ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

13 ಸಾಧಕರಿಗೆ ‘ ಅವ್ವ ’ ಪ್ರಶಸ್ತಿ ಪ್ರದಾನ 13ಕ್ಕೆ

‘ಮಕ್ಕಳ ಮನದಾಳದಲ್ಲಿ ಅವ್ವ’ ಗ್ರಂಥ ಬಿಡುಗಡೆ; ಗುರುನಮನ
Last Updated 11 ಡಿಸೆಂಬರ್ 2015, 6:14 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅವ್ವ ಸೇವಾ ಟ್ರಸ್ಟ್‌ ಆಶ್ರಯ­ದಲ್ಲಿ ಮಾತೋಶ್ರೀ ಗುರವ್ವ ಶಿವಲಿಂಗಪ್ಪ ಹೊರಟ್ಟಿಯವರ ಆರನೇ ಪುಣ್ಯಸ್ಮರಣೆ, ‘ಅವ್ವ ಪ್ರಶಸ್ತಿ’ ಪ್ರದಾನ ಹಾಗೂ ‘ಮಕ್ಕಳ ಮನದಾಳದಲ್ಲಿ ಅವ್ವ’ ಗ್ರಂಥ ಬಿಡುಗಡೆ ಸಮಾರಂಭ ನಗರದ ಗುಜರಾತ್‌ ಭವ ನದಲ್ಲಿ ಇದೇ 13ರಂದು ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಗುರುವಾರ ಈ ವಿಷಯ ತಿಳಿಸಿದ ಟ್ರಸ್ಟ್ ಅಧ್ಯಕ್ಷ ಬಸವರಾಜ ಹೊರಟ್ಟಿ, ‘ಅಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಕೊಪ್ಪಳ ಗವಿಮಠದ ಗವಿಸಿದ್ಧೇಶ್ವರ ಸ್ವಾಮೀಜಿ ವಹಿಸುವರು. ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿ­ಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ ಪ್ರಶಸ್ತಿ ಪ್ರದಾನ ಮಾಡುವರು. ಹಿಂದು­ಳಿದ ವರ್ಗಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ ಗ್ರಂಥ ಬಿಡುಗಡೆ ಮಾಡಲಿದ್ದಾರೆ’ ಎಂದು ಅವರು ಹೇಳಿದರು.

‘ಇದೇ ವೇಳೆ ಶಾಮರಾವ್‌ ಗುಂಡೇ­ರಾವ್‌ ಗಂಜಿಹಾಳ, ಸಂಗಪ್ಪ ಕೊಪ್ಪದ ಅವರಿಗೆ ಗೌರವ ಸನ್ಮಾನ ಮತ್ತು ಗುರುನಮನ ನಡೆಯಲಿದೆ. ಅಕ್ಷರ ಬಿತ್ತಲು ಭೂಮಿ ಕೊಟ್ಟ ಶಿಕ್ಷಣ ಪ್ರೇಮಿ ಹುಚ್ಚಮ್ಮ ಚೌಧರಿ, ಸರಳ ಸಜ್ಜನ ಶತಾಯುಷಿ ಶಿಕ್ಷಕ ಶ್ರೀನಿವಾಸ ರಾವ್‌ ದೇಸಾಯಿ, ಹಾಡುಗಿತ್ತಿ ಪಾರ್ವತವ್ವ ಹೊಂಗಲ, ಕವಿ ರಾಮಣ್ಣಾ ಬ್ಯಾಟಿ, ಗುಡಿಗಳ ಕಸ ಗುಡಿಸುವ ಹನುಮವ್ವ, ಸೂಲಗಿತ್ತಿ ವಡ್ಡರ ಹನಮಕ್ಕ, ವೈದ್ಯ­ಕೀಯ ಸೇವೆ ಮಾಡುವ ಡಾ. ಕೆ.ಎಂ. ಹೆಗಡೆ, ಪಂಡಿತ್‌ ಸತೀಶ್‌ ಹಂಪಿಹೊಳಿ, ಕರ್ನಾಟಕ ಕಲಾಶ್ರೀ ರೂಪಾ ರಾಜೇಶ್‌, ವನ್ಯಜೀವಿ ಛಾಯಾಗ್ರಾಹಕಿ ಶೋಭಾ ಸಾಲಿ, ಕ್ರೀಡಾ ಪ್ರತಿಭೆ ಪ್ರಿಯಾಂಕ ಕಾಳಗಿ, ಬಾಲ ಪ್ರತಿಭೆ ವರ್ಷಾ ಭಂಡಾರಿ ಅವರಿಗೆ ‘ಅವ್ವ’ ಪ್ರಶಸ್ತಿ ಮತ್ತು ಬಹುಮುಖ ಪ್ರತಿಭೆ ಅಭಯ ಗಂಗಾವತಿಗೆ ವಿಶೇಷ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಗುವುದು’ ಎಂದರು.

‘ಬೆಳಗಾವಿ ವಿಭಾಗ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 2014ರ ಡಿಸೆಂಬರ್‌ 13ರಂದು ಏರ್ಪಡಿಸಿದ್ದ ‘ಅವ್ವ’ದ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ 2 ಸಾವಿರ ಮಂದಿ ಭಾಗವಹಿಸಿದ್ದು, ಅವುಗಳಲ್ಲಿ ಆಯ್ದ ಪ್ರಬಂಧಗಳನ್ನು ಸೇರಿಸಿ ‘ಮಕ್ಕಳ ಮನದಾಳದಲ್ಲಿ ಅವ್ವ’ ಗ್ರಂಥ ಹೊರತರಲಾಗಿದೆ. ಈ ಗ್ರಂಥದ ಕನ್ನಡ ಮತ್ತು ಇಂಗ್ಲಿಷ್‌ ಭಾಷೆಯಲ್ಲಿನ ವೆಬ್‌ಸೈಟ್‌ ಆವೃತ್ತಿಯನ್ನೂ ಬಿಡುಗಡೆ ಮಾಡಲಾಗುವುದು’ ಎಂದರು.

‘ಅವ್ವ ಟ್ರಸ್ಟ್‌ನ ಚಟುವಟಿಕೆಯಿಂದ ಪ್ರೇರಿತರಾದ ವಿಜಾಪುರ, ಧಾರವಾಡ, ಹಾವೇರಿ, ರಾಯಚೂರು ಮತ್ತಿತರ ಜಿಲ್ಲೆಯ 11 ಮಂದಿ ತಮ್ಮ ತಂದೆ ತಾಯಿಯನ್ನು ಕರೆದುಕೊಂಡು ನನ್ನ ಮನೆಗೆ ಬಂದು ನನಗೆ ಶಾಲು ಹೊದಿಸಿದ್ದಾರೆ. ಅಪ್ಪ– ಅಮ್ಮನ ಸೇವೆ ಮಾಡುವ ಪ್ರತಿಜ್ಞೆ ಮಾಡಿದ್ದಾರೆ’ ಎಂದ ಅವರು, ‘13ರಂದು ನಡೆಯುವ ಕಾರ್ಯಕ್ರಮದಲ್ಲಿ ಪೋಷಕರು ತಮ್ಮ ಮಕ್ಕಳ ಜೊತೆ ಪಾಲ್ಗೊಳ್ಳಬೇಕು’ ಎಂದು ವಿನಂತಿಸಿದರು.

***
ನೊಂದವರ, ಅಂಧ, ಅನಾಥರ,  ದಲಿತರ ನೋವುಗಳಿಗೆ ಅವ್ವ ಸೇವಾ ಟ್ರಸ್ಟ್‌ ಸ್ಪಂದಿಸುತ್ತ ಬಂದಿದೆ. ಅವರ ಬಾಳಲ್ಲಿ ಬದುಕಿನ ಭರವಸೆ ತುಂಬಿದೆ.
-ಬಸವರಾಜ ಹೊರಟ್ಟಿ,
ಅವ್ವ ಸೇವಾ ಟ್ರಸ್ಟ್‌ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT