ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗುಂಬೆ ಜೀವ ವೈವಿಧ್ಯ ತಾಣದಲ್ಲಿ ಕಲ್ಲು ಗಣಿಗಾರಿಕೆ

ಅಪಾಯದ ಅಂಚಿನಲ್ಲಿ ಪಶ್ಚಿಮ ಘಟ್ಟ ಸಾಲು
Last Updated 4 ಡಿಸೆಂಬರ್ 2014, 6:48 IST
ಅಕ್ಷರ ಗಾತ್ರ

ತೀರ್ಥಹಳ್ಳಿ:  ವಿಶ್ವ ಪಾರಂಪರಿಕ ತಾಣ ಎಂದು ಯುನೆಸ್ಕೊ ಘೋಷಿಸಿರುವ ಪಶ್ಚಿಮ ಘಟ್ಟ ಸಾಲಿನ ಆಗುಂಬೆ ಸಮೀಪ ಬಿದರಗೋಡು, ಬಾಳೇಹಳ್ಳಿ ಗಾ್ರಮದ ಅತ್ಯಂತ ಸೂಕ್ಷ್ಮ ಅರಣ್ಯ ಪ್ರದೇಶದಲ್ಲಿ ಜಲ್ಲಿ ಕ್ರಷರ್‌ ಘಟಕ ಆರಂಭಕ್ಕೆ ಈಗ ಅನುಮತಿ ದೊರೆಕಿದೆ.

ಅರಣ್ಯ ಪ್ರದೇಶದ ಸಂರಕ್ಷಣೆ ಕುರಿತು ಡಾ.ಕಸ್ತೂರಿ ರಂಗನ್‌ ವರದಿ ಜಾರಿ ಕಠಿಣ ನಿಯಮಗಳ ಜಾರಿಯ ಸಂದರ್ಭದಲ್ಲಿ ಜೀವ ವೈವಿಧ್ಯ ಬಿದರಗೋಡು, ಬಾಳೇಹಳ್ಳಿ ಗ್ರಾಮದ 5 ಎಕರೆ ದಟ್ಟ ಅರಣ್ಯ ಪ್ರದೇಶದಲ್ಲಿ ಕಲ್ಲು ಕ್ರಷರ್‌ ಘಟಕ ಆರಂಭಿಸಲು ಜಿಲ್ಲಾಡಳಿತ ಗುತ್ತಿಗೆ ನೀಡಿರುವುದರಿಂದ ಜೀವ ವೈವಿಧ್ಯ ತಾಣ ಅಪಾಯಕ್ಕೆ ಸಿಲುಕುವಂತಾಗಿದೆ.

ಜಲ್ಲಿ ಕ್ರಷರ್‌ ಘಟಕಗಳ 2011ರ ಕಾಯ್ದೆ 6(2)ಎ ಷರತ್ತಿನ ನಿಯಮ, ಇತರ ಅನೇಕ ಅಂಶಗಳನ್ನು ವಿನಾಯ್ತಿಗೊಳಿಸಿ ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ವಿಪುಲ್‌ ಬನ್ಸಲ್‌ ಮಂಜೂರಾತಿ ನೀಡಿರುವುದು ಸಾರ್ವಜನಿಕರ ಅನು ಮಾನಕ್ಕೆ ಕಾರಣವಾಗಿದೆ. ಆಗುಂಬೆ ಹೋಬಳಿ ಬಿದರಗೋಡು ಗ್ರಾಮದ ಸರ್ವೆ ನಂ.73, ಬಾಳೇಹಳ್ಳಿ ಗ್ರಾಮದ ಸರ್ವೆ ನಂ.9 ರಲ್ಲಿ ಒಟ್ಟು 5 ಎಕರೆ ಪ್ರದೇಶವನ್ನು ಕಲ್ಲು ಪುಡಿ ಘಟಕ ಕಾಯ್ದೆ 3(1), 4(1)ರ ಅನ್ವಯ ಷರತ್ತು ವಿಧಿಸಿ 2013 ಅಕ್ಟೋಬರ್‌ 24 ರಂದು ಎಚ್‌.ಜಿ.ಸುಧಾಕರ್‌ ಮಾಲೀಕತ್ವದ ಶ್ರೀರಾಮ ಜೆಲ್ಲಿ ಕ್ರಷರ್‌, ಎಸ್‌.ಕೆ.ಧರ್ಮೇಶ್‌ ಮಾಲೀಕತ್ವದ ಗುತ್ತಿ ರೇಣುಕಾಂಬ ಹೆಸರಿನ ಜೆಲ್ಲಿ ಕ್ರಷರ್‌ ಘಟಕಕ್ಕೆ 3 ವರ್ಷದ ಅವಧಿಯ ಅನುಮತಿ ಸಿಕ್ಕಿದೆ.

ಎಚ್‌.ಜಿ.ಸುಧಾಕರ್‌ ತೀರ್ಥಹಳ್ಳಿ ತಾಲ್ಲೂಕು ಪಂಚಾಯ್ತಿ ಸದಸ್ಯರಾಗಿದ್ದು, ಎಸ್‌.ಕೆ. ಧರ್ಮೇಶ್‌ ತಾಲ್ಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿದ್ದಾರೆ. ಈ ಪ್ರದೇಶದಲ್ಲಿ ಈ ಇಬ್ಬರ ಮಾಲೀಕತ್ವದಲ್ಲಿ ಜಲ್ಲಿ ಕ್ರಷರ್‌ ಘಟಕ ಆರಂಭಕ್ಕೆ ಅನುಮತಿ ದೊರೆಕಿರುವುದು ಸಾರ್ವಜನಿಕ ವಲಯದ ಹುಬ್ಬೇರಿಸವಂತೆ ಮಾಡಿದೆ.

ಬಾಳೇಹಳ್ಳಿ ಗ್ರಾಮ ಸರ್ವೆ ನಂ.9 ರಲ್ಲಿ 2 ಎಕರೆ, ಬಿದರಗೋಡು ಗ್ರಾಮದ ಸರ್ವೆ ನಂ.73ರಲ್ಲಿ 3 ಎಕರೆ ಪ್ರದೇಶವನ್ನು ಹೊಂದಿಸಿಕೊಂಡು ಜಲ್ಲಿ ಕ್ರಷರ್‌ ವಲಯ ಎಂದು ಗುರುತಿಸಲಾಗಿದೆ. ಈ ಪ್ರದೇಶದ ವ್ಯಾಪ್ತಿ ಯಲ್ಲಿಯೇ 2009ರಲ್ಲಿ ಕೆ.ಎಸ್‌.ರತ್ನಾಕರ ಹೆಸರಿಗೆ 1 ಎಕರೆ 30 ಗುಂಟೆ, ಆನಂದ ಶೆಟ್ಟಿ ಹೆಸರಿಗೆ 1 ಎಕರೆ ಕಲ್ಲು ಗಣಿಗಾರಿಕೆ ನಡೆಸಲು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮತಿ ನೀಡಿದೆ. ಈ ಕಲ್ಲುಗಣಿಗಾರಿಕೆ ಗುತ್ತಿಗೆ ಅವಧಿ 2014 ನವೆಂಬರ್‌ 1 ರಂದು ಮುಕ್ತಾಯವಾಗಿದೆ. ಈ ಪ್ರದೇಶ ಶೃಂಗೇರಿ ತಾಲ್ಲೂಕಿನ ಅಸನಬಾಳು ಮೀಸಲು ಅರಣ್ಯ ಪ್ರದೇಶದ ಸಮೀಪದಲ್ಲಿದ್ದರೂ ಜಲ್ಲಿ ಕ್ರಷರ್‌ ಘಟಕ ಆರಂಭಕ್ಕೆ ಅನುಮತಿ ದೊರೆತಿರುವುದು ಸಾರ್ವಜನಿಕರನ್ನು ಅಚ್ಚರಿಗೆ ಈಡು ಮಾಡಿದೆ.

ಜಲ್ಲಿ ಕ್ರಷರ್‌ ಘಟಕ, ಕಲ್ಲು ಗಣಿಗಾರಿಕೆಯಿಂದ  ಸ್ಥಳೀಯ ಸಾಗುವಳಿ, ಅರಣ್ಯ ಪ್ರದೇಶಕ್ಕೆ ಹಾನಿಯಾಗುತ್ತಿದೆ ಎಂದು ಬಿದರಗೋಡು ಗ್ರಾಮದ ರೈತರು ನೀಡಿದ ದೂರನ್ನು ನಿರ್ಲಕ್ಷಿಸಿ ಅನುಮತಿ ನೀಡಿರುವುದು ಬೆಳಕಿಗೆ ಬಂದಿದೆ.

ಕಸ್ತೂರಿರಂಗನ್‌ ವರದಿಯಲ್ಲಿ ಜೀವ ವೈವಿಧ್ಯತೆಯ ಬಾಳೇಹಳ್ಳಿ, ಬಿದರಗೋಡು ಗ್ರಾಮ ಸೇರ್ಪಡೆಗೊಂಡಿಲ್ಲ. ಈ ಗ್ರಾಮಗಳು ಅತ್ಯಂತ ಪರಿಸರ ಸೂಕ್ಷ್ಮ ಪ್ರದೇಶವಾಗಿದ್ದರೂ ಕೂಡ ವರದಿ ಸೇರ್ಪಡೆಯಲ್ಲಿ ಕೈತಪ್ಪಿಸಲಾಗಿದೆ ಎಂಬ ಅಭಿಪ್ರಾಯ ಸಾರ್ವಜನಿಕರದ್ದಾಗಿದೆ.
ಅರಣ್ಯ, ಜಲ್ಲಿ ಕ್ರಷರ್‌ ಕಾಯ್ದೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ  ನಿಯಮ ಉಲ್ಲಂಘಿಸಿ ಜೆಲ್ಲಿ ಕ್ರಷರ್‌ ಘಟಕ,  ಕಲ್ಲು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ.

'ಅರಣ್ಯ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ಪ್ರದೇಶ ಸೇರಿಲ್ಲ. 5 ಎಕರೆ ಜಲ್ಲಿ ಕ್ರಷರ್‌ ಘಟಕ ಆರಂಭಕ್ಕೆ ಅನುಮತಿ ದೊರಕಿದೆ. 2 ಎಕರೆ 30 ಗುಂಟೆ ಪ್ರದೇಶದ ಕಲ್ಲು ಗಣಿಗಾರಿಕೆ ಅನುಮತಿ ಅವಧಿ ಪೂರ್ಣಗೊಂಡಿದ್ದು, ನವೀಕರಿಸುವಂತೆ ಅರ್ಜಿ ಸಲ್ಲಿಕೆಯಾಗಿದೆ.
ಈ ಕುರಿತು ಪರಿಶೀಲನೆ ನಡೆಸಲಾಗುತ್ತದೆ‘ ಎಂದು ತೀರ್ಥಹಳ್ಳಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೇಶವ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT