ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 5 ಲಕ್ಷ ಕಳವು: ಬಾಲಕರ ಬಂಧನ

Last Updated 7 ಮೇ 2015, 7:43 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ಮದುವೆಗೆ ಬಂದಿದ್ದ ವ್ಯಕ್ತಿಯೊಬ್ಬ ತನ್ನ ಕಾರಿನಲ್ಲಿಟ್ಟಿದ್ದ₹ 5 ಲಕ್ಷಗಳನ್ನು ಕಳೆದುಕೊಂಡು ಕಂಗಾಲಾಗಿ ರುವಾಗಲೇ,  ಯಾರಿಗೂ ಅರಿಯದಂತೆ ಈ ಎಲ್ಲ ದೃಶ್ಯವನ್ನು ಸಿ.ಸಿ.ಟಿ.ವಿ ಕ್ಯಾಮೆರಾ ಸೆರೆಹಿಡಿದು ಅಪರಾಧಿಗಳನ್ನು ಬಂಧಿಸು ವಲ್ಲಿ ಸಹಕರಿಸಿದ ಘಟನೆ ಈಚೆಗೆ ನಡೆದಿದೆ.

ತಾಲ್ಲೂಕಿನ ಮಿಣಜಗಿ ಗ್ರಾಮದ ಸಿದ್ರಾಮಪ್ಪ ಬಸಪ್ಪ ಮ್ಯಾಗೇರಿ ಎನ್ನುವ ವರು ತಮ್ಮ ವ್ಯವಹಾರ ಸಂಬಂಧ₹ 5 ಲಕ್ಷ ನಗದನ್ನು ಚೀಲವೊಂದರಲ್ಲಿ ಇಟ್ಟು ಕೊಂಡು ಪಟ್ಟಣದ ರಾಘವೇಂದ್ರ ಕಲ್ಯಾಣ ಮಂಟಪಕ್ಕೆ ತಮ್ಮ ಸಂಬಂಧಿಕರ ಮದುವೆಗೆ ಬಂದಿದ್ದರು. ಹಣದ ಚೀಲ ವನ್ನು ಸಿದ್ರಾಮಪ್ಪ ತಮ್ಮ ಬೊಲೆರೋ ವಾಹನದ ಸೀಟಿನಲ್ಲಿರಿಸಿ ಅಕ್ಷತೆ ಹಾಕಲು ತೆರಳಿದ್ದರು.

ಚೀಲದಲ್ಲಿ ಹಣ ಇರುವುದನ್ನು ನೋಡಿದ್ದ ಬಾಲಕನೊಬ್ಬ ತನ್ನ ಸ್ನೇಹಿತನಿಗೆ ವಿಷಯ ತಿಳಿಸಿ ಆ ಹಣವನ್ನು ಎಗರಿಸಲು ಸಂಚು ಮಾಡಿ, ವಾಹನದ ಕಿಟಕಿಯಲ್ಲಿ ಕೈ ಹಾಕಿ, ಚಾಣಾಕ್ಷತನದಿಂದ ಲಪಟಾಯಿಸಿ  ತಲೆ ಮರೆಸಿಕೊಂಡಿದ್ದ. ಕಳ್ಳತನ ಮಾಡು ವಾಗಲೇ ಚೀಲದಿಂದ ಬಿದ್ದ ಹಣದ ಕಟ್ಟು ಇತರರು ನೋಡುತ್ತಿರುವಂತೆಯೇ ಅಲ್ಲಿದ್ದ 4–5 ಹುಡುಗರಿಗೆ ಕೈಗೆ ಸಿಕ್ಕಷ್ಟು ಹಣ ನೀಡಿ ಪರಾರಿಯಾಗಿದ್ದ.

ಈ ಎಲ್ಲ ಘಟನೆಗಳನ್ನು ಅಲ್ಲಿಯೇ ಇದ್ದ ಕೆನರಾ ಬ್ಯಾಂಕಿನ ಸಿ.ಸಿ. ಕ್ಯಾಮೆರಾ ಸೆರೆ ಹಿಡಿದಿತ್ತು.  ಸಿಸಿ ಕ್ಯಾಮೆರಾದಲ್ಲಿ ದಾಖಲಾದ ಫೂಟೇಜಿನಿಂದ ಎಲ್ಲ ವಿವರ ಕಲೆ ಹಾಕಿದ ಪೊಲೀಸರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ಸು ಕಂಡಿದ್ದಾರೆ. ಪ್ರಮುಖ ಆರೋಪಿ ಬಾಲಕ. ಹೀಗಾಗಿ ಬಾಲಾಪರಾಧಿ ಎಂದೇ ಪರಿಗಣಿಸಬೇಕಿದೆ. ಈತನ ಜೊತೆ ಶಾಮೀಲಾಗಿದ್ದ ವಯಸ್ಕ ಆರೋಪಿ ಅಬ್ದುಲ್ಅಜೀಜ ಸಿಕಂದರ ಯಕ್ಕಿಯಲಿ (19) ಎಂಬಾತನನ್ನು ಬಂಧಿಸಲಾಗಿದೆ ಎಂದು ಪ್ರಕರಣ ತನಿಖಾಧಿಕಾರಿ ಸಿಪಿಐ ಸುದರ್ಶನ ಪಟ್ಟಣಕುಡೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT