ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1,750 ಕೋಟಿ ಬೆಲೆಯ ಆಸ್ತಿಪಾಸ್ತಿ ಜಪ್ತಿ

ಅಕ್ರಮ ಹಣ ವರ್ಗಾವಣೆಗೆ ಕಡಿವಾಣ
Last Updated 29 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅಕ್ರಮ ಹಣ ವರ್ಗಾವಣೆ ನಿರ್ಮೂಲನೆ ಹೊಣೆ ಹೊತ್ತಿರುವ ಜಾರಿ ನಿರ್ದೇಶನಾಲಯವು ಕಳೆದ ಒಂದು ವರ್ಷದ ಅವಧಿಯಲ್ಲಿ 1,750 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮೌಲ್ಯದ ಆಸ್ತಿಪಾಸ್ತಿ ಹಾಗೂ ಬೆಲೆಬಾಳುವ ಸ್ವತ್ತುಗಳನ್ನು ಜಪ್ತಿ ಮಾಡಿದೆ.

ಇದೇ ವೇಳೆ, ಅಕ್ರಮ ಹಣ ವರ್ಗಾವಣೆ ಪ್ರಕರಣಗಳಿಗೆ ಸಂಬಂಧಿಸಿ-­ದಂತೆ ಅತಿ ಹೆಚ್ಚು ವಿಚಾರಣೆಗಳನ್ನೂ ನಿರ್ದೇಶನಾಲಯ ಕೈಗೊಂಡಿದೆ.

ಈ ಅವಧಿಯಲ್ಲಿ ನಿರ್ದೇಶನಾಲ­ಯವು ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿ (ಪಿಎಂ­ಎಲ್‌ಎ) ದೇಶದ ವಿವಿಧೆಡೆ ಕ್ರಮ ಕೈಗೊಂಡು 127 ಸ್ವತ್ತುಗಳನ್ನು ಜಪ್ತಿ ಮಾಡಿಕೊಂಡಿದೆ. ಭೂಮಿ, ಫ್ಲ್ಯಾಟ್‌, ಎಸ್‌ಯುವಿ– ವಾಹನಗಳು, ನಿಶ್ಚಿತ ಠೇವಣಿ, ನಗದು, ಆಭರಣ ಇತ್ಯಾದಿಗಳು ಇದರಲ್ಲಿ ಸೇರಿವೆ.

ಇದೇ ಮೊದಲ ಬಾರಿಗೆ ನಿರ್ದೇಶ­ನಾ­ಲಯವು ತಾನು ಜಪ್ತಿ ಮಾಡಿರುವ ಸ್ವತ್ತುಗಳ ವಿಳಾಸ ಹಾಗೂ ಮತ್ತಿತರ ಮಾಹಿತಿಗಳನ್ನು ಅಧಿಕೃತ ಅಂತರ್ಜಾ­ಲದಲ್ಲಿ ಪ್ರಕಟಿಸಿದೆ. ಈ ಸ್ವತ್ತುಗಳ ಚಿತ್ರಗಳನ್ನೂ ಅಂತರ್ಜಾಲದಲ್ಲಿ ಲಗತ್ತಿ­ಸುವ ಚಿಂತನೆಯನ್ನು ನಿರ್ದೇ­ಶನಾಲಯ ಹೊಂದಿದೆ. ಸಾರ್ವಜನಿಕರು ಈ ಸ್ವತ್ತುಗಳ ಖರೀದಿಗೆ ಮುಂದಾಗದಂತೆ ತಡೆಯುವುದು ಇದರ ಉದ್ದೇಶ ಎಂದು ಮೂಲಗಳು ತಿಳಿಸಿವೆ.

ಮುಟ್ಟುಗೋಲು ಹಾಕಲಾಗಿರುವ ಸ್ವತ್ತುಗಳಲ್ಲಿ ಕೆಲವು ನಿರ್ದಿಷ್ಟ ಸ್ವತ್ತುಗಳ  ಕುರಿತ ಮಾಹಿತಿಗಳನ್ನು ದಿನಪತ್ರಿಕೆಗಳಲ್ಲಿ ಪ್ರಕಟಿಸುವ ಬಗ್ಗೆಯೂ ಚಿಂತನೆ ನಡೆದಿದೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ಅಕ್ರಮ ಹಾಗೂ ಸಂಶಯಾಸ್ಪದ ಹಣ ವರ್ಗಾವಣೆ ಪ್ರಕರಣಗಳಿಗೆ ಸಂಬಂಧಿಸಿ­ದಂತೆ 55 ಪ್ರಕರಣಗಳ ವಿಚಾರಣೆ­ಯನ್ನು ಕೈಗೆತ್ತಿಕೊಂಡಿದೆ. ಇದಕ್ಕೆ ಮುನ್ನ 2005(06)– 2012(13)ರವರೆಗಿನ ಅವಧಿಯಲ್ಲಿ ಕೇವಲ 48 ಪ್ರಕರಣಗಳ ವಿಚಾರಣೆಗೆ ಚಾಲನೆ ನೀಡಲಾಗಿತ್ತು.

ಜಾರಿ ನಿರ್ದೇಶನಾಲಯವು 2005(06)ರಿಂದ 2014 (15)ನೇ ಸಾಲಿನ ಇಲ್ಲಿಯವರೆಗೆ ಪಿಎಂಎಲ್‌ಎ ಕಾಯ್ದೆಯಡಿ 5,314 ಕೋಟಿ ರೂಪಾಯಿ ಬೆಲೆಯ ಸ್ವತ್ತುಗಳನ್ನು ಜಪ್ತಿ ಮಾಡುವ ಜತೆಗೆ 319 ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT