ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

60 ಕಲಾವಿದರಿಗೆ ಜಾನಪದ ಪ್ರಶಸ್ತಿ

Last Updated 18 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: 2012 ಮತ್ತು 2013ನೇ ಸಾಲಿನ ಪ್ರಶಸ್ತಿ­ಗಳನ್ನು ಕರ್ನಾಟಕ ಜಾನಪದ ಅಕಾಡೆಮಿ ಶನಿವಾರ ಪ್ರಕಟಿಸಿದೆ. ನಾಲ್ವರು ಜಾನಪದ ತಜ್ಞರು ಮತ್ತು 60 ಜಾನಪದ ಕಲಾವಿದರಿಗೆ ಪ್ರಶಸ್ತಿಗಳು ಸಂದಿವೆ.

ಪುರಸ್ಕೃತ ಕಲಾವಿದರ ಪ್ರಶಸ್ತಿ ತಲಾ ₨ 5 ಸಾವಿರ ನಗದು ಮತ್ತು ಸ್ಮರಣಿಕೆ, ತಜ್ಞರಿಗೆ ನೀಡುವ ಪ್ರಶಸ್ತಿಯು ತಲಾ ₨ 10 ಸಾವಿರ ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ ಎಂದು ಅಕಾಡೆಮಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್‌ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
2012ನೇ ಸಾಲಿನ ತಜ್ಞ ಪ್ರಶಸ್ತಿ: ಜಿ.ಶಂ. ಪರಮಶಿವಯ್ಯ ಪ್ರಶಸ್ತಿ: ಡಾ. ಸೈಯದ್‌ ಝಮೀರುಲ್ಲಾ ಷರೀಫ್‌ (ಉತ್ತರ ಕನ್ನಡ).
ಡಾ.ಬಿ.ಎಸ್‌. ಗದ್ದಗಿಮಠ ಪ್ರಶಸ್ತಿ: ದೇಶಾಂತ ಹುಡಗಿ (ಬೀದರ್‌).

2012ನೇ ಸಾಲಿನ ಗೌರವ ಪ್ರಶಸ್ತಿ: ಅರ್ಜುನ ಮರಾಠ– ಮೊಹರಂ ಪದ (ಜೇವರ್ಗಿ), ಬಸಪ್ಪ ಗುಡಿಗೇರ– ಜಗ್ಗಲಿಗೆ ವಾದನ (ಹುಬ್ಬಳ್ಳಿ), ಮರಿಗೌಡ– ಕಂಸಾಳೆ ಕುಣಿತ (ಮೈಸೂರು), ಶಂಕರಪ್ಪ ಎನ್‌. ನಾಗೂರೆ– ಜಾನಪದ ವೈದ್ಯ (ಹುಮ್ನಾಬಾದ್‌), ಗಂಗಪ್ಪ ಸತಬಣ್ಣವರ– ಜಗ್ಗಲಿಗೆ ವಾದನ (ಖಾನಾಪುರ).

ಯಲ್ಲಪ್ಪ ಡಕ್ಕಣ್ಣವರ– ಸುಡುಗಾಡು ಸಿದ್ದರು (ಗದಗ), ರಾಮಪ್ಪ ಖೋತ– ರಿವಾಯಿತ್‌ ಪದ (ಮುಧೋಳ), ಬಾಬು ಗಿಡ್ಡ ಸಿದ್ಧಿ– ಬುಡಕಟ್ಟು ವೈದ್ಯ (ಯಲ್ಲಾಪುರ), ಆರ್‌. ಬಸಪ್ಪ– ವೀರಗಾಸೆ (ತರೀಕೆರೆ), ಕೈವಾರ ರಾಮಣ್ಣ– ತತ್ವಪದ ಗಾಯನ (ಚಿಂತಾಮಣಿ), ವಿ. ತಿಮ್ಮಪ್ಪ– ತತ್ವಪದ (ಕೋಲಾರ), ವಾಲ್ಮೀಕಪ್ಪ ಯಕ್ಕರನಾಳ– ಲಾವಣಿ ಪದ (ಕುಷ್ಟಗಿ), ಮೋನಪ್ಪ ಬನಸಿ– ಕರಡಿ ಮಜಲು (ವಿಜಾಪುರ).

ಕೊರಗ ಪಾಣಾರ– ಭೂತಾರಾಧನೆ (ಉಡುಪಿ), ಕಾಂತರ– ಜಾನಪದ ವೈದ್ಯ (ಮಂಗಳೂರು), ಗೌರವ್ವ– ಸೋಬಾನೆ ಪದ (ಶಿಗ್ಗಾವಿ), ನಾಗಮ್ಮ– ಸೋಲಿಗರ ಗೀತೆ (ಸೋಮವಾರಪೇಟೆ), ಚಿಕ್ಕ ಅಲುಗಮ್ಮ– ಸಂಪ್ರದಾಯ ಪದ (ಕನಕಪುರ), ಮದ್ದೂರಮ್ಮ– ಕಥನ ಗೀತೆ (ದೊಡ್ಡಬಳ್ಳಾಪುರ), ಶಾಂತಮ್ಮ– ತಮಟೆ ವಾದನ (ಚಿತ್ರದುರ್ಗ), ಚಿಕ್ಕರಾಮಕ್ಕ– ತಂಬೂರಿ ಪದ (ತುಮಕೂರು), ಕತ್ತಿಗೆ ಬಸಮ್ಮ– ಸಂಪ್ರದಾಯ ಪದ (ಹೊನ್ನಾಳಿ).

ತಿಮ್ಮಮ್ಮ– ತತ್ವಪದ (ಹಾಸನ), ಪಾರ್ವತಮ್ಮ– ನಾಟಿ ವೈದ್ಯೆ (ಹಗರಿಬೊಮ್ಮನಹಳ್ಳಿ), ಹುಚ್ಚಮ್ಮ– ಸೋಬಾನೆ ಪದ (ನಾಗಮಂಗಲ), ಮಹಾಲಕ್ಷ್ಮಮ್ಮ– ಜಾನಪದ ಗಾಯನ (ಸಾಗರ), ಆರ್‌. ಶಿವಕುಮಾರಿ– ಸಂಪ್ರದಾಯ ಪದ (ರಾಯಚೂರು), ಲಕ್ಷ್ಮೀಬಾಯಿ ರೇವಲ್‌– ಬುರ್ರಕಥೆ (ಶಹಾಪುರ), ಲಕ್ಷ್ಮಮ್ಮ– ನಾಟಿ ಪದ (ಯಳಂದೂರು), ಸಿದ್ದಮ್ಮ– ಹಚ್ಚೆಕಲೆ (ಕಮಲಾನಗರ, ಬೆಂಗಳೂರು).

2013ನೇ ಸಾಲಿನ ತಜ್ಞ ಪ್ರಶಸ್ತಿ: ಜಿ.ಶಂ. ಪರಮಶಿವಯ್ಯ ಪ್ರಶಸ್ತಿ: ಡಾ. ಸುಶೀಲಾ ಹೊನ್ನೇಗೌಡ, ಬೆಂಗಳೂರು. ಡಾ.ಬಿ.ಎಸ್‌. ಗದ್ದಗಿಮಠ ಪ್ರಶಸ್ತಿ, ಡಾ. ಸಿದ್ದಣ್ಣ ಎಫ್‌. ಜಕಬಾಳ, ಗದಗ.

2013ನೇ ಸಾಲಿನ ಗೌರವ ಪ್ರಶಸ್ತಿ: ಗಂಗಮ್ಮ ತಾಯತ– ಸಂಪ್ರದಾಯ ಪದ (ಸೇಡಂ), ನಾಗುಬಾಯಿ– ಸಂಪ್ರದಾಯ ಪದ (ಹುಬ್ಬಳ್ಳಿ), ಚಿಕ್ಕತಾಯಮ್ಮ– ಸೋಬಾನೆ ಪದ (ಟಿ. ನರಸೀಪುರ), ತಾನಮ್ಮ– ಕಥನ ಕಾವ್ಯ (ಹುಮ್ನಾಬಾದ್‌), ಬೌರವ್ವ ಕಾಂಬಳೆ– ಗೀಗೀ ಪದ (ಅಥಣಿ), ವಿರೂಪಾಕ್ಷಪ್ಪ ಗೂರನವರ– ಕೋಲಾಟ (ಗದಗ), ರುಕ್ಮವ್ವ ಬರಗಾಲ– ಚೌಡಿಕೆ ಪದ (ಜಮಖಂಡಿ), ಲಕ್ಷ್ಮಿ ಬುದ್ದುಗೌಡ– ತಾರ್ಲೆ ಪದ (ಅಂಕೋಲಾ).

