ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2015ರ ಜುಲೈಗೆ ‘ವಿಂಡೋಸ್ 2003’ ಅವಧಿ ಅಂತ್ಯ

Last Updated 17 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ವಿಂಡೋಸ್ 2003’ ಕಾರ್ಯಾ­ಚರಣೆ ವ್ಯವಸ್ಥೆಯ  (ಆಪ­ರೇಟಿಂಗ್ ಸಿಸ್ಟಂ) ಅವಧಿ 2015ರ  ಜುಲೈಗೆ ಕೊನೆ­ಗೊಳ್ಳುತ್ತದೆ ಎಂದು ಮೈಕ್ರೊಸಾಫ್ಟ್ ಘೋಷಿಸಿದೆ. ಇದನ್ನು ಬಳಸು­ತ್ತಿ­ರುವ­ವರು ನೂತನ ಕಾರ್ಯಾ­ಚರಣೆ ವ್ಯವಸ್ಥೆಗೆ ಬದಲಿಸಿಕೊಳ್ಳಿ ಅಥವಾ ಸೂಕ್ತ ಭದ್ರತಾ ವ್ಯವಸ್ಥೆ ಅಳವಡಿಸಿಕೊಳ್ಳಿ ಎಂದು ಸೈಬರ್ ಭದ್ರತಾ ತಜ್ಞರು ಸೂಚನೆ ನೀಡಿದ್ದಾರೆ.

2015ರ ಜುಲೈ 14ರ ನಂತರ ವಿಂಡೋಸ್ 2003ಗೆ ಸಂಬಂಧಿಸಿದ ಸರ್ವರ್ ತನ್ನ ಕಾರ್ಯಚಟುವಟಿಕೆ ಸ್ಥಗಿತಗೊಳಿಸಲಿದೆ. ನಂತರ ಈ ವ್ಯವಸ್ಥೆಗೆ ಸಂಬಂಧಿಸಿದ ಯಾವುದೇ ಭದ್ರತಾ ಸೇವೆ ಮತ್ತು ಅಪ್‌ಡೇಟ್‌ಗಳು ಲಭ್ಯವಿರು­ವುದಿಲ್ಲ.

ಈ ಅವಧಿಯ ನಂತರ ಹ್ಯಾಕಿಂಗ್‌ಗಳನ್ನು ತಡೆಗಟ್ಟುವಷ್ಟು ಈ ವ್ಯವಸ್ಥೆ ಶಕ್ತವಾಗಿರುವುದಿಲ್ಲ ಎಂದು ಮೈಕ್ರೊಸಾಫ್ಟ್ ಘೋಷಿಸಿದೆ. ಇದರಿಂದ ಈ ವ್ಯವಸ್ಥೆ ಬಳಸುತ್ತಿರುವ  ಕಂಪ್ಯೂಟರ್‌­ನಲ್ಲಿರುವ ವ್ಯಾವಹಾರಿಕ ದತ್ತಾಂಶ ಮತ್ತು ಬೌದ್ಧಿಕ ಮಾಹಿತಿಗಳಿಗೆ ಯಾವುದೇ ಭದ್ರತೆ ಇರುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ. ಹೀಗಾಗಿ ವಿಂಡೋಸ್ 2003 ಬಳಸು­ತ್ತಿ­ರುವವರು ಬೇರೆ ಕಾರ್ಯಾ­ಚರಣೆ ವ್ಯವಸ್ಥೆ ಅಳವ ಡಿಸಿಕೊಳ್ಳುವುದು ಒಳಿತು ಎಂದರು.

2015ರ ಜುಲೈ 14ರವರೆಗೂ ವಿಂಡೋಸ್ 2003ಗೆ ಸಂಬಂಧಿಸಿದಂತೆ ಭದ್ರತಾ ಮತ್ತು ಇತರೆ ಅಪ್‌ಡೇಟ್‌ಗಳು ಲಭ್ಯವಿರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT