ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1.8 ಲಕ್ಷ ಗಣೇಶ ಮೂರ್ತಿ ವಿಸರ್ಜನೆ

Last Updated 30 ಆಗಸ್ಟ್ 2014, 19:54 IST
ಅಕ್ಷರ ಗಾತ್ರ

ಬೆಂಗಳೂರು: ಗಣೇಶ ವಿಗ್ರಹಗಳ ವಿಸರ್ಜನೆಗೆ ಬಿಬಿಎಂಪಿ ವ್ಯವಸ್ಥೆ ಮಾಡಿರುವ ಕೆರೆಗಳು, ತಾತ್ಕಾಲಿಕ ಟ್ಯಾಂಕರ್‌ ಮತ್ತು ಸಂಚಾರಿ ಟ್ಯಾಂಕರ್‌ಗಳಲ್ಲಿ ಶುಕ್ರವಾರ ಮತ್ತು ಶನಿವಾರ 1.8 ಲಕ್ಷಕ್ಕೂ ಹೆಚ್ಚು ವಿಗ್ರಹಗಳು ವಿಸರ್ಜನೆಯಾಗಿವೆ.

ಪೂರ್ವ ವಲಯದಲ್ಲಿ 21 ಸಾವಿರ, ದಕ್ಷಿಣ ವಲಯದಲ್ಲಿ 44,560, ಪಶ್ಚಿಮ ವಲಯದಲ್ಲಿ 26,025, ಮಹದೇವಪುರ 1,060, ಬೊಮ್ಮನಹಳ್ಳಿ 231, ರಾಜರಾಜೇಶ್ವರಿ ನಗರ 2,210, ಯಲಹಂಕ 13,095, ದಾಸರಹಳ್ಳಿಯಲ್ಲಿ 121 ವಿಗ್ರಹಗಳನ್ನು ವಿಸರ್ಜನೆ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.

ವಿಗ್ರಹಗಳನ್ನು ವಿಸರ್ಜನೆ ಮಾಡುವ ಕೆರೆಗಳು, ತಾತ್ಕಾಲಿಕ ಟ್ಯಾಂಕರ್‌ ಮತ್ತು ಸಂಚಾರಿ ಟ್ಯಾಂಕರ್‌ ಬಳಿ ಸಂಗ್ರಹವಾಗುವ ಬಾಳೆ ಕಂದು, ಮಾವಿನ ಸೊಪ್ಪು, ಹೂವು ಮತ್ತಿತರ ತ್ಯಾಜ್ಯಗಳನ್ನು ತಕ್ಷಣ ವಿಲೇವಾರಿ ಮಾಡಲು ಕ್ರಮ ಕೈಗೊಂಡಿದ್ದರಿಂದ ಹೆಚ್ಚಿನ ತ್ಯಾಜ್ಯ ಕಂಡು ಬರಲಿಲ್ಲ.

ಸ್ಯಾಂಕಿ ಕೆರೆ ಬಳಿ ಬಿಬಿಎಂಪಿ ಅಧಿಕಾರಿಗಳು, ಎಂಜಿನಿಯರ್‌ಗಳು ಮುಂದೆ ನಿಂತು ತ್ಯಾಜ್ಯವನ್ನು ವಿಲೇವಾರಿ ಮಾಡಿಸಿದರು. ಯಡಿಯೂರು ಕೆರೆ ಬಳಿ ತ್ಯಾಜ್ಯವನ್ನು ಹಾಕಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದರೂ ಸಾರ್ವಜನಿಕರು ರಸ್ತೆ ಬದಿಯೇ ಕಸ ಎಸೆದಿದ್ದು ಕಂಡು ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT