ಲಂಡನ್ (ಪಿಟಿಐ): ಈ ಶತಮಾನದ ಮಧ್ಯಭಾಗದಲ್ಲಿ ವಿಶ್ವ ಜನಸಂಖ್ಯೆ ಪ್ರಮಾಣ ಸ್ಥಿರವಾಗಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಜನಸಂಖ್ಯೆ ಪ್ರಮಾಣವನ್ನು ನಿರ್ಧರಿಸಲು ಖಗೋಳವಿಜ್ಞಾನಿಗಳು ಅನುಸರಿಸಿದ ಮಾದರಿ ಮತ್ತು ಜನಸಂಖ್ಯೆ ಇಳಿಮುಖದ ಬಗ್ಗೆ ವಿಶ್ವಸಂಸ್ಥೆಯ ಪೂರ್ವಾನುಮಾನದ ಅಂಕಿ-ಅಂಶಗಳಲ್ಲಿ ಸಮಾನ ಹೋಲಿಕೆ ಇದೆ ಎಂದು ಸ್ಪೇನ್ ಮೂಲದ ವೈಜ್ಞಾನಿಕ ಮಾಹಿತಿ ಮತ್ತು ಸುದ್ದಿ ಸೇವಾ ಸಂಸ್ಥೆ (ಎಸ್ಐಎನ್ಸಿ) ವರದಿ ಮಾಡಿದೆ.

ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ, 2100ರಲ್ಲಿ ಜಗತ್ತಿನ ಒಟ್ಟು ಜನಸಂಖ್ಯೆ ಗರಿಷ್ಠ 1580 ಕೋಟಿ ಮತ್ತು ಕನಿಷ್ಠ 620 ಕೋಟಿ ಆಸುಪಾಸಿನಲ್ಲಿ ಇರಲಿದೆ. ಈಗಿರುವ 700 ಕೋಟಿ ಜನಸಂಖ್ಯೆಗೆ ಹೋಲಿಸಿದರೆ ಇದು ತೀರ ಕಡಿಮೆ ಎಂದು ವಿವರಿಸಿದೆ.

ಜನಸಂಖ್ಯೆ ಕುರಿತು ಗಣಿತಶಾಸ್ತ್ರೀಯ ಮಾದರಿಯನ್ನು ಅಭಿವೃದ್ಧಿಪಡಿಸಿರುವ ಮ್ಯಾಡ್ರಿಡ್ ಮತ್ತು ಸಿಇಯು-ಸ್ಯಾನ್ ಪ್ಯಾಬ್ಲೊ ವಿಶ್ವವಿದ್ಯಾಲಯದ ವಿಜ್ಞಾನಿಗಳು, 21ನೇ ಶತಮಾನದ ಮಧ್ಯಭಾಗದಲ್ಲಿ ಜನಸಂಖ್ಯೆ ಸ್ಥಿರವಾಗಿರಲಿದೆ ಮತ್ತು ಆ ಸಂಖ್ಯೆಯಲ್ಲಿ ಕೊಂಚ ಇಳಿಮುಖ ಕೂಡ ಆಗಬಹುದು ಎಂದು ಅಂದಾಜಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.