ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಮುಂದಾಗಿ’

Last Updated 25 ಅಕ್ಟೋಬರ್ 2014, 6:44 IST
ಅಕ್ಷರ ಗಾತ್ರ

ಗಜೇಂದ್ರಗಡ: ‘ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮುಂದಾ ಗಬೇಕು. ಅಂದಾಗ ಮಾತ್ರ ವಾಲ್ಮೀಕಿ ಮಹರ್ಷಿಗಳ ಕನಸು ಸಾಕಾರಗೊಳ್ಳು ಸಾಧ್ಯ’ ಎಂದು ಹರಿಹರದ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಅಭಿಪ್ರಾಯಟ್ಟರು.

ಗಜೇಂದ್ರಗಡ–ಉಣಚಗೇರಿ ಸಮಾಜದ ವತಿ ಯಿಂದ ಇಲ್ಲಿನ ಗವಿಮಠದಲ್ಲಿ ಆಯೋಜಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯ ಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ 12ನೇ ಶತ ಮಾನಕ್ಕಿಂತ ಪೂರ್ವದಿಂದಲೂ ಶರಣರು, ಸಂತರು, ಶರೀಪರು ಶ್ರಮಿಸುತ್ತಲೇ ಇದ್ದಾರೆ. ಹೀಗಿದ್ದರೂ ಹಿಂದುಳಿದ ವರ್ಗಗಗಳು ಅಭಿವೃದ್ಧಿ ಹೊಂದದಿ ರುವುದು ರಾಜಕೀಯ ಇಚ್ಛಾ ಶಕ್ತಿಯನ್ನು ಪ್ರದರ್ಶಿ ಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸವಲತ್ತುಗಳನ್ನು ಪಡೆದ ಒಂದು ಜನಾಂಗ ಮಾತ್ರ ಇಂತಹ ಹೇಳಿಕೆ ಗಳನ್ನು ಚಲಾವಣೆಯಲ್ಲಿಟ್ಟಿರುವುದರಿಂದ ಇದು ಒಂದು ಹುನ್ನಾರವೇ ಸರಿ. ಬದಲಾಗಿ ಜಾತಿಯ ಕಾರಣಕ್ಕೆ ಅವಕಾಶಗಳು ನಿರಾಕರಣೆಯಾಗು ವುದನ್ನು ತಪ್ಪಿಸುವಂತಹ ಹಾಗೂ ಯಾವುದೇ ಜಾತಿ ಯವರಾದರೂ ಅವರಿಗೆ ಸಮಾನ ಅವಕಾಶ ಲಭಿ ಸುವಂತಹ ಸಮಾಜಕ್ಕೆ ಮೊದಲು ಶ್ರಮಿಸು ವುದೇ ಮಾನವೀಯ ಕ್ರಮವಾಗುತ್ತದೆ ಎಂದರು.

ಇತ್ತೀಚಿನ ವರ್ಷಗಳಲ್ಲಿ ಕೆಲ ಪಟ್ಟಭದ್ರ ಹಿತಾಸಕ್ತಿ ಗಳು ಕೇವಲ ಮತ ಬ್ಯಾಂಕುಗಳನ್ನಾಗಿ ನೋಡು ತ್ತಿವೆ. ಹೀಗಾಗಿ ಹಿಂದುಳಿದ ವರ್ಗಗಳ ನಾಗರಿಕರು ಜಾಗರೂಕರಾಗಬೇಕಿದೆ. ಪಟ್ಟಭದ್ರ ಹಿತಾಸಕ್ತಿಗಳ ಇಚ್ಛೆಗೆ ಅನುಗುಣವಾಗಿ ನಡೆದುಕೊಳ್ಳದೆ, ಸ್ವಾಭಿ ಮಾನದ ಬದುಕು ಸಾಗಿಲು ಮುಂದಾಗಬೇಕು. ಶ್ರೇಣಿಕೃತ ಸಮಾಜದಲ್ಲಿ ಸ್ವಾಭಿಮಾನಿ ಬದುಕು ಸಾಗಿಸಬೇಕಾದರೆ ಶಿಕ್ಷಣ, ಆರ್ಥಿಕ ಬಲ ಅತ್ಯಗತ್ಯ. ಹೀಗಾಗಿ ಮಕ್ಕಳಿಗೆ ಗುಣಮಟ್ಟದ ಸಮರ್ಪಕ ಶಿಕ್ಷಣ ಕೊಡಿಸಲು ಪಾಲಕರು ಪಣ ತೊಡಗಬೇಕಿದೆ ಎಂಬ ಸಲಹೆ ನೀಡಿದರು.  ಶಾಸಕ ಜಿ.ಎಸ್‌.ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪುರಸಭೆ ಮುಖ್ಯಾಧಿಕಾರಿ ಹನಮಂತಮ್ಮ ನಾಯಕ್‌, ರೋಣ ಸಿಪಿಐ ವೆಂಕಟಪ್ಪ ನಾಯಕ್‌, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ ವನ್ನಾಲ, ತಿಮ್ಮಣ್ಣ ವನ್ನಾಲ.ಸಮಾಜದ ಅಧ್ಯಕ್ಷ ಶರಣಪ್ಪ ಉಪ್ಪಿನಬೆಟಗೇರಿ, ವಾಲ್ಮೀಕಿ ಸಮಾಜದ ಮುಖಂಡರಾದ ಬಸವರಾಜ ಬೆಳದಡಿ, ವೈ.ಬಿ.ಚೊಳ್ಳಣ್ಣವರ, ಎಸ್.ಎಚ್.ಹಟ್ಟಿಮನಿ, ಲಿಂಗರಾಜ ನಾಯಕ, ನಾಗರಾಜ ತಳವಾರ, ಬಲವಂತಪ್ಪ ತಳವಾರ, ಎಂ.ಎಚ್.ರಂಗಣ್ಣವರ, ಪರಸಪ್ಪ ಚಳಗೇರಿ, ಮಂಜುನಾಥ ತಳವಾರ, ಕೆ.ವಾಯ್‌.ಅವಧೂತ, ಬಿ.ಕೆ.ಹಾಳಕೇರಿ, ಮಲ್ಲಪ್ಪ ಯಲಬುರ್ಗಿ, ಹುಲ್ಲಪ್ಪ ತಳವಾರ,  ಭಗವಂತಗೌಡ ಪಾಟೀಲ, ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT