ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಂತಮೂರ್ತಿ ಮೇಲ್ಮನವಿ ವಿಚಾರಣೆಗೆ ‘ಸುಪ್ರೀಂ’ ಸಮ್ಮತಿ

ಬಿಎಂಐಸಿ ಯೋಜನೆ
Last Updated 30 ಜೂನ್ 2014, 20:20 IST
ಅಕ್ಷರ ಗಾತ್ರ

ನವದೆಹಲಿ: ಬಹುಕೋಟಿ ಮೊತ್ತದ ಬೆಂಗಳೂರು–ಮೈಸೂರು ಇನ್‌ಫ್ರಾ­ಸ್ಟ್ರಕ್ಚರ್‌ ಕಾರಿಡಾರ್‌ ಯೋಜ­ನೆಗೆ (ಬಿಎಂ­ಐಸಿಪಿ) ಸಂಬಂಧಿಸಿದಂತೆ ಹಿರಿಯ ಸಾಹಿತಿ ಯು.ಆರ್‌.ಅನಂತ­ಮೂರ್ತಿ ಅವರು ಸಲ್ಲಿ­ಸಿರುವ ವಿಶೇಷ ಮೇಲ್ಮನವಿ ಅರ್ಜಿಯ ವಿಚಾರ­ಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್‌ ಸೋಮವಾರ ಸಮ್ಮತಿ ಸೂಚಿಸಿದೆ.

ಭೂಸ್ವಾಧೀನ ಪರಿಹಾರ ನಿಗದಿ­ಪಡಿ­ಸಲು ರಾಜ್ಯ ಸರ್ಕಾರಕ್ಕೆ ಅವ­ಕಾಶ ಕಲ್ಪಿ­ಸಿದ ಕರ್ನಾಟಕ ಹೈ­ಕೋರ್ಟ್‌ನ 2013ರ ತೀರ್ಪನ್ನು ಪ್ರಶ್ನಿಸಿ ಅನಂತ­ಮೂರ್ತಿ ಈ  ಅರ್ಜಿ ಸಲ್ಲಿಸಿದ್ದರು. ಮುಖ್ಯ ನ್ಯಾಯ­ಮೂರ್ತಿ ಆರ್‌.­ಎಂ. ಲೋಧಾ ನೇತೃತ್ವದ ಮೂವರು ಸದ­ಸ್ಯರ ನ್ಯಾಯ­ಪೀಠ ಈ ಅರ್ಜಿ ವಿಚಾ­ರಣೆ ನಡೆ­ಸಲು ಒಪ್ಪಿಗೆ ನೀಡಿದೆ.

ಈ ಯೋಜನೆ­ಗಾಗಿ ರೈತರ ಜಮೀ­­ನು­­­­ಗಳನ್ನು ಸ್ವಾಧೀನ ಮಾಡಿ­ಕೊ­ಳ್ಳ­­ಲಾಗಿದೆ. ಆದರೆ,  ರೈತ­ರಿಗೆ ಅತ್ಯಲ್ಪ ಮೊತ್ತದ ಪರಿಹಾರ ನೀಡಿ­ರುವ ಬಿಎಂ­ಐಸಿಪಿ, ಪರಿಹಾರ ನೀಡಿದ ಮೊತ್ತ­ಕ್ಕಿಂತ 30 ಪಟ್ಟು ಹೆಚ್ಚಿನ ಬೆಲೆಗೆ ಅವು­ಗಳನ್ನು ಮಾರಿ­ ಲಾಭ ಮಾಡಿ­ಕೊಂ­­ಡಿದೆ. ಆದರೂ ರಾಜ್ಯ ಸರ್ಕಾರ ಹೈ­ಕೋರ್ಟ್‌ನ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿಲ್ಲ ಎಂದು ಅನಂತ­ಮೂರ್ತಿ ಪರ ವಕೀಲ ಪ್ರಶಾಂತ್‌ ಭೂಷಣ್‌ ನ್ಯಾಯ­ಪೀಠದ ಗಮನಕ್ಕೆ ತಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT