ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 4147 ಕೋಟಿ ಕಪ್ಪು ಹಣ ಘೋಷಣೆ: ಕೇಂದ್ರ ಸರ್ಕಾರ

Last Updated 5 ಅಕ್ಟೋಬರ್ 2015, 13:15 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕಪ್ಪು ಹಣ ಬಹಿರಂಗಪಡಿಸಲು ಕೇಂದ್ರ ಸರ್ಕಾರವು ಕೊಟ್ಟಿದ್ದ ಕಾಲಮಿತಿ ಕಳೆದ ವಾರ ಕೊನೆಗೊಂಡಿದ್ದು,  ಈವರೆಗೆ ₹ 4,147 ಕೋಟಿ ಕಪ್ಪು ಹಣ ಘೋಷಣೆ ಮಾಡಿದ್ದಾರೆ ಎಂದು ಕೇಂದ್ರ ಹಣಕಾಸು ಇಲಾಖೆ ಕಾರ್ಯದರ್ಶಿ ತಿಳಿಸಿದ್ದಾರೆ.

ಅಕ್ಟೋಬರ್‌ 1 ರಂದು 638 ಜನರು ಒಟ್ಟು ₹ 3,770 ಕೋಟಿ ಘೋಷಣೆ ಮಾಡಿದ್ದಾರೆ ಎಂದು ಪ್ರಕಟಿಸಲಾಗಿತ್ತು. ಅಂದು ಘೋಷಣೆ ಮಾಡಿದ ಮಾಹಿತಿ ಮೇಲ್ನೊಟಕ್ಕೆ ಸಿಕ್ಕ ಅಂಕಿ ಅಂಶಗಳ ಆಧಾರದಿಂದ ನೀಡಿದ ಮಾಹಿತಿಯಾಗಿತ್ತು ಎಂದು ಹಣಕಾಸು ಇಲಾಖೆಯ ಕಾರ್ಯದರ್ಶಿ ಹಸ್‌ಮಖ್‌ ಆಧಿಯಾ ತಿಳಿಸಿದ್ದಾರೆ.

ಕಪ್ಪು ಹಣ ಘೋಷಿಸುವುದಕ್ಕೆ  2015ರ ಜುಲೈ 1ರಿಂದ ಸೆಪ್ಟೆಂಬರ್‌ 30ರ ವರೆಗೆ ಗಡುವು ನೀಡಲಾಗಿತ್ತು. ಈ ಅವಧಿಯಲ್ಲಿ ಘೋಷಣೆ ಮಾಡಿದರೆ ಶೇ 30ರಷ್ಟು ತೆರಿಗೆ ಹಾಗೂ ಅಷ್ಟೇ ಮೊತ್ತದ ದಂಡ ಪಾವತಿಸಬೇಕಾಗಿತ್ತು. ಈ ಅವಧಿಯಲ್ಲಿ ವಿದೇಶಿ ಆಸ್ತಿ ಹಾಗೂ ಕಪ್ಪು ಹಣ ಬಹಿರಂಗಪಡಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿತ್ತು.

ಆದರೆ, ಅಕ್ಟೋಬರ್‌ 1ರಿಂದ ಯಾರ ಬಳಿಯಾದರೂ ಕಪ್ಪು ಹಣ ಕಂಡುಬಂದಲ್ಲಿ ಅವರಿಗೆ ಶೇ 120ರಷ್ಟು  ತೆರಿಗೆ, ದಂಡ ಹಾಗೂ ಗರಿಷ್ಠ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವುದಕ್ಕೆ ಅವಕಾಶ ಇದೆ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT