ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ವರ್ಷದ ಹಿಂದಿನ ಮಟ್ಟಕ್ಕೆ ಕುಸಿದ ರೂಪಾಯಿ ವಿನಿಮಯ ಮೌಲ್ಯ

2 ವರ್ಷದಲ್ಲೇ ಕನಿಷ್ಠ ಮೌಲ್ಯ; 1ಡಾಲರ್‌=₹67.09
Last Updated 14 ಡಿಸೆಂಬರ್ 2015, 13:34 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಡಾಲರ್‌ ವಿರುದ್ಧ ರೂಪಾಯಿ ವಿನಿಮಯ ಮೌಲ್ಯವು ಸೋಮವಾರ 21 ಪೈಸೆಗಳಷ್ಟು ಕುಸಿದು, ಕಳೆದ ಎರಡು ವರ್ಷಗಳಲ್ಲೇ ಕನಿಷ್ಠ ಮಟ್ಟವಾದ ₹67.09 ತಲುಪಿದೆ.

ಕಳೆದ ವಾರಾಂತ್ಯದಲ್ಲಿ ರೂಪಾಯಿ ಮೌಲ್ಯ ₹66.88ರಷ್ಟಿತ್ತು. ಸೋಮವಾರ ವಹಿವಾಟಿನ ಅಂತ್ಯಕ್ಕೆ ಶೇ 0.31ರಷ್ಟು ಅಪಮೌಲ್ಯಕ್ಕೆ ಒಳಗಾಗಿ ಕಳೆದ 27 ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಇಳಿಯಿತು.

ಅಮೆರಿಕದ ಸೆಂಟ್ರಲ್‌ ಬ್ಯಾಂಕ್‌ ಬಡ್ಡಿ ದರ ಹೆಚ್ಚಿಸಲಿದೆ ಎಂಬ ವಿಶ್ಲೇಷಣೆಯಿಂದ ಜಾಗತಿಕ ಹಣಕಾಸು ಮಾರುಕಟ್ಟೆಗಳಲ್ಲಿ ಅಸ್ಥಿರತೆ ಮೂಡಿಸಿದೆ. ಇದರಿಂದಾಗಿ ಷೇರು ಮಾರುಕಟ್ಟೆ ಕುಸಿತ ಕಂಡಿದೆ. ಇನ್ನೊಂದೆಡೆ ಡಾಲರ್‌ಗೆ ಬೇಡಿಕೆ ಹೆಚ್ಚಿದೆ. ಈ ಎಲ್ಲ ಸಂಗತಿಗಳು ರೂಪಾಯಿ ಅಪಮೌಲ್ಯಕ್ಕೆ ಕಾರಣವಾಗಿವೆ.

ಈ ವರ್ಷದಲ್ಲಿ ಇದುವರೆಗೆ ರೂಪಾಯಿ ಡಾಲರ್‌ ವಿರುದ್ಧ ಶೇ 5.90ರಷ್ಟು ಅಪಮೌಲ್ಯಕ್ಕೆ ಒಳಗಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT