ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುಪ್ರಾ ಸಿಇಂಡಿಯಾ 2015’: ಪಿಇಎಸ್‌ ವಿದ್ಯಾರ್ಥಿಗಳ ತಂಡಕ್ಕೆ ಪ್ರಶಸ್ತಿ

Last Updated 25 ಜುಲೈ 2015, 20:28 IST
ಅಕ್ಷರ ಗಾತ್ರ

ಬೆಂಗಳೂರು: ಚೆನ್ನೈನಲ್ಲಿ ಇತ್ತೀಚೆಗೆ ನಡೆದ ‘ಸುಪ್ರಾ ಸಿಇಂಡಿಯಾ 2015’ ಫಾರ್ಮುಲಾ ರೇಸ್‌ನಲ್ಲಿ ನಗರದ ಪಿಇಎಸ್ ತಾಂತ್ರಿಕ ವಿಶ್ವವಿದ್ಯಾಲಯದ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳು ವಿನ್ಯಾಗೊಳಿಸಿದ ಫಾರ್ಮುಲಾ ಕಾರು ಒಂದು ಲಕ್ಷ ನಗದು ಪುರಸ್ಕಾರವುಳ್ಳ ‘ಎರಡನೇ ಅತ್ಯುತ್ತಮ ವಾಹನ’ ಪ್ರಶಸ್ತಿ ಗಳಿಸಿದೆ.

ಮೆಕ್ಯಾನಿಕಲ್ ವಿಭಾಗದ 6 ಮತ್ತು 8ನೇ ಸೆಮಿಸ್ಟರ್‌ ವಿದ್ಯಾರ್ಥಿಗಳ ‘ಹಯಾ’ ತಂಡ ನೂತನ ಕಾರನ್ನು ನಿರ್ಮಿಸಿದೆ.  ಕಿ.ಟಿ.ಎಂ.ಡ್ಯೂಕ್ 390 ಯಂತ್ರ ಬಳಸಿ  ನಿರ್ಮಿಸಿರುವ ಈ ಕಾರು 33 ಬಿಎಚ್‌ಪಿ ಸಾಮರ್ಥ್ಯ ಹೊಂದಿದೆ. ಸುಪ್ರಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಒಟ್ಟು 91 ತಂಡಗಳ ಪೈಕಿ ಅಂತಿಮ ಸುತ್ತಿಗೆ ಆಯ್ಕೆಯಾದ 9 ತಂಡಗಳಲ್ಲಿ ಪಿಇಎಸ್ ವಿಶ್ವವಿದ್ಯಾಲಯ ತಂಡವೂ ಸ್ಥಾನ ಪಡೆದಿತ್ತು.

ಆಟೊಕ್ರಾಸ್ ವಿಭಾಗದಲ್ಲಿ ಕೇವಲ 1.24 ನಿಮಿಷದಲ್ಲಿ ನಿಗದಿತ ದೂರ ತಲುಪಿದ ‘ಹಯಾ’ ತಂಡದ ಸ್ಪರ್ಧಿಗಳು ಪ್ರಥಮ ಸ್ಥಾನದ ಜತೆಗೆ ₹30 ಸಾವಿರ ನಗದು ಬಹುಮಾನ ಗಳಿಸಿದರು. ಈ ಕಾರು ಅತ್ಯಂತ ಕಡಿಮೆ ಹೊಗೆ ಹೊರಹಾಕಿ, ‘ಗೋ ಗ್ರೀನ್ ಕಾರ್’ ಎಂಬ ಪ್ರಶಸ್ತಿಗೆ ಭಾಜನವಾಗಿದೆ. ಪ್ರಶಸ್ತಿಯು ₹30 ಸಾವಿರ ನಗದು ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT