ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೌರಶಕ್ತಿ ಟೆಂಡರ್‌ನಲ್ಲಿ ಅಕ್ರಮ ನಡೆದಿಲ್ಲ’

Last Updated 25 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಸೌರ ಶಕ್ತಿ ಉತ್ಪಾದನೆಗೆ ಸಂಬಂ­ಧಿಸಿದ ಟೆಂಡರ್‌ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ’ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಶನಿ­ವಾರ ಇಲ್ಲಿ ಸ್ಪಷ್ಟಪಡಿಸಿದರು.

ರೈತ ಮುಖಂಡರ ಜತೆ ಮಾತುಕತೆ ನಡೆಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು. ‘ಹಗರಣದಲ್ಲಿ ಸಿಲುಕಿಕೊಳ್ಳಲು ನಾನು ಮೂರ್ಖ ಅಲ್ಲ. ಇಷ್ಟಕ್ಕೂ ನಾನು ನನ್ನ ಸಂಬಂಧಿಕರಿಗಾಗಲಿ, ಹಿಂಬಾ­ಲ­ಕರಿಗಾಗಲಿ  ಟೆಂಡರ್ ಕೊಟ್ಟಿಲ್ಲ. ಎಲ್ಲ ಟೆಂಡರ್‌ಗಳೂ ವೃತ್ತಿ­ಯಲ್ಲಿ ಕೃಷಿಕರಾಗಿರುವ ಭೂ ಮಾಲೀ­ಕ­ರಿಗೇ ಸಿಕ್ಕಿವೆ. ಏನೂ ಬೆಳೆಯಲು ಸಾಧ್ಯವಾಗದ ಭೂಮಿಯನ್ನು ಈ ರೀತಿಯೂ ಉಪಯೋಗಿಸಬಹುದು ಎಂಬು­­ದನ್ನು ತೋರಿಸುವ ಸಲುವಾಗಿ ಈ ಕಾರ್ಯಕ್ರಮ ರೂಪಿಸಲಾಗಿದೆ’ ಎಂದು ಅವರು ಹೇಳಿದರು.

‘ನೆಮ್ಮದಿ’ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಿದ ಬಹುತೇಕರಿಗೆ ಟೆಂಡರ್‌ ಸಿಕ್ಕಿದೆ. ಸಚಿವ ಸಂಪುಟದ ಸಹೋ­ದ್ಯೋಗಿಗಳಿಗೂ ಟೆಂಡರ್‌ನಲ್ಲಿ ಭಾಗ­ವಹಿಸುವಂತೆ ಕೋರಿದ್ದೆ. ಒಬ್ಬ ಬಿಜೆಪಿ ಸಂಸದ ಮತ್ತು ಒಬ್ಬ ಕಾಂಗ್ರೆಸ್‌ ಶಾಸಕ ಬಿಟ್ಟರೆ ಬೇರೆ ಯಾರೂ ಟೆಂಡರ್‌ನಲ್ಲಿ ಭಾಗವಹಿಸಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT