಧ್ಯೆ ಪಾಕ್‌ ವಿಶೇಷ ನ್ಯಾಯಾಲಯದ ನ್ಯಾಯಾ­ಧೀಶ ಕೌಸರ್‌್ ಅಬ್ಬಾಸ್‌ ಜೈದಿ ಲಖ್ವಿಗೆ ಜಾಮೀನು ನೀಡಿ ವಿಚಾರಣೆಯನ್ನು ಜನವರಿ ೭ರವರೆಗೆ ಮುಂದೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT