ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15 ರಾಜತಾಂತ್ರಿಕ ಮುಖ್ಯಸ್ಥರೊಂದಿಗೆ ಸುಷ್ಮಾ ಸಭೆ

Last Updated 26 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಹನಾಯ್‌, ವಿಯೆಟ್ನಾಂ(ಪಿಟಿಐ): ವಿದೇ­­ಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು ಮಂಗಳವಾರ ಇಲ್ಲಿ ಆಗ್ನೇಯ ಮತ್ತು ನೈರುತ್ಯ ಏಷ್ಯಾ ದೇಶಗಳಲ್ಲಿರುವ 15 ಭಾರತೀಯ ರಾಜತಾಂತ್ರಿಕ ಕಚೇರಿ ಮುಖ್ಯಸ್ಥರ ಸಭೆ ನಡೆಸಿ, ಹೊಸ ಬಿಜೆಪಿ ಸರ್ಕಾರದ ವಿದೇಶಾಂಗ ನೀತಿಗಳ ಬಗ್ಗೆ ಚರ್ಚಿಸಿದರು.

ಕೇವಲ ರಾಷ್ಟ್ರ­ಗಳ ಕಡೆ ನೋಡದೆ, ಅವುಗಳ ಜತೆ ಸಂಬಂಧ ಬಲ­ಪಡಿಸುವ ನಿಟ್ಟಿನಲ್ಲಿ ಕಾರ್ಯ­ಪ್ರವೃ­ತ್ತ­­ವಾಗುವಂತೆ ಅವರು ರಾಜತಾಂತ್ರಿಕ ಅಧಿಕಾರಿ­ಗಳಿಗೆ ನಿರ್ದೇಶನ ನೀಡಿದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಯುದ್ಧ ತಂತ್ರಗಾರಿಕೆಯಲ್ಲಿ ಅತ್ಯಂತ ಮಹತ್ವದ ಈ ಪ್ರಾಂತ್ಯ­ದಲ್ಲಿ ಭದ್ರತಾ ವ್ಯವಸ್ಥೆ, ಚೀನಾದ  ಉಪಸ್ಥಿತಿ, ಭಾರತದ ಅಭಿವೃದ್ಧಿಗೆ ಅವಕಾಶ ಮತ್ತಿತರ ವಿಷಯ­ಗಳ ಬಗ್ಗೆಯೂ ಸಮಾಲೋಚಿಸಿದರು.

ಈ ಮಧ್ಯೆ, ಮುಂದಿನ ತಿಂಗಳು ವಿಯೆ­ಟ್ನಾಂಗೆ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಎರಡೂ ದೇಶಗಳ ನಡುವೆ ರಕ್ಷಣೆ, ವ್ಯಾಪಾರ, ಸಂಸ್ಕೃತಿ ಇನ್ನಿತರ ಕ್ಷೇತ್ರಗಳಲ್ಲಿ ಒಪ್ಪಂದ ಮಾಡಿಕೊಳ್ಳುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT