ಬೆಂಗಳೂರು: ನಗರದ ಇತಿಹಾಸದ ಮರುಶೋಧಕ್ಕೆ ಹೊರಟರೆ ಅದರ ಬೇರು ಗಳು ನಮ್ಮನ್ನು ಗಂಗರ ಆಧಿ ಪತ್ಯದ ಕಾಲಕ್ಕೆ

ಕರೆದುಕೊಂಡು ಹೋಗುತ್ತವೆ. ಚೋಳ, ಹೊಯ್ಸಳ, ವಿಜಯನಗರ, ಮರಾಠ ಮತ್ತು ಮೈಸೂರು ಅರಸರ ಆಡಳಿತವನ್ನೂ ಈ ಊರು ಕಂಡಿದೆ. ಮೊಘಲ್ ದೊರೆಗಳು ಸಹ ಬೆಂಗಳೂರು ಆಡಳಿತದಲ್ಲಿ ಕೈಯಾಡಿಸಿದ್ದಾರೆ.

ವಿಜಯನಗರದ ಪಾಳೆಗಾರನಾಗಿದ್ದ ಕೆಂಪೇಗೌಡ ೧೫೩೭ರಲ್ಲಿ ಊರಿನ ಸುತ್ತ ಮಣ್ಣಿನ ಕೋಟೆ ಕಟ್ಟಿಸಿದ್ದೇ ಬೆಂಗಳೂರಿನ ನವ ಮನ್ವಂತರಕ್ಕೆ ನಾಂದಿ ಎನ್ನುವುದು ಇತಿಹಾಸಕಾರರ ಬಣ್ಣನೆ. ಚಿಕ್ಕಪೇಟೆ ಮತ್ತು ದೊಡ್ಡಪೇಟೆಗಳನ್ನು ಒಳಗೊಂಡ ಆ ಕೋಟೆ ಪ್ರದೇಶವೇ ಮೂಲ ಬೆಂಗಳೂರು ನಗರವಾಗಿದೆ.

ನಾಲ್ಕನೇ ಆಂಗ್ಲೋ-–ಮೈಸೂರು ಯುದ್ಧದಲ್ಲಿ (೧೭೯೯) ಟಿಪ್ಪು ಸುಲ್ತಾನ್ ಸೋಲುಂಡ ಬಳಿಕ ಬ್ರಿಟಿಷರ ದಂಡು ಅತ್ಯುತ್ತಮ ಹವಾಗುಣ ಹೊಂದಿದ ಈ ನಗರಕ್ಕೆ ದಾಂಗುಡಿ ಇಟ್ಟಿತು. ಅವರ ಬಿಡಾರಕ್ಕಾಗಿ 1809ರಲ್ಲಿ ಪೇಟೆಗೆ ಹತ್ತಿರದಲ್ಲಿ ರೂಪು ತಳೆಯಿತು ಕಂಟೋನ್ಮೆಂಟ್ (ದಂಡು ಪ್ರದೇಶ). ಹೌದು, ಬೆಂಗಳೂರು ಪಕ್ಕದಲ್ಲೇ ಮತ್ತೊಂದು ಬೆಂಗಳೂರಿನ ಉದಯ ವಾಗಿತ್ತು.

ಥೇಟ್ ಇಂಗ್ಲೆಂಡಿನ ಕಾಲೊನಿಗಳಂತೆ ಕಂಗೊಳಿಸಿದ ಕಂಟೋನ್ಮೆಂಟ್ ‘ಬ್ರಿಟಿಷರ ಭಾರತೀಯ ಬಿಡಾರ’ ಎಂಬ ಹಿರಿಮೆಗೆ ಪಾತ್ರವಾಯಿತು. ಹೀಗಾಗಿ ದೇಶದ ವಿವಿಧ ಭಾಗಗಳಲ್ಲಿ ನೆಲೆಸಿದ್ದ ಬ್ರಿಟಿಷರು ‘ದಂಡು ಪ್ರದೇಶ’ಕ್ಕೆ ಮುತ್ತಿಗೆ ಹಾಕಿದರು. ಯುರೋಪಿಯನ್ನರ ದಂಡಿನ ಜತೆಗೆ ಅಲ್ಲಿನ ಪ್ರಜೆಗಳು ಸೇರಿ ಕಂಟೋನ್ಮೆಂಟ್ ಬೆಳೆಯಿತು. 13 ಹಳ್ಳಿಗಳು ಅದರಲ್ಲಿ ಕರಗಿಹೋ ದವು.

ಒಂದೂಕಾಲು ಶತಮಾನದ ಹಿಂದೆ, ಅಂದರೆ ೧೮೯೧ರಲ್ಲಿ, ಕಂಟೋನ್ಮೆಂಟ್ ೧೩.೫ ಚದರ ಮೈಲು ವಿಸ್ತೀರ್ಣವನ್ನೂ ೧,೦೦,೦೮೧ ಜನಸಂಖ್ಯೆಯನ್ನೂ ಹೊಂದಿತ್ತು ಎಂಬ ವಿವರ ಚರಿತ್ರೆಕಾರ ಎಂ.ಎಫ್. ಹಸನ್ ಅವರ ‘ಬೆಂಗಳೂರು ಥ್ರೂ ದಿ ಸೆಂಚುರೀಸ್’ ಕೃತಿಯಲ್ಲಿದೆ.

ಆಗ ಪೇಟೆ ಪ್ರದೇಶದಲ್ಲಿ ೮೦,೨೮೫ ಜನ ವಾಸವಾಗಿದ್ದರು. ಎರಡೂ ಪ್ರದೇಶ ಗಳನ್ನು ಬೇರ್ಪಡಿಸಲು ಮಧ್ಯೆ ಮರದ ಮೇಳೆಗಳು (ಕಬ್ಬನ್ ಪಾರ್ಕ್) ಇದ್ದವು. ಬೆಂಗಳೂರಿನ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹೋಗಲು ಸುಂಕದ ಕಟ್ಟೆ ಹೊಂದಿದ ದ್ವಾರಗ ಳಿದ್ದವು. ಅವುಗಳ ಮೂಲಕವೇ ಜನ ಓಡಾಡಬೇಕಿತ್ತು ಎನ್ನುವ ಮಾಹಿತಿ ಆ ಕೃತಿಯಲ್ಲಿ ಸಿಗುತ್ತದೆ.

ಪೇಟೆ ಪ್ರದೇಶ ೧೮೯೮ರಲ್ಲಿ ಪ್ಲೇಗ್ನ ಭಯಾನಕ ದಾಳಿಗೆ ತುತ್ತಾಯಿತು. ಕನಿಷ್ಠ ೩,೫೦೦ ಜನ ಪ್ರಾಣ ಕಳೆದು ಕೊಂಡರು. ಸರಿಯಾದ ನೈರ್ಮಲ್ಯ ವ್ಯವಸ್ಥೆ ಇಲ್ಲದಿರುವುದೇ ಈ ದುರಂತಕ್ಕೆ ಕಾರಣವಾಗಿತ್ತು. ಶೌಚಾಲಯ ಮತ್ತು ಚರಂಡಿ ಸೇರಿದಂತೆ ನೈರ್ಮಲ್ಯ ವ್ಯವಸ್ಥೆಗೆ ಪೂರಕವಾದ ಕಟ್ಟಡ ನಿರ್ಮಾಣ ಮಾರ್ಗಸೂಚಿಯನ್ನು ಆಗಲೇ ಹೊರಡಿ ಸಲಾಯಿತು. ಸ್ವಚ್ಛತೆಯನ್ನು ಕಾಪಾ ಡಲು ಪೇಟೆ ಪ್ರದೇಶವನ್ನು ನಾಲ್ಕು ವಾರ್ಡ್ಗಳಾಗಿ ವಿಭಜಿಸಲಾಯಿತು.

ಕೋಟೆ ವಲಯವನ್ನು ದಾಟಿ ಉತ್ತರದಲ್ಲಿ ಶೇಷಾದ್ರಿಪುರ, ಮಲ್ಲೇಶ್ವರ ಮತ್ತು ದಕ್ಷಿಣದಲ್ಲಿ ಚಾಮರಾಜಪೇಟೆ, ಬಸವನಗುಡಿ ಬಡಾವಣೆಗಳು ಬೆಳೆದವು.

ಪೇಟೆ ಪ್ರದೇಶದಲ್ಲಿ ಕನ್ನಡಿಗರೇ ತುಂಬಿದ್ದರು. ಕಂಟೋನ್ಮೆಂಟ್ನಲ್ಲಿ ಬ್ರಿಟಿ ಷರಲ್ಲದೆ ಆಂಗ್ಲೋ-–ಇಂಡಿಯನ್ನರು, ತಮಿಳು ಕಾರ್ಮಿಕರು, ಮುಸ್ಲಿಂ ವ್ಯಾಪಾರಿಗಳು, ಆಂಧ್ರದ ಕೊಮಟರು, ಮರಾಠಿ ದರ್ಜಿಗಳು ನೆಲೆ ಪಡೆದಿದ್ದರು. ಮೈಸೂರು ಸಂಸ್ಥಾನದ ಸಂಪ್ರದಾ ಯದಂತೆ ಪೇಟೆ ಪ್ರದೇಶದಲ್ಲಿ ಪೇಟಾ ಧಾರಿಗಳು ಹೆಚ್ಚಾಗಿದ್ದರೆ, ಬಹುಸಂಸ್ಕೃತಿ ತಾಣವಾಗಿದ್ದ ಕಂಟೋನ್ಮೆಂಟ್ನಲ್ಲಿ ಸೈನಿಕರ ಸಮವಸ್ತ್ರಗಳು, ಥರಾವರಿ ಬಟ್ಟೆಗಳೇ ಕಾಣಸಿಗುತ್ತಿದ್ದವು!

ಶತಾಯುಷಿಯಾಗಿದ್ದ ಎ.ಎನ್. ಮೂರ್ತಿರಾಯರು ನಗರ ಪೇಟೆ ಮತ್ತು ಕಂಟೋನ್ಮೆಂಟ್ ಸಂಬಂಧವನ್ನು ಬಲು ಸೊಗಸಾಗಿ ಬಣ್ಣಿಸಿದ್ದರು. ಎರಡೂ ಭಾಗಗಳ ನಡುವೆ ಗೆಳೆತನ ಇಲ್ಲವೆ ಹಗೆತನ ಎರಡೂ ಇರಲಿಲ್ಲ. ಪೇಟೆ ಪ್ರದೇಶದ ಸಂಗತಿಗಳ ಕುರಿತು ಬ್ರಿಟಿಷರಿಗೆ ಅಷ್ಟಾಗಿ ಆಸಕ್ತಿ ಇರಲಿಲ್ಲ. ಆದರೆ, ತಮ್ಮ ಪ್ರದೇಶವನ್ನು ಬಲು ಸ್ವಚ್ಛ ಹಾಗೂ ಸುಂದರವಾಗಿ ಇಟ್ಟುಕೊಂ ಡಿದ್ದರು. ಕಂಟೋನ್ಮೆಂಟ್ ಬೀದಿಗಳು ಫಳ-–ಫಳ ಹೊಳೆಯುತ್ತಿದ್ದವು. ಅಗಲ ವಾದ ರಸ್ತೆಗಳ ಬದಿಯಲ್ಲಿ ಸಾಲು, ಸಾಲು ಮರಗಳು. ಸಂಪೂರ್ಣ ವಿದೇಶಿ ಪರಿಸರ ಅಲ್ಲಿ ಮನೆಮಾಡಿತ್ತು ಎಂದು ಅವರು ನೆನೆದಿದ್ದರು.

