ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವಾಮೀಜಿ ಬೆದರಿಕೆ ಒಡ್ಡಿಲ್ಲ’

Last Updated 7 ಅಕ್ಟೋಬರ್ 2015, 19:51 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಘವೇಶ್ವರ ಭಾರತೀ ಸ್ವಾಮೀಜಿ ಬೆಂಬಲಿಗರು ಸಾಕ್ಷಿಗಳಿಗೆ ಬೆದರಿಕೆ ಒಡ್ಡುತ್ತಿದ್ದಾರೆ’ ಎಂದು ರಾಮಕಥಾ ಗಾಯಕಿ ಪ್ರೇಮಲತಾ ದಿವಾಕರ್ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ರಾಮಚಂದ್ರಾಪುರ ಮಠ, ‘ಆರೋಪಕ್ಕೆ ಪೂರಕವಾಗಿ ಸಾಕ್ಷಿ ಒದಗಿಸಬೇಕು. ಇಲ್ಲ, ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು’ ಎಂದು ಒತ್ತಾಯಿಸಿದೆ.

ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಅತ್ಯಾಚಾರ ತಡೆ ಕುರಿತ ತಜ್ಞರ ಸಮಿತಿಗೆ ಪ್ರೇಮಲತಾ ಅವರು ಮಂಗಳವಾರ ದೂರು ಸಲ್ಲಿಸಿದ್ದರು.

‘ಮಠ ಅಥವಾ ಸ್ವಾಮೀಜಿ ಯಾರಿಗೂ, ಯಾವ ವಿಷಯಕ್ಕೂ ಬೆದರಿಕೆ ಒಡ್ಡಿಲ್ಲ. ಮಠದ ಮೇಲೆ ಹಲವಾರು ವರ್ಷಗಳಿಂದ ನಿರಂತರವಾಗಿ ಆಕ್ರಮಣ ನಡೆಯುತ್ತಿದೆ. ಆದರೆ ಮಠವು ಸಂಯಮ ಮತ್ತು ಸತ್ಯದ ಮಾರ್ಗವನ್ನು ಬಿಟ್ಟಿಲ್ಲ. ಶ್ರೀಗಳ ವಿರುದ್ಧ ದೂರು ದಾಖಲಿಸಿದ್ದರೂ ನಂಬಲರ್ಹ ಸಾಕ್ಷ್ಯ ಹಾಜರುಪಡಿಸಿಲ್ಲ’ ಎಂದು ಮಠದ ಪ್ರಕಟಣೆ ಹೇಳಿದೆ. ಮಠದ ವಿರುದ್ಧ ನಿರಂತರವಾಗಿ ಬರುತ್ತಿರುವ ಆರೋಪಗಳಿಂದ ಭಕ್ತರಿಗೆ ನೋವಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT