ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

120 ಜನರ ಮಾದರಿ ಅವಿಭಕ್ತ ಕುಟುಂಬ!

Last Updated 21 ಏಪ್ರಿಲ್ 2014, 6:54 IST
ಅಕ್ಷರ ಗಾತ್ರ

ಸಿಂಧನೂರು: ಸಿಂಧನೂರಿನ ಖದರಿಯಾ  ಕಾಲೊನಿಯಲ್ಲಿ ಒಂದೇ ಸೂರಿನಡಿ­ಯಲ್ಲಿ 120ಜನರು ವಾಸಿಸುವ ಕೂಡು ಕುಟುಂಬವಿದೆ.  ಹುಸೇನಬೀ ಅಲಿಸಾಬ ಕುಟುಂಬದ ಸದಸ್ಯರು ಎಲ್ಲರ ಕುಟುಂಬಕ್ಕೆ ಮಾದರಿ ಎನ್ನುವಂತೆ ಕಾಲೊನಿಯಲ್ಲಿ ವಾಸ ಮಾಡುತ್ತಾರೆ. ನಿಜಕ್ಕೂ ಜೇನುಗೂಡಿನಂತೆ ನೂರಾರು ಜನರು ಹಬ್ಬ ಹರಿದಿನಗಳಲ್ಲಿ ಸಂತೋಷ­ವಾಗಿ ಆಚರಣೆ ಮಾಡುತ್ತಾರೆ.

ಮನೆ­ಯಲ್ಲಿ ಯಾವುದೇ ಕಾರ್ಯಕ್ರಮಗಳು ಇದ್ದರೂ ಎಲ್ಲರೂ ಸಹಕಾರ, ಪ್ರೀತಿ, ಭಾವನಾತ್ಮಕ ಸಂಬಂಧಗಳ ಮೇಲೆ ಕೂಡಿಯೇ ಆಚರಿಸುತ್ತಾರೆ.  ಇವರ ಎಲ್ಲರ ಕಾರ್ಯ ಚಟುವಟಿಕೆ ಆರಂಭ­ವಾಗುವುದೇ ಸಹಕಾರದಿಂದ.  ಹುಸೇನಬೀಗೆ ಬರೊಬ್ಬರಿ 110 ವರ್ಷ ವಯಸ್ಸಾಗಿದೆ.  ಸ್ಪಷ್ಟವಾಗಿ ಕಿವಿ ಕೇಳುತ್ತವೆ. ಕಣ್ಣು ಕಾಣುತ್ತವೆ. ಮನೆ ಎಲ್ಲರ ಸದಸ್ಯರನ್ನು ಗುರುತು ಹಿಡಿದು ಕರೆಯುವ ಹುಸೇನಬಿ ಎಲ್ಲರ ಪ್ರೀತಿಗೆ ಪಾತ್ರವಾಗಿದ್ದಾರೆ. ಕಡಕ್ ರೊಟ್ಟಿ ತಿನ್ನುವಷ್ಟು ಹಲ್ಲು ಗಟ್ಟಿಯಾಗಿವೆ. ಸ್ವಾವಲಂಬಿಯಾಗಿ ಓಡಾಡುತ್ತಿದ್ದಾರೆ.
ಹಿತಮಿತವಾದ ಆಹಾರ ಇವರ ಆರೋಗ್ಯದ ಗುಟ್ಟು ಎನ್ನುತ್ತಾರೆ ಡಾ.ಅಲ್ಲಾ ಬಂದೇಸಾಬ್‌.

ಹುಸೇನಬೀ ಮತ್ತು ಅಲಿಸಾಬ್‌ ಅವರಿಗೆ 4 ಜನ ಮಕ್ಕಳಿದ್ದು ಅವರ ವಂಶಾವಳಿ ಬೆಳೆಯುತ್ತಾ ಹೋಗಿದ್ದು, ಸದ್ಯ ಮನೆಯಲ್ಲಿ 120 ಸದಸ್ಯರಾ ಗಿದ್ದಾರೆ. ಖದರಿಯಾ ಕಾಲೊನಿಯಲ್ಲಿ ಲಂಬಿ ಹುಸೇನಬಿ ಎಂದರೆ ಚಿಕ್ಕಮಗುವು  ಅವರ ಮನೆಗೆ ಕರೆದುಕೊಂಡು ಹೋಗುವಷ್ಟರ ಮಟ್ಟಿಗೆ ಚಿರಪರಿ ಚಿತಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT