ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

7ನೇ ವೇತನ ಆಯೋಗ ಶೀಘ್ರ ಜಾರಿ

ಪಿ.ಕೆ. ಸಿನ್ಹಾ ನೇತೃತ್ವದ ಸಮಿತಿ ಶಿಫಾರಸು
Last Updated 27 ಜೂನ್ 2016, 13:43 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಕೇಂದ್ರ ಸರ್ಕಾರ ಶೀಘ್ರದಲ್ಲೇ 7ನೇ ವೇತನ ಆಯೋಗ ಜಾರಿ ಮಾಡಲಿದ್ದು, ಒಂದು ಕೋಟಿ ಸರ್ಕಾರಿ ನೌಕರರ ವೇತನ ಹಾಗೂ ಭತ್ಯೆ ಹೆಚ್ಚಳವಾಗಲಿದೆ. ಪಿಂಚಣಿ ಕನಿಷ್ಠ 23.5ರಷ್ಟು ಹೆಚ್ಚಾಗಲಿದೆ.

ಸಂಪುಟ ಕಾರ್ಯದರ್ಶಿ ಪಿ.ಕೆ. ಸಿನ್ಹಾ ಅವರ ನೇತೃತ್ವದಲ್ಲಿ ರಚಿಸಿದ್ದ ಸಮಿತಿ ವರದಿ ಸಲ್ಲಿಸಿದ್ದು, 7ನೇ ವೇತನ ಆಯೋಗ ಜಾರಿಗೆ ಶಿಫಾರಸು ಮಾಡಿದೆ. ವರದಿ ಬಹುತೇಕ ಒಪ್ಪಿಗೆಯಾಗಿದೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಸಮಿತಿ ನೀಡಿರುವ ವರದಿಯನ್ನು ಆಧರಿಸಿ ಹಣಕಾಸು ಸಚಿವಾಲಯ ಸಂಪುಟ ಟಿಪ್ಪಣಿ ಸಿದ್ಧಪಡಿಸಿ, ಸಂಪುಟದ ಅನುಮೋದನೆಗೆ ಕಳುಹಿಸಲಿದೆ. ಜೂನ್‌ 29ರಂದು ಆರಂಭವಾಗಲಿರುವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

‘ಸಮಿತಿಯು 7ನೇ ವೇತನ ಆಯೋಗ ಜಾರಿಗೆ ಶಿಫಾರಸು ಮಾಡಿ ಅಂತಿಮ ವರದಿ ಸಲ್ಲಿಸಿದೆ. ವರದಿಯನ್ನು ಆಧರಿಸಿ ಶೀಘ್ರದಲ್ಲೇ ಸಂಪುಟ ಟಿಟ್ಟಣಿ ಸಿದ್ಧಪಡಿಸಲಾಗುವುದು’ ಎಂದು ಹಣಕಾಸು ಕಾರ್ಯದರ್ಶಿ ಅಶೋಕ್‌ ಲವಾಸಾ ಹೇಳಿದ್ದಾರೆ.

7ನೇ ವೇತನ ಆಯೋಗ ಜನವರಿ 1ರಿಂದ ಅನ್ವಯವಾಗಲಿದೆ ಎಂದು ಅಶೋಕ್‌ ಲವಾಸಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT