ಬೆಂಗಳೂರು: ‘ಇ – ಕಾಮರ್ಸ್ ಕಂಪೆನಿಗಳು ಆನ್ಲೈನ್ನಲ್ಲಿ ಶೇ 20ರಿಂದ 70ರಷ್ಟು ರಿಯಾಯ್ತಿಗೆ ವಸ್ತುಗಳನ್ನು ಮಾರಾಟ ಮಾಡುತ್ತಿವೆ. ಮಾರುಕಟ್ಟೆ ನಿಯಮಗಳನ್ನು ಉಲ್ಲಂಘಿಸಿ ಕಾನೂನು ಬಾಹಿರ ವಹಿವಾಟಿನಲ್ಲಿ ತೊಡಗಿವೆ. ಜೊತೆಗೆ ನಮ್ಮ ಹೊಟ್ಟೆಯ ಮೇಲೂ ಹೊಡೆಯುತ್ತಿವೆ. ಹೀಗಾದರೆ ನಾವು ಕೆಲಸಗಾರರನ್ನು ಮನೆಗೆ ಕಳುಹಿಸಿ ಅಂಗಡಿ ಬಾಗಿಲು ಮುಚ್ಚಬೇಕಾಗುತ್ತದೆ’...

–ಮೊಬೈಲ್ ಫೋನ್ ಮಾರಾಟ ಕ್ಷೇತ್ರದಲ್ಲಿ ಹೆಸರು ಮಾಡಿರುವ ಸಂಗೀತಾ ಮೊಬೈಲ್ಸ್ ಚಿಲ್ಲರೆ ಮಾರಾಟ ಮಳಿಗೆಗಳ ವ್ಯವಸ್ಥಾಪಕ ನಿರ್ದೇಶಕ ಸುಭಾಷ್ ಚಂದ್ರ ರೆಡ್ಡಿ ಅವರು ‘ಪ್ರಜಾವಾಣಿ’ ಜೊತೆ ತಮ್ಮ ಸಂಕಷ್ಟವನ್ನು ಹೇಳಿಕೊಂಡ ರೀತಿ ಇದು.

‘ನಾವು ಒಟ್ಟು 170 ಮಳಿಗೆಗಳನ್ನು ಹೊಂದಿದ್ದೇವೆ. ಬೆಂಗಳೂರಿನಲ್ಲಿಯೇ 92 ಮಳಿಗೆಗಳಿವೆ. ಇ–ಕಾಮರ್ಸ್ ಕಂಪೆನಿಗಳಾದ ಫ್ಲಿಪ್ಕಾರ್ಟ್, ಸ್ನ್ಯಾಪ್ಡೀಲ್, ಅಮೆಜಾನ್ ವಿಪರೀತ ರಿಯಾಯ್ತಿ ನೀಡಿ ಮೊಬೈಲ್ಗಳನ್ನು ಮಾರಾಟ ಮಾಡುತ್ತಿರುವುದರಿಂದ 2ನಮ್ಮ ವಹಿವಾಟಿನ ಮೇಲೆ ದೊಡ್ಡ ಪೆಟ್ಟು ಬಿದ್ದಿದೆ. ಇನ್ನು ಕೆಲವರು ಭಾರಿ ನಷ್ಟ ಅನುಭವಿಸುತ್ತಿದ್ದಾರೆ. ಕೆಲ ಮಾಲೀಕರು ತಮ್ಮ ಮಳಿಗೆಗಳಿಗೆ ಬೀಗ ಹಾಕಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

ಇದು ಕೇವಲ ಒಬ್ಬರ ಗೋಳಾಟವಲ್ಲ. ಸಾಂಪ್ರದಾಯಿಕ ವ್ಯಾಪಾರದಲ್ಲಿ ತೊಡಗಿರುವ ನೂರಾರು ವರ್ತಕರ ಸಮಸ್ಯೆ. ಅದರಲ್ಲೂ ಎಲೆ

ತನಿಖೆ ಇಲ್ಲ

ನವದೆಹಲಿ (ಪಿಟಿಐ): ಫ್ಲಿಪ್ಕಾರ್ಟ್ ಕಳೆದ ವಾರ ನಡೆಸಿದ ಭಾರಿ ರಿಯಾಯ್ತಿ ಮಾರಾಟಕ್ಕೆ ಸಂಬಂಧಿಸಿದಂತೆ ಹೊಸದಾಗಿ ಯಾವುದೇ ತನಿಖೆ ನಡೆಸುತ್ತಿಲ್ಲ ಎಂದು ಜಾರಿ ನಿರ್ದೇಶನಾಲಯ ಸ್ಪಷ್ಟಪಡಿಸಿದೆ.
‘ಬಿಗ್ ಬಿಲಿಯನ್ ಡೇ ಸೇಲ್’ ಹೆಸರಿನಲ್ಲಿ ನಡೆಸಿದ ಮಾರಾಟ ಬಗ್ಗೆ ಯಾವುದೇ ತನಿಖೆ ನಡೆಸುತ್ತಿಲ್ಲ. ಆದರೆ, ಸಂಸ್ಥೆ ಈ ಹಿಂದೆ ನಡೆಸಿದ ವಹಿವಾಟಿನ ವೇಳೆ ಎಫ್ಡಿಐ ನಿಯಮಾವಳಿ ಉಲ್ಲಂಘಿಸಿದ ಆರೋಪದ ಬಗೆಗಿನ ಈ ಹಿಂದಿನ ತನಿಖೆ ಮುಂದುವರೆಸಿರುವುದಾಗಿ ಸ್ಪಷ್ಟಪಡಿಸಿದೆ.

ಕ್ಟ್ರಾನಿಕ್ ಉಪಕರಣಗಳ ಮಾರಾಟ ಕೇಂದ್ರಗಳಿಗೆ ಭಾರಿ ನಷ್ಟವಾಗುತ್ತಿದೆ.

‘ಆನ್ಲೈನ್ ವಹಿವಾಟು ಕಂಪೆನಿಗಳು ಸಾಂಪ್ರದಾಯಿಕ ಮಾರುಕಟ್ಟೆಯನ್ನೂ ಆಪೋಷನ ತೆಗೆದುಕೊಳ್ಳುವ ಭಯವನ್ನೂ ಹುಟ್ಟುಹಾಕುತ್ತಿವೆ. ಅತ್ಯಂತ ವೇಗವಾಗಿ ಈ ಮಾರುಕಟ್ಟೆ ವಿಸ್ತರಿಸುತ್ತಾ ಹೋಗುತ್ತಿದೆ. ಕೇವಲ ಎರಡು ಮೂರು ವರ್ಷಗಳಲ್ಲಿ ಸಾಂಪ್ರದಾಯಿಕ ಮಾರುಕಟ್ಟೆಯ ಶೇ 10ರಷ್ಟು ಪಾಲನ್ನು ಆನ್ಲೈನ್ ಮಾರಾಟ ಕ್ಷೇತ್ರ ಆವರಿಸಿಕೊಂಡಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದು ಎಂ.ಜಿ ರಸ್ತೆ ಸೋನಿ ಮಳಿಗೆ ಮ್ಯಾನೇಜರ್ ಸಾಜಿದ್.

ಅಂಗಡಿಗೆ ಬೀಗ, ಸಿಬ್ಬಂದಿ ಮನೆಗೆ
ಚಿಲ್ಲರೆ ಮಾರಾಟದಲ್ಲಿ ಹೆಸರು ಮಾಡಿರುವ ರಾಜ್ಯದ ಮತ್ತೊಂದು ಹೆಸರಾಂತ ಮೊಬೈಲ್ ಮಳಿಗೆಯೊಂದು ಮಲ್ಲೇಶ್ವರದಲ್ಲಿದ್ದ ತನ್ನ ಅಂಗಡಿಯೊಂದನ್ನು ಮುಚ್ಚಿದ್ದು, ಕೆಲಸಗಾರರನ್ನು ಮನೆಗೆ ಕಳುಹಿಸಿದೆ. ಇನ್ನೂ ಕೆಲ ಮಾರಾಟ ಕೇಂದ್ರಗಳನ್ನು ಮುಚ್ಚಲು ಸಿದ್ಧತೆ ನಡೆಸಿರುವುದು ತಿಳಿದುಬಂದಿದೆ.

‘₨18 ಸಾವಿರ ಮೌಲ್ಯದ ಮೊಬೈಲ್ ಫೋನನ್ನು ₨6 ಸಾವಿರಕ್ಕೆ ಆನ್ಲೈನ್ನಲ್ಲಿ ಮಾರಾಟ ಮಾಡಿದರೆ ನಮ್ಮ ಮಳಿಗೆಗೆ ಯಾರು ಬರುತ್ತಾರೆ ಹೇಳಿ? ಆದರೆ, ಮರುದಿನವೇ ಅದೇ ಮೊಬೈಲ್ ಫೋನ್ ಬೆಲೆ ಆ ಆನ್ಲೈನ್ ಕಂಪೆನಿಯಲ್ಲಿಯೇ ₨18ಸಾವಿರಕ್ಕೆ ಏರಿತ್ತು.

ಸಂಕಟ ತಂದ ‘ಬಿಗ್ ಬಿಲಿಯನ್ ಡೇ’

ಹಬ್ಬದ ಅಂಗವಾಗಿ ಆನ್ಲೈನ್ ಮಾರಾಟ ತಾಣಗಳು ಭಾರಿ ವಿನಾಯ್ತಿ ದರದಲ್ಲಿ ಸರಕುಗಳನ್ನು ಮಾರಾಟ ಮಾಡುತ್ತಿರುವುದು ತಮ್ಮ ವಹಿವಾಟಿನ ಮೇಲೆ ಭಾರಿ ಪರಿಣಾಮ ಬೀರಿದೆ ಎಂಬುದು ಸಾಂಪ್ರದಾಯಿಕ ಮಾರಾಟಗಾರರ ಕಳವಳ.
‘ಬಿಗ್ ಬಿಲಿಯನ್ ಡೇ’ ಎಂಬ ಹೆಸರಿನಲ್ಲಿ ಆನ್ಲೈನ್ ಕಂಪೆನಿ ಫ್ಲಿಪ್ಕಾರ್ಟ್, ಇನ್ನೊಂದೆಡೆ ಸ್ನ್ಯಾಪ್ಡೀಲ್ ಸೋಮವಾರ (ಅ. 6) ಒಂದೇ ದಿನ ₨1,200 ಕೋಟಿಗೂ ಅಧಿಕ ಮೌಲ್ಯದ ವಹಿವಾಟು ನಡೆಸಿವೆ.
10 ಗಂಟೆಗಳ ಅವಧಿಯಲ್ಲಿ 15 ಲಕ್ಷ ಮಂದಿ ₨600 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳನ್ನು ಖರೀದಿಸಿದ್ದಾರೆ ಎಂದು ಫ್ಲಿಪ್ಕಾರ್ಟ್ ಹೇಳಿಕೊಂಡಿತ್ತು.
ಸ್ನ್ಯಾಪ್ಡೀಲ್ ಸಹ ತಾನು ಪ್ರತಿ ನಿಮಿಷಕ್ಕೆ ₨1 ಕೋಟಿಯಂತೆ (ಒಟ್ಟು ಅಂದಾಜು ₨600 ಕೋಟಿ) ಮೌಲ್ಯದ ವಸ್ತುಗಳನ್ನು ಮಾರಾಟ ಮಾಡಿದ್ದಾಗಿ ಹೇಳಿತ್ತು. ಒಂದೇ ದಿನದಲ್ಲಿ ಲಕ್ಷಾಂತರ ವಸ್ತುಗಳು ಮಾರಾಟವಾಗಿವೆ.
ದೀಪಾವಳಿ ಹಬ್ಬದ ಅಂಗವಾಗಿ ಮೈಂತ್ರಾ ಡಾಟ್ ಕಾಮ್ ಕೂಡ ಶೇ 50ರಷ್ಟು ರಿಯಾಯ್ತಿ ದರದಲ್ಲಿ ಉಡುಪು ಹಾಗೂ ಪಾದರಕ್ಷೆಗಳ ಮಾರಾಟಕ್ಕೆ ಮುಂದಾಗಿದೆ. ಗ್ರಾಹಕರು ತಾವು ಖರೀದಿಸಿದ ವಸ್ತುಗಳ ಬಗ್ಗೆ ತೃಪ್ತರಾಗದಿದ್ದರೆ 30 ದಿನಗಳಲ್ಲಿ ಬದಲಾಯಿಸಿ ಕೊಡಲಾಗುವುದು ಎಂದೂ ಸಂಸ್ಥೆ ಹೇಳಿಕೊಂಡಿದೆ. ಅಮೆಜಾನ್ ಕೂಡ ರಿಯಾಯ್ತಿ ಮಾರಾಟ ಮುಂದುವರಿಸಿದೆ.

ಇ– ಕಾಮರ್ಸ್ ಕಂಪೆನಿಗಳು ಮಾರುಕಟ್ಟೆ ನಿಯಮಗಳನ್ನು ಪೂರ್ಣ ಉಲ್ಲಂಘಿಸುತ್ತಿವೆ’ ಎಂದು ಆ ಮಳಿಗೆಯ ಮ್ಯಾನೇಜರ್ ಅಲವತ್ತುಕೊಂಡರು.

‘ವಿದ್ಯಾರ್ಥಿಗಳೇ ನಮ್ಮ ಪ್ರಮುಖ ಗ್ರಾಹಕರು. ಆದರೆ, ಅವರೆಲ್ಲಾ ಈಗ ‘ಇ–ಕಾಮರ್ಸ್’ ಕಂಪೆನಿಗಳ ಮೂಲಕ ಮೊಬೈಲ್ಗಳನ್ನು ಖರೀದಿ ಮಾಡುತ್ತಿದ್ದಾರೆ. ರಿಯಾಯ್ತಿ ದರದಲ್ಲಿ ಮಾರಾಟ ಮಾಡಿದರೂ ಖರೀದಿಸಲು ಮುಂದಾಗುತ್ತಿಲ್ಲ. ನಮ್ಮ ಒಂದೇ ಮಾರಾಟ ಮಳಿಗೆಯಲ್ಲಿ ದಿನಕ್ಕೆ ಕನಿಷ್ಠ 10–15 ಮೊಬೈಲ್ಗಳು ಮಾರಾಟವಾಗುತ್ತಿದ್ದವು. ಈಗ ಆ ಸಂಖ್ಯೆ 4–6ಕ್ಕೆ ಬಂದು ನಿಂತಿದೆ’
ಎನ್ನುತ್ತಾರೆ ಯೂನಿವರ್ಸೆಲ್ ಮಾರಾಟ ಮಳಿಗೆ ಸಿಬ್ಬಂದಿ.

ಸರ್ಕಾರಕ್ಕೆ ವರ್ತಕರ ಪತ್ರ
‘ಇ–ಕಾಮರ್ಸ್’ ಕಂಪೆನಿಗಳು ಕಾನೂನುಬಾಹಿರ ವಹಿವಾಟಿನಲ್ಲಿ ತೊಡಗಿವೆ ಎಂದು ಆರೋಪಿಸಿ ಚಿಲ್ಲರೆ ಮಾರಾಟಗಾರರು ಇತ್ತೀಚೆಗೆ ರಾಜ್ಯ ಸರ್ಕಾರಕ್ಕೆ ಪತ್ರವನ್ನೂ ಬರೆದಿದ್ದಾರೆ.

ಅಖಿಲ ಭಾರತ ವರ್ತಕರ ಸಂಘಟನೆಗಳ ಒಕ್ಕೂಟ (ಸಿಎಐಟಿ) ಕೂಡ ಅಸಹಜ ಸ್ವರೂಪದ ‘ಇ–ಕಾಮರ್ಸ್’ ವಹಿವಾಟು ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆದಿದೆ. ತಕ್ಷಣ ಮಧ್ಯಪ್ರವೇಶಿಸಿ ಸಾಂಪ್ರದಾಯಿಕ ವರ್ತಕ ಸಮೂಹದ ಹಿತ ರಕ್ಷಿಸಬೇಕು ಎಂದೂ ಮನವಿ ಮಾಡಿದೆ.

ಕಾನೂನುಬಾಹಿರ ವಹಿವಾಟಿನಲ್ಲಿ ತೊಡಗಿರುವ ಆನ್ಲೈನ್ ಕಂಪೆನಿಗಳ

ಕುಸಿದ ಗ್ರಾಹಕರ ಸಂಖ್ಯೆ

ಗಾಂಧಿ ಬಜಾರ್ನಲ್ಲಿ ಸದಾ ತುಂಬಿ ತುಳುಕುತ್ತಿದ್ದ ಮೊಬೈಲ್ ಮಳಿಗೆಯೊಂದು ಹಬ್ಬದ ಈ ಸಂದರ್ಭದಲ್ಲೂ ಖಾಲಿ ಹೊಡೆಯು-ತ್ತಿದೆ. ಗಿರಿಯಾಸ್, ಪೈ ಇಂಟರ್ನ್ಯಾಷನಲ್, ವಿವೇಕ್ಸ್, ಆದೀಶ್ವರ್, ಯೂನಿವರ್ಸೆಲ್, ಪೂರ್ವಿಕಾ, ಕ್ರೋಮಾ, ರಿಲಯನ್ಸ್ ಡಿಜಿಟಲ್, ಮೊಬೈಲ್ ಸ್ಟೋರ್, ಸ್ಪೈಸ್ ಮಳಿಗೆಗಳು ನಗರದ ವಿವಿಧೆಡೆ ಇವೆ. ಆದರೆ, 6 ತಿಂಗಳಿನಿಂದ ಈ ಮಳಿಗೆಗಳಲ್ಲಿ ಖರೀದಿಸುವ ಗ್ರಾಹಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಅಷ್ಟೇ ಅಲ್ಲ; ಮಾಲ್ಗಳಲ್ಲಿಯೂ ಮಾರಾಟ ಕುಸಿತವಾಗಿದೆ. ಪ್ರಮುಖವಾಗಿ ಎಲೆಕ್ಟ್ರಾನಿಕ್ ಉಪಕರಣಗಳ ಮಾರಾಟದ ಮೇಲೆ ಹೊಡೆತ ಬಿದ್ದಿದೆ.

ಮೇಲೆ ಸರ್ಕಾರವು ನಿಯಂತ್ರಣ ಹೇರದಿದ್ದರೆ ಸುಪ್ರೀಂಕೋರ್ಟ್ ಹಾಗೂ ಭಾರತೀಯ ಸ್ಪರ್ಧಾತ್ಮಕ ಆಯೋಗದ (ಸಿಸಿಐ) ಮೊರೆ ಹೋಗುವುದಾಗಿಯೂ ಸಿಎಐಟಿ ತಿಳಿಸಿದೆ.

ಮೊದಲಿಗೆ ಮೊಬೈಲ್ ಫೋನ್, ಟ್ಯಾಬ್ಲೆಟ್, ಲ್ಯಾಪ್ಟಾಪ್ ಎಂದು ಎಲೆಕ್ಟ್ರಾನಿಕ್ ಉಪಕರಣಗಳ ವಿಭಾಗಕ್ಕಷ್ಟೇ ಸೀಮಿತವಾಗಿದ್ದ ಆನ್ಲೈನ್ ಮಾರಾಟ ವಹಿವಾಟು ಈಗ ಸಿದ್ಧ ಉಡುಪು, ಪಾದರಕ್ಷೆ, ವ್ಯಾನಿಟಿ ಬ್ಯಾಗ್ ಎಂದು ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಪುಸ್ತಕ, ದಿನಸಿ ಸಾಮಗ್ರಿಗಳಿಗೂ ಕೈಹಾಕಿದೆ.

‘ಮೊಬೈಲ್ ಮಾತ್ರವಲ್ಲ; ಅದರ ರಕ್ಷಣೆಗೆ ಬಳಸುವ ಕವರ್, ಹೆಡ್ಸೆಟ್, ಬ್ಯಾಟರಿ, ಎಂಪಿ3 ಪ್ಲೇಯರ್, ಪೆನ್ಡ್ರೈವ್ಗಳನ್ನೂ ಆನ್ಲೈನ್ನಲ್ಲಿ ಖರೀದಿಸುತ್ತಿದ್ದಾರೆ. ಆನ್ಲೈನ್ನಲ್ಲಿ ಈ ಉಪಕರಣಗಳಿಗೆ ಹೆಚ್ಚು ವಿನಾಯ್ತಿ ಇರುವುದಿಲ್ಲ. ಆದರೂ ಆನ್ಲೈನ್ ಖರೀದಿ ಒಂಥರಾ ಫ್ಯಾಷನ್ ಆಗಿಬಿಟ್ಟಿದೆ’ ಎನ್ನುತ್ತಾರೆ ಯೂನಿವರ್ಸೆಲ್ ಮೊಬೈಲ್ ಮಳಿಗೆಯೊಂದರ ಸಿಬ್ಬಂದಿ.
(ಮುಂದುವರೆಯುವುದು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.