ನಗರ ಪೇಟೆ ಮತ್ತು ಕಂಟೋನ್ಮೆಂಟ್ ಪ್ರದೇಶಗಳ ಆಡಳಿತ ನಿರ್ವಹಣೆಗೆ ಆಗಿನ ಕಂಪೆನಿ ಸರ್ಕಾರ 1862ರಲ್ಲಿ ಮುನ್ಸಿಪಲ್ ಬೋರ್ಡ್ಗಳನ್ನು ಸ್ಥಾಪಿ ಸಿತು. ಎರಡೂ ಬೋರ್ಡ್ಗಳಿಗೆ ಒಬ್ಬರೇ ಅಧ್ಯಕ್ಷರು ಇದ್ದರು. ಅವರ ತಿಂಗಳ ಸಂಬಳ ರೂ 700 ಅನ್ನು ಎರಡೂ ಬೋರ್ಡ್ಗಳು ವಂತಿಗೆ ಹಾಕಿಕೊಡು ತ್ತಿದ್ದವು. 1862–63ರಲ್ಲಿ ನಗರ ಪೇಟೆ ಮತ್ತು ಕಂಟೋನ್ಮೆಂಟ್ ಮುನ್ಸಿಪಲ್ ಬೋರ್ಡ್ಗಳು ಕ್ರಮವಾಗಿ ರೂ 21,981 ಮತ್ತು ರೂ 37,509 ಕಂದಾಯ ಸಂಗ್ರಹಿಸಿದ್ದವು. 1881ರಲ್ಲಿ ಮುನ್ಸಿಪಲ್ ಬೋರ್ಡ್ಗಳು ನಗರ ಸಭೆಗಳ ರೂಪ ತಾಳಿದವು.

ತಲಾ 32 ಜನ ಸದಸ್ಯ ಬಲದ ಸಭೆಗಳು ಅವಾಗಿದ್ದವು. ಅವರಲ್ಲಿ 22 ಜನರನ್ನು ಚುನಾವಣೆ ಮೂಲಕ ಆಯ್ಕೆ ಮಾಡಿ ದರೆ, ಮಿಕ್ಕವರನ್ನು ನೇಮಕ ಮಾಡಲಾ ಗುತ್ತಿತ್ತು. ಆಗ ಅವರ ಸದಸ್ಯತ್ವ ಅವಧಿ ಮೂರು ವರ್ಷಗಳಾಗಿತ್ತು. ಆಗಲೂ ಹಿಂದೂ, ಮುಸ್ಲಿಂ, ಯುರೋ ಪಿಯನ್.. ಹೀಗೆ ಧರ್ಮ ಮತ್ತು ಸಮು ದಾಯವಾರು ಆದ್ಯತೆ ನೀಡಲಾ ಗು ತ್ತಿತ್ತು. ಆಸ್ತಿ ತೆರಿಗೆ ತುಂಬಿದ ವರಿಗಷ್ಟೇ ಮತದಾನ ಮಾಡಲು ಅವ ಕಾಶ ನೀಡಲಾಗಿತ್ತು. ೧೯೪೭ರಲ್ಲಿ ಸ್ವತಂತ್ರ ಸಿಕ್ಕಾಗ ಮೈಸೂರು ರಾಜ್ಯದ ಭಾಗವಾಗಿ ಉಳಿಯಿತು ಬೆಂಗಳೂರು.

ರಾಜ್ಯದ ರಾಜಧಾ ನಿಯಾಗಿ ಇದೇ ನಗರಿಗೆ ಪಟ್ಟವನ್ನೂ ಕಟ್ಟಲಾಯಿತು. ಒಂದುಗೂ ಡಿಸುವ ಹಲವು ಸರ್ಕಸ್ಗಳ ಬಳಿಕ ೧೯೪೯ರ ಡಿಸೆಂಬರ್ 8ರಂದು ಪೇಟೆ ಮತ್ತು ಕಂಟೋನ್ಮೆಂಟ್ಗಳು ಬೆಂಗ ಳೂರು ನಗರ ಪಾಲಿಕೆ ಆಡಳಿತದಲ್ಲಿ ಕೊನೆಗೂ ಒಂದಾದವು. ಅದಕ್ಕಾಗಿ ಬೆಂಗಳೂರು ನಗರ ಪಾಲಿಕೆ ಕಾಯ್ದೆ–1949 ಜಾರಿಗೆ ತರಲಾಯಿತು.

ನಗರ ಪಾಲಿಕೆಯಲ್ಲಿ ಆಡಳಿತದ ದೃಷ್ಟಿಯಿಂದ 50 ವಿಭಾಗಗಳನ್ನು ಸೃಜಿ ಸಲಾಯಿತು. ಮೇಯರ್ ಮತ್ತು ಉಪಮೇಯರ್ ಆಡಳಿತ ವ್ಯವಸ್ಥೆ ಸಹ ಇದೇ ಸಂದರ್ಭದಲ್ಲಿ ಜಾರಿಗೆ ಬಂತು. ಪಾಲಿಕೆ ಕೌನ್ಸಿಲ್ ಹಾಗೂ ಸ್ಥಾಯಿ ಸಮಿತಿ ಸದಸ್ಯರು ಮತ್ತು ಆಯುಕ್ತರು ನಗರದ ಆಗು–ಹೋಗುಗಳನ್ನು ನಿಭಾ ಯಿಸುವ ಜವಾಬ್ದಾರಿ ಹೊತ್ತರು. 64 ಕೌನ್ಸಿಲರ್ಗಳ ಸಾಮರ್ಥ್ಯದ ಪಾಲಿಕೆ ಯಲ್ಲಿ 50 ಜನ ಚುನಾವಣೆ ಮೂಲಕ ಆಯ್ಕೆ ಆಗುತ್ತಿದ್ದರು. ಉಳಿದ ಸ್ಥಾನ ಗಳಿಗೆ ನಗರ ವಿಷಯಗಳ ತಜ್ಞ ರನ್ನು ಸರ್ಕಾರವೇ ನೇಮಕ ಮಾಡು ತ್ತಿತ್ತು.

ಹೆಸರಿಗಷ್ಟೇ ಒಂದಾಗಿದ್ದ ಈ ಪ್ರದೇ ಶಗಳು ಹಗ್ಗದ ಹುರಿಯಂತೆ ಹಾಸು ಹೊಕ್ಕಾಗಲು ದಶಕಗಳೇ ಬೇಕಾ ದವು. ದಂಡು ಪ್ರದೇಶದಲ್ಲಿ ಇಂಗ್ಲಿಷ್ ಸೇರಿ ದಂತೆ ಹಲವು ಭಾಷೆಗಳು ಬಳಕೆಯಲ್ಲಿ ದ್ದವು. ಬಟ್ಟೆ ಮೇಲೆ ತಾತ್ಸರ ಎಂಬು ವಷ್ಟು ಇಲ್ಲಿನ ಯುರೋಪಿ ಯನ್ನರ ಮೈಮೇಲೆ ಅವುಗಳ ಬರ. ನಗರ ಪೇಟೆ ಯಲ್ಲಿ ತದ್ವಿರುದ್ಧ ವಾತಾ ವರಣ. ಕನ್ನಡವೇ ಹೆಚ್ಚಾಗಿ ಕೇಳಿ ಬರು ತ್ತಿತ್ತು.

ಬಜಾರದಲ್ಲಿ ಜನ ಹೊರಟರೆ ಧೋತಿ, ಕೋಟು, ಸೀರೆಗಳ ಮೆರವಣಿಗೆ ನಡೆ ಯುತ್ತಿತ್ತು. ಫ್ರೇಸರ್ ಟೌನ್ನಿಂದ ಬಸ ವನಗುಡಿವರೆಗೆ ಇದ್ದ ಸಾಂಸ್ಕೃತಿಕ ಭಿನ್ನತೆ ದೇಶ–ದೇಶಗಳ ನಡುವಿನ ಭಿನ್ನತೆಗಿಂತ ಹೆಚ್ಚಿತ್ತು. ಇತಿಹಾಸದ ಉದ್ದಕ್ಕೂ ಒಂದಾಗಲು ಹೆಣಗಾಡುತ್ತಲೇ, ಒಂ ದಾದಮೇಲೂ ಬೇರೆ ಅಸ್ತಿತ್ವವನ್ನು ಉಳಿಸಿ ಕೊಂಡು ಬಂದಿವೆ ನಗರದ ಈ ಪ್ರದೇಶಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.