ತಾಯಮ್ಮ– ಸೋಬಾನೆ ಪದ (ತರೀಕೆರೆ), ಈರಮ್ಮ– ತತ್ವಪದ (ಶಿಡ್ಲಘಟ್ಟ), ಮೇಲೂರಮ್ಮ– ಕಥನ ಕಾವ್ಯ (ಶ್ರೀನಿವಾಸಪುರ), ಪಾರವ್ವ ಲಮಾಣಿ– ಲಂಬಾಣಿ ನೃತ್ಯ (ಯಲಬುರ್ಗ), ಲಕ್ಷ್ಮೀಬಾಯಿ ಮಾದರ– ಚೌಡಿಕೆ ಪದ (ಬಸವನ ಬಾಗೇವಾಡಿ), ಸುಂದರಿ– ಪಾಡ್ದನ (ಉಡುಪಿ), ಸಿಂಧು ಗುಜರನ್‌– ಭೂತಾರಾಧನೆ (ಮಂಗಳೂರು), ಹೊಳೆಲಿಂಗಪ್ಪ ಬಸಪ್ಪ ಚವ್ಹಾಣ– ಕಿಂದರಿಜೋಗಿ ಪದ (ಹಾನಗಲ್).

ಪಿ.ಸಿ. ಚಾತ– ಬುಡಕಟ್ಟು ಕಥನ ಕಾವ್ಯ (ವಿರಾಜಪೇಟೆ), ರಾಮ ಸಂಜೀವಯ್ಯ– ಪಟಾಕುಣಿತ (ರಾಮನಗರ), ಎಸ್‌. ಯೋಗಲಿಂಗಂ– ಕೀಲುಕುದುರೆ (ಬೆಂಗಳೂರು), ಟಿ. ನಾಗರಾಜಪ್ಪ– ಕರಡಿ ಮಜಲು (ಹೊಸಕೋಟೆ), ಚಂದ್ರಪ್ಪ– ಉರುಮೆ ವಾದನ (ಹೊಸದುರ್ಗ), ಚಿಕ್ಕಕರಿಯಪ್ಪ– ಗಣೆ ವಾದನ (ಶಿರಾ), ನಾಗ ಬೈರಪ್ಪ– ಜೋಗಿ ಪದ (ಚನ್ನಗಿರಿ), ವೆಂಕಟರಾಮು– ಚಿಟ್ಟಿ ಮೇಳ (ಹಾಸನ).

ವೈ. ಮಲ್ಲಿಕಾರ್ಜುನಪ್ಪ– ಹಗಲು ವೇಷಗಾರ (ಸಂಡೂರು), ಚಂದ್ರಶೇಖರ ಆರಾಧ್ಯ– ಹಸೆ ಜಗಲಿ (ಮಂಡ್ಯ), ಗುಡ್ಡಪ್ಪ ಜೋಗಿ– ಕಿಂದರಿಜೋಗಿ ಪದ (ಸಾಗರ), ಎಚ್‌. ಶರಣಪ್ಪ ದಿನ್ನಿ– ತತ್ವಪದ (ಮಾನವಿ), ಶಾಂತಗೌಡ ಮಾಲಿಪಾಟೀಲ– ತತ್ವಪದ (ಸುರಪುರ), ದೊಡ್ಡಗವಿಬಸಪ್ಪ– ನೀಲಗಾರರ ಪದ (ಚಾಮರಾಜನಗರ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT