ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2015ರಲ್ಲಿ 35 ಸಾವಿರ ನೇಮಕ

ಕ್ಯಾಂಪಸ್‌ ಆಯ್ಕೆ ಶುರು: ಟಿಸಿಎಸ್‌
Last Updated 19 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಮುಂಬೈ(ಪಿಟಿಐ):ಮುಂದಿನ ಹಣಕಾಸು ವರ್ಷದಲ್ಲಿ ಕ್ಯಾಂಪಸ್‌ ಆಯ್ಕೆ ಮೂಲಕವೇ 35 ಸಾವಿರ ಸಿಬ್ಬಂದಿ­ಯನ್ನು ನೇಮಿಸಿಕೊಳ್ಳ­ಲಾಗು­ವುದು ಎಂದು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಹೇಳಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು 25 ಸಾವಿರ ಎಂಜಿನಿಯರಿಂಗ್‌ ಪದವೀಧ­ರ­ರನ್ನು ನೇಮಿಸಿಕೊಳ್ಳ-­ಲಾ­ಗಿದೆ. ಈ ಬಾರಿ ಒಟ್ಟಾರೆ 55 ಸಾವಿರ ಮಂದಿಯ ನೇಮಕ­ವಾದಂತಾಗಿದೆ ಎಂದು ಟಿಸಿಎಸ್‌­ನ ಮಾನವ ಸಂಪ­ನ್ಮೂಲ ವಿಭಾಗದ ಜಾಗತಿಕ ಮುಖ್ಯಸ್ಥರೂ ಆದ ಕಾರ್ಯ­ನಿರ್ವಾಹಕ ಉಪಾಧ್ಯಕ್ಷ ಅಜೋಯ್‌ ಮುಖರ್ಜಿ ಸುದ್ದಿಗಾರರಿಗೆ ತಿಳಿಸಿದರು.

2015–16ನೇ ಹಣಕಾಸು ವರ್ಷ­ದಲ್ಲಿನ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಕಂಪೆನಿಯ ಅಧಿಕಾರಿ­ಗಳು ಈಗಾಗಲೇ ಕಾಲೇಜು ಕ್ಯಾಂಪಸ್‌­ಗಳಿಗೆ ಭೇಟಿ ನೀಡಲು ಆರಂಭಿಸಿದ್ದಾರೆ. ಶೇ 71­ರಿಂದ 72ರಷ್ಟು ಮಂದಿ ಹೊಸಬರೇ ನೇಮಕ­ಗೊಳ್ಳಲಿದ್ದಾರೆ ಎಂದು  ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT